Home ಧಾರ್ಮಿಕ ಸುದ್ದಿ ಎಡಮಂಗಲ ಶ್ರೀ ಪಂಚಲಿಂಗೇಶ್ವರ, ದುರ್ಗಾಪರಮೇಶ್ವರಿಗೆ ಬ್ರಹ್ಮಕಲಶ ಸಂಭ್ರಮ

ಎಡಮಂಗಲ ಶ್ರೀ ಪಂಚಲಿಂಗೇಶ್ವರ, ದುರ್ಗಾಪರಮೇಶ್ವರಿಗೆ ಬ್ರಹ್ಮಕಲಶ ಸಂಭ್ರಮ

1739
0
SHARE

ಸುಳ್ಯ ಫೆ. 20: ಎಡಮಂಗಲ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ದುರ್ಗಾ ಪರಮೆಶ್ವರಿ ಅಮ್ಮನವರ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು, ಮಾ. 18ರಿಂದ ಬ್ರಹ್ಮಕಲಶ ನಡೆಯಲಿದೆ.

ಅಕ್ಕಪಕ್ಕದಲ್ಲಿರುವ ಎರಡು ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳು ಏಕಕಾ ಲದಲ್ಲಿ ನಡೆಯುತ್ತಿದ್ದು, ಮಾ. 18ರಿಂದ 26ರ ತನಕ ಬ್ರಹ್ಮಕಲಶ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆ ಯಲಿವೆ. ಅನಂತರ ಎ. 1ರ ತನಕ ಜಾತ್ರೆ ನಡೆಯಲಿದೆ.

ಗರ್ಭಗುಡಿ, ಗಣಪತಿ ಗುಡಿ, ಶಾಸ್ತಾವು ಗುಡಿಗಳ ನಿರ್ಮಾಣ, ನಮಸ್ಕಾರ ಮಂಟಪ, ವಸಂತ ಮಂಟಪ, ಪ್ರಧಾನ ದೈವಗಳಾದ ಶಿರಾಡಿ ದೈವ, ಮಹಾಲಿಂಗರಾಯ ದೈವದ ಕಟ್ಟೆ, ಪುರುಷ ದೈವ, ರಕ್ತೇಶ್ವರಿ, ಪಂಜುರ್ಲಿ ದೈವಕಟ್ಟೆ, ಉಳ್ಳಾಕ್ಲು ಮಿತ್ತುನ್ನಾಯರ್‌ ಕಟ್ಟೆಗಳ ಜೀರ್ಣೋದ್ಧಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.

ಶ್ರಮದಾನ
ಪಟ್ಲದಮೂಲೆ, ಮದ್ದೂರು, ಮದೂರಡ್ಕ, ಪಂಜಿಮುಂಡ, ಪೊಟ್ರೆ, ಕಜೆತ್ತಡ್ಕ, ಬಳ್ಳಾಡಿ, ರಾಜಮಾರು, ಅರಗಿಣಿ, ಬದ್ದೂಕು, ಕೂಟಾಜೆ, ಪಾದೆ, ಕಲ್ಲೆಂಬಿ, ಬೋಳ, ನಡು ಮನೆ, ಪೊಂಜಕಟ್ಟ, ಮಾಲೆಂಗ್ರಿ, ಹೊನ್ನಪ್ಪಾಡಿ, ಶಾಂತಿಯಡ್ಕ, ಕೊಲಂಬೆ, ಗುರಿಕುಮೇರ್‌, ಖಂಡಿಗ, ಬಾಕಿಜಾಲು, ಪೊಯೆತ್ತೂರು, ಕಿನ್ಯಾಳ, ಕೊಠಾರ, ದೋಳ್ತಿಲ, ಪುಳಿ ಕುಕ್ಕು, ಫಲಗೇಣಿ, ಅರಸಮಾರು, ಗಿರಿಯ ಮಜಲು, ಕೊಡಂಗೆ, ಪರ್ಲ, ಬಳಕ್ಕಬೆ, ಮರೋಳಿ, ಜಾಲ್ತಾರು, ಅಜ್ಜಾರು, ಪುಚ್ಚಾಜೆ, ನಡುಮನೆ, ದೋಳ್ಪಾಡಿ, ಕಜೆ, ನಡುಬೈಲು, ಮಣಿಲ, ದಡ್ಡು, ದೇರಳ, ಅಳಕ್ಕೆ, ಮುಳಿಯ ರಥಬೀದಿ, ನೂಚಿಲ, ಕೇಂಜೂರು, ಗಂಡಿತ್ತಡ್ಕ, ಡೆಮ್ಮಯ್ಲ ಪ್ರದೇಶದ ಊರವರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನವೋದಯ ಸ್ವಸಹಾಯ ಸಂಘ, ಗುರುದೇವಾ ಗ್ರಾಮ ವಿಕಾಸ ಯೋಜನೆಯ ಸದಸ್ಯರು ಶ್ರಮದಾನದಲ್ಲಿ ತೊಡಗಿದ್ದಾರೆ.

ದೇವಸ್ಥಾನದ ಐತಿಹ್ಯ
1940ರಲ್ಲಿ ಪಂಚಲಿಂಗೇಶ್ವರ ದೇವರ ಗರ್ಭಗುಡಿ ಮತ್ತು ನಂದಿ ಮಂಟಪ ನವೀಕ ರಣಗೊಂಡು ಅಷ್ಟಬಂಧ ಬ್ರಹ್ಮಕಲಶ ನಡೆದಿತ್ತು. ಸುಂದರ, ವೈಭವಯುತ ದೇವ ಸ್ಥಾನದ ಸುತ್ತುಪೌಳಿಯ ಮುಳಿಹುಲ್ಲು ಹೊದಿಕೆ ನಿಧಾನವಾಗಿ ಸಡಿಲಗೊಳ್ಳುತ್ತ ಶಿಥಿ ಲಾವಸ್ಥೆಗೆ ತಲುಪಿತು. ಅನಂತರ 1983ರಲ್ಲಿ ಅಷ್ಟಬಂಧ ಬ್ರಹ್ಮಕಲಶ ನಡೆದಿತ್ತು. 2014ರಲ್ಲಿ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊ ಳ್ಳಲಾಯಿತು. ಶ್ರೀ ಪಂಚಲಿಂಗೇಶ್ವರ ದೇವಾ ಲಯವು ಪಾಂಡವರ ಕಾಲದಲ್ಲಿ ಪ್ರತಿಷ್ಠಾಪ ನೆಗೊಂಡಿತು ಎಂಬ ನಂಬಿಕೆ ಇದೆ. 12ನೇ ಶತಮಾನದಲ್ಲಿ ಬಾದಾಮಿ ಚಾಲುಕ್ಯರು ದೇವಾಲಯ ಅಭಿವೃದ್ಧಿ ಪಡಿಸಿದರು ಎಂಬ ಐತಿಹ್ಯವಿದೆ. ದೇವಸ್ಥಾನದ ಪ್ರಾಂಗ ಣದಲ್ಲಿರುವ ಶಿಲಾಶಾಸನಗಳು ಕ್ಷೇತ್ರದ ಇತಿಹಾಸ ತಿಳಿಯಲು ಸಹಕಾರಿ ಯಾಗಿವೆ. ಪ್ರತ್ಯೇಕ ಶಿಲಾಫಲಕಗಳ ಮೇಲೆ ಶಾಸನಗಳನ್ನು ಬರೆಯಲಾಗಿದ್ದರೂ ಒಂದೇ ಕಾಲಘಟ್ಟದಲ್ಲಿ ರಚಿತವಾಗಿವೆ. ಇವು 108 ಸೆ.ಮೀ. ಎತ್ತರ, 22 ಸೆ.ಮೀ. ಅಗಲದಲ್ಲಿದ್ದು, ಮಧ್ಯಯುಗದ ಕನ್ನಡ ಭಾಷೆ ಹಾಗೂ ಲಿಪಿಯಿಂದ ಕೂಡಿದೆ. ವಿಜಯನಗರ ಸಾರ್ವಭೌಮ ಇಮ್ಮಡಿ ದೇವರಾಯನ ಕಾಲದಲ್ಲಿ ರಚಿಸಲಾದ ಶಾಸನವನ್ನು ರಾಮರಸನು 1432ರಲ್ಲಿ ಕೆತ್ತಿಸಿದನು ಎಂದು ಪ್ರತಿಪಾದಿಸಲಾಗಿದೆ.

LEAVE A REPLY

Please enter your comment!
Please enter your name here