ಸುಬ್ರಹ್ಮಣ್ಯ : ಯೇನೆಕಲ್ಲಿನ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ ಮತ್ತು ಶ್ರೀ ಉಳ್ಳಾಕುಲು ಉಳ್ಳಾಲ್ತಿ, ಬಚ್ಚನಾಯಕ, ಕೋಟಿನಾಯಕ ದೈವಸ್ಥಾನದ ವಾರ್ಷಿಕ ನಡಾವಳಿ ಮಂಗಳವಾರ ಆರಂಭಗೊಂಡಿದೆ. ಶಂಖಪಾಲ ದೇವಸ್ಥಾನದಲ್ಲಿ ರಾತ್ರಿ ರಂಗಪೂಜೆ, ಭೂತಬಲಿ ಉತ್ಸವ, ವಸಂತ ಕಟ್ಟೆ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಬುಧವಾರ ಬೆಳಗ್ಗೆ ಮಹಾಗಣಪತಿ ಹೋಮ, ಕಲಶ ಪೂಜೆ, ದೇವರ ಬಲಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನೆರವೇರಿತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ ಬಾನಡ್ಕ, ಪ್ರಧಾನ ಕಾರ್ಯದರ್ಶಿ ವೆಂಕಟ್ರಮಣ ಕೇಂಬ್ರೋಳಿ, ಸದಸ್ಯರಾದ ಮಹೇಶ್ ನಾಳ, ಯಮುನಾ ಗುಂಡಗದ್ದೆ, ಮೀನಾಕ್ಷಿ ಉಡುದೋಳಿ, ಚಿದಾನಂದ ಬಾಲಾಡಿ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಾದ ಮನೋಹರ ನಾಳ, ಭವಾನಿಶಂಕರ ಪೂಂಬಾಡಿ, ಜೀರ್ಣೋದ್ಧಾರ ಸಮಿತಿಯ ವೆಂಕಟ್ರಾಜ್, ಊರ ಮಾಗಣೆಗೌಡ ಉದಯಕುಮಾರ ಬಾನಡ್ಕ, ವಿವಿಧ ಸಮಿತಿಗಳ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.
ಏ. 1ರಂದು ಬಚ್ಚನಾಯಕ ನೇಮ
ಮಾ. 29ರಂದು ಶ್ರೀ ಉಳ್ಳಾಕುಲು, ಉಳ್ಳಾಲ್ತಿ, ಬಚ್ಚನಾಯಕ ಕೋಟಿನಾಯಕ ದೈವಸ್ಥಾನಲದಲ್ಲಿ ಉಗ್ರಾಣ ತುಂಬಿಸುವುದು, ಮುಹೂರ್ತ ತೋರಣ ಬಳಿಕ ಉಳ್ಳಾಕುಲು, ಇತರ ದೈವಗಳ ನೇಮ ನಡೆಯಲಿದೆ. ಮಾ. 30ರಂದು ರಾತ್ರಿ ಉಡ್ಡೋತ್ತಾಯ ಕುಮಾರ ದೈವಗಳ ಭಂಡಾರ ಬಂದು ದೈವಗಳ ನೇಮ ನಡೆಯಲಿದೆ. ಏ. 1ರಂದು ಬೆಳಗ್ಗೆ ಬಚ್ಚನಾಯಕನ ದೈವದ ನೇಮವಿದೆ. ಬಳಿಕ ಕೋಟಿನಾಯಕ ದೈವದ ನೇಮ, ಪ್ರಧಾನಿ ದೈವದ ನೇಮ ನಡೆದು, ದೈವಗಳ ಭಂಡಾರ ಹೊರಡಲಿದೆ. ಏ. 2ರಂದು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವರ ಪ್ರತಿಷ್ಠಾ ದಿವಸ ನಡೆಯಲಿದೆ. ಮಧ್ಯಾಹ್ನ ವåಹಾಪೂಜೆ, ಪ್ರಸಾದ ವಿತರಣೆ ಅನ್ನ ಸಂತರ್ಪಣೆ, ರಾತ್ರಿ ರಂಗಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.