Home ಧಾರ್ಮಿಕ ಸುದ್ದಿ ಎಲ್ಲೂರು: ಬೊಲ್ಯೊಟ್ಟು ಆಲಡೆ ಆಯನೋತ್ಸವ, ಧ್ವಜಾರೋಹಣ

ಎಲ್ಲೂರು: ಬೊಲ್ಯೊಟ್ಟು ಆಲಡೆ ಆಯನೋತ್ಸವ, ಧ್ವಜಾರೋಹಣ

595
0
SHARE

ಪಡುಬಿದ್ರಿ: ಎಲ್ಲೂರು ಸೀಮೆಯ ಬೊಲ್ಲೊಟ್ಟು ಶ್ರೀ ಬ್ರಹ್ಮ ಲಿಂಗೇಶ್ವರ ದೇವಸ್ಥಾನದ ಆಲಡೆಯಲ್ಲಿ ಎ. 23ರಂದು ವರ್ಷಾವಧಿಆಯನೋತ್ಸವ ಪೂರ್ವಭಾವಿಯಾಗಿ ಧ್ವಜಾರೋಹಣ ಜರಗಿತು. ಆ ಪ್ರಯುಕ್ತ ತಂತ್ರಿಗಳಾದ ಹರೀಶ ಜೋಯಿಸ ನೇತೃತ್ವ ಹಾಗೂ ಅರ್ಚಕ ಬಾಲಕೃಷ್ಣ ಭಟ್ಟರ ಸಹಕಾರದಲ್ಲಿ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ದೇವ ನಾಂದಿ, ನವಕಲಶ, ಪ್ರಧಾನ ಯಾಗ, ಕಲಶಾಭಿಷೇಕ, ಮಹಾಗಣಪತಿ ಹೋಮ. ಪೀಠ ಪೂಜೆ, ಧ್ವಜಾರೋಹಣ, ಧ್ವಜಪೂಜೆ, ಅಜೆಕಾಯಿ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಿತು.

ಆಡಳಿತ ಮಂಡಳಿ ಗೌರವಾಧ್ಯಕ್ಷ ವೈ. ಪ್ರಪುಲ್ಲ ಶೆಟ್ಟಿ, ಆಡಳಿತ ಮೊಕ್ತೇಸರ ವೈ. ಯುವರಾಜ ಶೆಟ್ಟಿ, ಇತರ ಮೊಕ್ತೇಸರರು, ಪವಿತ್ರಪಾಣಿಗಳು, ದೇಗುಲದ ಸಿಬಂದಿ, ಸ್ಥಳವಂದಿಗರು, ಊರ ಪರವೂರ ಭಕ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here