ಕಾಪು, ಎ. 18 : ಮಹತೋಭಾರ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ವಾರ್ಷಿಕ ಮನ್ಮಹಾರಥೋತ್ಸವದ ಪ್ರಯುಕ್ತ ಎ. 14ರಂದು ಧ್ವಜಾರೋಹಣ ನೆರವೇರಿತು.
ದೇವಸ್ಥಾನದ ಪರ್ಯಾಯ ತಂತ್ರಿ ವೇ| ಮೂ| ಬೆಟ್ಟಿಗೆ ವೆಂಕಟರಾಜ ತಂತ್ರಿ ಅವರ ನೇತೃತ್ವದಲ್ಲಿ ಧ್ವಜಾರೋಹಣ ಪೂರ್ವಕ ಧಾರ್ಮಿಕ ವಿಧಿ ವಿಧಾನಗಳು ಜರಗಿದವು.
ಕ್ಷೇತ್ರದ ಪವಿತ್ರಪಾಣಿ ಕೆ. ಎಲ್. ಕುಂಡಂತಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೈ. ಪ್ರಫುಲ್ಲ ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ ಡಿ. ಶೆಟ್ಟಿ ಮಾಣಿಯೂರು ಬರ್ಪಾಣಿ, ನಿರಂಜನ್ ಶೆಟ್ಟಿ ಎಲ್ಲೂರು ಕಿನ್ಯೋಡಿಗುತ್ತು, ಜೆನ್ನಿ ನರಸಿಂಹ ಭಟ್ ಬೆಳಪು, ಸೋಮನಾಥ ಪೂಜಾರಿ ಸಾಂತೂರು, ಜಯಲಕ್ಷ್ಮೀ ಎಸ್. ಆಳ್ವ ಪಾದೂರುಗುತ್ತು, ವಿಜಯಲಶೇರಿಗಾರ ಬೆಳಪು, ಬಾಲಕೃಷ್ಣ ಪಣಿಯೂರು, ಅರ್ಚಕರಾದ ವೇ| ಮೂ| ವಿಷ್ಣುಮೂರ್ತಿ ಭಟ್ಟ, ವೇ| ಮೂ| ವೆಂಕಟೇಶ ಭಟ್ಟ, ವೇ| ಮೂ| ಶ್ರೀನಿವಾಸ ಭಟ್ಟ, ವೇ| ಮೂ| ಗುರುರಾಜ ಭಟ್ಟ, ಪ್ರಬಂಧಕ ರಾಘವೇಂದ್ರ ರಾವ್, ಅರ್ಚಕ ವೃಂದದವರು, ಗ್ರಾಮ ಸೀಮೆಯ ಭಗವದ್ಭಕ್ತರು ಉಪಸ್ಥಿತರಿದ್ದರು.