Home ಧಾರ್ಮಿಕ ಸುದ್ದಿ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಯಾಗ-ಯಜ್ಞಾದಿ ಅಗತ್ಯ: ಒಡಿಯೂರು ಶ್ರೀ

ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಯಾಗ-ಯಜ್ಞಾದಿ ಅಗತ್ಯ: ಒಡಿಯೂರು ಶ್ರೀ

1374
0
SHARE

ವಿದ್ಯಾನಗರ : ಕಲ್ಲನ್ನು ಶಿಲ್ಪವಾಗಿಸುವ ಸಂಕಲ್ಪದೊಂದಿಗೆ ನಡೆಯುತ್ತಿರುವ ವಿಶ್ವಜಿತ್‌ ಅತಿರಾತ್ರ ಸೋಮಯಾಗದಿಂದ ಧರ್ಮ ಸಂಸ್ಕೃತಿಯ ಅನಾವರಣವಾಗಲಿದೆ. ಆರೋಗ್ಯ ಪೂರ್ಣ ಸಮಾಜದ ನಿರ್ಮಾಣಕ್ಕೆ ಈ ಕಾಲಘಟ್ಟದಲ್ಲಿ ಯಾಗ ಯಜ್ಞಾದಿಗಳು ನಡೆಯಬೇಕಾದ ಅಗತ್ಯವಿದೆ. ಆ ಪುಣ್ಯದ ಕೆಲಸ ಕೊಂಡೆವೂರಿನ ಪವಿತ್ರ ನೆಲದಲ್ಲಿ ಸಂಪನ್ನಗೊಳ್ಳುತ್ತಿದೆ ಎಂದು ಶ್ರೀಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ತಿಳಿಸಿದರು.

ಕಾಸರಗೋಡು ಜಿಲ್ಲೆ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯುತ್ತಿರುವ ವಿಶ್ವಜಿತ್‌ ಅತಿರಾತ್ರ ಸೋಮಯಾಗದ ಪ್ರಯುಕ್ತ ಬುಧವಾರ ನಡೆದ ಧರ್ಮಸಂದೇಶ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಮೂಡುಬಿದಿರೆ ಶ್ರೀಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಕೊಂಡೆವೂರು ಶ್ರೀಗಳು ಕಣ್ಣಿಗೆ ಕಾಣುವ ದೇವರೆನಿಸಿಕೊಂಡಿದ್ದಾರೆ. ಭಕ್ತರ ಹಿಂದೆ ಭಗವಂತ ಸದಾ ಇರುತ್ತಾನೆ. ಭಾರತ ಮತ್ತೆ ಜಗತ್ತಿನ ಗುರುವಾಗಿಸುವಲ್ಲಿ ಇಂತಹ ಪುಣ್ಯಕಾರ್ಯಗಳು ಕಾರಣವಾಗುತ್ತವೆ ಎಂದರು.

ಮಾಣಿಲ ಶ್ರೀಧಾಮದ ಶ್ರೀ ಮೋಹನ ದಾಸ ಪರಮಹಂಸ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ದಿವ್ಯ ಉಪಸ್ಥಿತರಿದ್ದರು. ಡಾ| ಜಯಪ್ರಕಾಶ್‌ ತೊಟ್ಟೆತ್ತೋಡು ಸ್ವಾಗತಿಸಿ, ದಿನಕರ ಹೊಸಂಗಡಿ ನಿರೂಪಿಸಿ, ವಂದಿಸಿದರು.

ಯತಿವರ್ಯರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಯಾಗಶಾಲೆಯಲ್ಲಿ ಸೂರ್ಯೋದಯಕ್ಕೆ ಸೋಮಪೂಜೆ, ಪ್ರಾಯಣೀಯೈಷ್ಟಿ, ಸೋಮಕ್ರಯ, ಸೂಮರಾಜಾತಿಥ್ಯ,
ಅತಿಥ್ಯೆಷ್ಟಿ, ಪ್ರವರ್ಗ್ಯ, ಉಪಸತ್‌, ಸುಬ್ರಹ್ಮಣ್ಯಾಹ್ವಾನ, ಅಪರಾಹ್ನ ಪ್ರವರ್ಗ್ಯ, ಉಪಸತ್‌, ಸುಬ್ರಹ್ಮಣ್ಯಾಹ್ವಾನ ಹಾಗೂ ಪಯೋವ್ರತ ಜರಗಿತು.

ಇಂದಿನ ಕಾರ್ಯಕ್ರಮ ಬೆಳಗ್ಗೆ 5ರಿಂದ 11ರ ವರೆಗೆ ಪುಣ್ಯಾಹ, ಗಣಪತಿ ಯಾಗ. 7.50ಕ್ಕೆ ಪುನಃ ಪ್ರತಿಷ್ಠಾ ಅಷ್ಠಬಂಧ, ತತ್ವ ಹೋಮ, ಬೆಳಗ್ಗೆ ಶ್ರೀ ವಿಖ್ಯಾತನಂದ ಸ್ವಾಮೀಜಿ ಬಲೊಟ್ಟು ಕಾರ್ಕಳ ಹಾಗೂ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಬಾಳೆಕೋಡು ಅವರು ಅನುಗ್ರಹ ಸಂದೇಶ ನೀಡುವರು.

12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 5ರಿಂದ ರಾತ್ರಿ 7.30ವರೆಗೆ 108 ಕಲಶಾ ವಾಸ, ಅವಾಸ ಹೋಮ, ದುರ್ಗಾ ನಮಸ್ಕಾರ ಪೂಜೆ ಜರಗಲಿದೆ.

ಧಾರ್ಮಿಕ ಸಭೆ
ಬೆಳಗ್ಗೆ 9ಕ್ಕೆ ಪ್ರವರ್ಗ್ಯ, ಉಪಸತ್‌, ಸುಬ್ರಹ್ಮಣ್ಯಾಹ್ವಾನ, ವೇದಿ ನಿರ್ಮಾಣ, ಯೂಪಕರ್ಮ, ಚಯನಕರ್ಮ, ಅಪರಾಹ್ನ ಪಯೋವ್ರತ, ಪ್ರವರ್ಗ್ಯ, ಉಪಸತ್‌, ಸುಬ್ರಹ್ಮಣ್ಯಾಹ್ವಾನ, ಮಂತ್ರಶೇನ, ರಾತ್ರಿ 7.30ಕ್ಕೆ ಗಾಯತ್ರಿ ಮಂಟಪದಲ್ಲಿ ಧಾರ್ಮಿಕ ಸಭೆ ನಡೆಯಲಿದೆ.

ಯಾಗ ಮುನ್ನುಡಿ ನಿತ್ಯಾನಂದ ಮಹಾರಾಜ್‌ ಅವರ ಅನುಗ್ರಹದಿಂದ ಕೊಂಡೆವೂರು ಆಶ್ರಮದಲ್ಲಿ ಗುರುಪರಂಪರೆಯ ದೃಷ್ಟಿಯಿಂದ ಎಲ್ಲವೂ ಸಾಕಾರವಾಗುತ್ತಿದ್ದು, ರಾಷ್ಟ್ರಕಟ್ಟುವ ಮಹಾನ್‌ ಕೆಲಸಕ್ಕೆ ಈ ಯಾಗವು ಮುನ್ನುಡಿಯಾಗಲಿದೆ. ಶ್ರೇಯಸ್ಸಿನ ಹಾದಿಯಲ್ಲಿ ಉತ್ತಮ ಚಿಂತನೆಗಳೊಂದಿಗೆ, ಉನ್ನತವಾದ ಆಯ್ಕೆಗಳೊಂದಿಗೆ ಮುನ್ನಡೆಯಬೇಕು.
 -ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀಕ್ಷೇತ್ರ ಒಡಿಯೂರು

LEAVE A REPLY

Please enter your comment!
Please enter your name here