ಮಹಾನಗರ: ಯೆಯ್ನಾಡಿ ಐಟಿಐ ಬಳಿಯ ಶ್ರೀ ರಾಮ ಭಜನ ಮಂದಿರ ಜೀರ್ಣೋದ್ಧಾರ ಬಳಿಕ ಶ್ರೀ ರಾಮ ದೇವಸ್ಥಾನವನ್ನಾಗಿ ರೂಪುಗೊಳಿ ಸಲಾಗುತ್ತಿದ್ದು, ಜ. 25ರಂದು ಬೆಳಗ್ಗೆ 8.13ಕ್ಕೆ ಶಿಲಾನ್ಯಾಸ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗಣೇಶ್ ಎ. ಬಂಗೇರ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದೇರೆಬೈಲು ಬ್ರಹ್ಮಶ್ರೀ ವಿಟಲದಾಸ ತಂತ್ರಿ ಅವರ ಪೌರೋಹಿತ್ಯದಲ್ಲಿ, ವಾಸ್ತುಶಿಲ್ಪಿ ರಾಜ್ಕುಮಾರ್ ಮಾರ್ಗ ದರ್ಶನದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಜ. 25 ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಗಣ್ಯರ ಅನೇಕರು ಅತಿಥಿಗಳಾಗಿರುತ್ತಾರೆ.
ಧರ್ಮ ಚಿಂತನೆಯ ಆಶಯ ದೊಂದಿಗೆ 1926ರಲ್ಲಿ ಶ್ರೀರಾಮ ಭಜನ ಮಂದಿರ ಸ್ಥಾಪನೆಯಾಯಿತು. 1975ರಲ್ಲಿ ಪುನರ್ನವೀಕರಣಗೊಂಡಿತು. ಶ್ರೀರಾಮ ದೇವರು, ಸೀತಾಮಾತೆ, ಲಕ್ಷ್ಮಣ, ಹನುಮಂತ ದೇವರ ಮೂರ್ತಿ ಪ್ರತಿಷ್ಠೆಯೊಂದಿಗೆ ಇಲ್ಲಿ ಆರಾಧನೆ ಇದೆ. ಈಗ ಶ್ರೀರಾಮ ದೇವಸ್ಥಾನ ನಿರ್ಮಾಣವಾಗುತ್ತಿದೆ.
ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಪದ್ಮನಾಭ ಕೊಡಿಯಾಲಬೈಲ್, ಪ್ರ. ಕಾರ್ಯದರ್ಶಿ ಮಧುಚಂದ್ರ ಗುರುನಗರ, ಉಪಾಧ್ಯಕ್ಷ ತುಳಸೀದಾಸ್ ಉರ್ವ, ಪ್ರಚಾರ ಸಮಿತಿಗೆ ಪ್ರಮುಖ ಬಾಲಕೃಷ್ಣ ಯೆಯ್ನಾಡಿ ಉಪಸ್ಥಿತರಿದ್ದರು. ಅಷ್ಟಮಂಗಡ ಪ್ರಶ್ನೆಯ ಮೂಲಕ ದೊರೆತ ಚಿಂತನೆಯಂತೆ ಈ ಪ್ರಕ್ರಿಯೆ ಆರಂಭವಾಗಿದೆ.