Home ಧಾರ್ಮಿಕ ಸುದ್ದಿ ಎಣ್ಣೆಹೊಳೆ: ಹಂಚಿಕಟ್ಟೆ ಮಹಾಮ್ಮಾಯಿ ದೇವಸ್ಥಾನ ವರ್ಧಂತ್ಯುತ್ಸವ

ಎಣ್ಣೆಹೊಳೆ: ಹಂಚಿಕಟ್ಟೆ ಮಹಾಮ್ಮಾಯಿ ದೇವಸ್ಥಾನ ವರ್ಧಂತ್ಯುತ್ಸವ

1624
0
SHARE

ಅಜೆಕಾರು: ಶ್ರೀ ಮಹಾಮ್ಮಾಯಿ ದೇವಸ್ಥಾನ ಹಂಚಿಕಟ್ಟೆ ಎಣ್ಣೆಹೊಳೆ ಇದರ 26ನೇ ವರ್ಷದ ಭಜನಾ ಮಂಗಲೋತ್ಸವ ಮತ್ತು ಪ್ರತಿಷ್ಠಾ ವರ್ಧಂತ್ಯುತ್ಸವ ಜ.26ರಿಂದ ಜ.28ರವರೆಗೆ ನಡೆಯಲಿದೆ.

ಜ.26ರಂದು ಸಂಜೆಯಿಂದ ಜ.27ರ ಮುಂಜಾನೆವರೆಗೆ ಭಜನಾ ಮಂಗಲೋತ್ಸವ ನಡೆಯಲಿದೆ. ಜ.27ರಂದು ರಂಗಪೂಜೆ, ಸಂಜೆ 6.00ಕ್ಕೆ ಶ್ರೀ ಮಹಾಮ್ಮಾಯಿ ಭಜನಾ ಮಂಡಳಿಯ ರಜತ ಸಂಭ್ರಮದ ಸವಿನೆನಪಿಗಾಗಿ ನಿರ್ಮಿಸಿರುವ ರಂಗಮಂದಿರ ಉದ್ಘಾಟನೆ ನಡೆಯಲಿದೆ. ಸಂಜೆ 6.30ರಿಂದ ಧಾರ್ಮಿಕ ಸಭೆ ನಡೆಯಲಿದ್ದು ಶಾಸಕ ಸುನಿಲ್‌ ಕುಮಾರ್‌ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ರಾಜಾಪುರ ಸಾರಸ್ವತ ಸಂಘದ ಅಧ್ಯಕ್ಷರಾದ ಅಶೋಕ್‌ ನಾಯಕ್‌ ವಹಿಸಲಿದ್ದಾರೆ. ಸಾಹಿತಿ ಪ್ರಥ್ವಿರಾಜ್‌ ಹೆಗ್ಡೆ ಧಾರ್ಮಿಕ ಉಪನ್ಯಾಸ ನೀಡಲಿದ್ದು ಮುಖ್ಯ ಅತಿಥಿಗಳಾಗಿ ವಿಶ್ವನಾಥ ಶೆಟ್ಟಿ, ರಾಜೇಂದ್ರ ಶೆಟ್ಟಿ, ಸುಧಾಕರ್‌ ನಾಯ್ಕ, ಡಾ| ಸತೀಶ್‌ ಶೆಟ್ಟಿ ಭಾಗವಹಿಸಲಿದ್ದಾರೆ. ಈ ಸಂದರ್ಭ ಶ್ರೀ ಮಹಾಮ್ಮಾಯಿ ದೇವಸ್ಥಾನ ವತಿಯಿಂದ ದಿ| ಸುಧಾಕರ ಶೆಟ್ಟಿ ಸೇವಂತಿಗುಡ್ಡೆ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ನಡೆಯಲಿದೆ. ನಂತರ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 9.00ರಿಂದ ಸ್ವಸ್ತಿ ಶ್ರೀ ಕುಮಾರಿಯವರಿಂದ ಶ್ರೀಕೃಷ್ಣ ಲೀಲಾಮೃತಂ ಯಕ್ಷಗಾನ ನೃತ್ಯರೂಪಕ, ರಾತ್ರಿ 9.30ರಿಂದ ಅತಿಥಿ ಕಲಾವಿದರಿಂದ ಯಕ್ಷಗಾನ ಚಂದ್ರಾವಳಿ ವಿಲಾಸ ನಡೆಯಲಿದೆ.

ಜ.28ರಂದು ಕಲಶಾಭಿಷೇಕ ನಡೆದು ಸಾಯಂಕಾಲ ಗಂಟೆ 6.00ರಿಂದ ಶ್ರೀಮಹಾಮ್ಮಾಯಿ ಯಕ್ಷಗಾನ ಕಲಾಮಂಡಳಿ ಹಂಚಿಕಟ್ಟೆ ಇವರಿಂದ ಶಾಂಭವಿ ವಿಜಯ ಯಕ್ಷಗಾನ ನಡೆಯಲಿದೆ. ರಾತ್ರಿ 9.00ರಿಂದ ಗೋಂದ್ಲು ಸೇವೆ, ಮಾರಿ ನಡೆದು ರಾತ್ರಿ 10.30ರಿಂದ ಲಕುಮಿ ತಂಡದ ಕಲಾವಿದರಿಂದ ಮಂಗೆಮಲ್ಪೊಡ್ಚಿ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here