ಸುಬ್ರಹ್ಮಣ್ಯ : ಇತಿಹಾಸ ಪ್ರಸಿದ್ಧ ಹಾಗೂ ಮಹಿಮಾತ್ಮಕ ಶ್ರೀ ಬಚ್ಚನಾಯಕ ದೈವದ ನೇಮವು ಯೇನೆಕಲ್ಲು ಗ್ರಾಮದ ಕಾರಣಿಕ ಶ್ರೀ ಉಳ್ಳಾಕುಲು, ಉಳ್ಳಾಳ್ತಿ ಬಚ್ಚನಾಯಕ ದೈವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ನಡೆಯಿತು.
ಶ್ರದ್ಧಾ ಭಕ್ತಿಯಿಂದ ಕಾರಣಿಕ ದೈವದ ನೇಮ ನಡಾವಳಿ ನಡೆಯಿತು. ನೇಮಕ್ಕೆ ಆಗಮಿಸಿದ ಭಕ್ತರು ಬೆಳ್ಳಿ ಮೀಸೆ ಹಾಗೂ ಇತರ ರೂಪದ ಹರಕೆಗಳನ್ನು ಅರ್ಪಿಸಿದರು. ಇದೇ ವೇಳೆ ಕೋಟಿ ನಾಯಕ ದೈವದ ನೇಮ ಕೂಡ ನಡೆಯಿತು. ತುಳುನಾಡಿನಲ್ಲಿ ಕನ್ನಡ ಭಾಷೆಯಲ್ಲಿ ನುಡಿಗಟ್ಟು ಹೇಳುವುದು ಇಲ್ಲಿ ವಿಶೇಷತೆ.