Home ಧಾರ್ಮಿಕ ಕ್ಷೇತ್ರಗಳು ಚಳಿಗಾಲ, ಬೇಸಗೆ ಕಾಲದ ಜೋಡಿ ಇಗರ್ಜಿ! ಏನಿದರ ವಿಶೇಷತೆ?

ಚಳಿಗಾಲ, ಬೇಸಗೆ ಕಾಲದ ಜೋಡಿ ಇಗರ್ಜಿ! ಏನಿದರ ವಿಶೇಷತೆ?

3692
0
SHARE

ಒಂದು ಬೇಸಗೆ ಕಾಲದ ಪ್ರಾರ್ಥನೆಗೆ. ಇನ್ನೊಂದು ಚಳಿಗಾಲದಲ್ಲಿ ಮಾತ್ರ ಬಳಕೆಗೆ. ಈ ಜೋಡಿ ಇಗರ್ಜಿಗಳು ಪೂರ್ಣವಾಗಿ ಮರದಿಂದಲೇ ನಿರ್ಮಾಣವಾಗಿವೆ. ಒಂದೇ ಒಂದು ತುಂಡು ಲೋಹವನ್ನೂ ಬಳಸಿಲ್ಲ. ನೆಲಗಟ್ಟು, ಗೋಡೆ, ಛಾವಣಿ ಎಲ್ಲವೂ ಮರದಿಂದಲೇ ಸೃಷ್ಟಿಯಾಗಿವೆ. ಇದರ ಜೀವಿತಾವಧಿ ಮೂರು ಶತಮಾನ ದಾಟಿದೆ. ಆದರೂ ಹೊಸತನದ ಕಳೆಯಿಂದಲೇ ಪ್ರವಾಸಿಗರನ್ನು ಸ್ವಾಗತಿಸುತ್ತದೆ.ಇಂತಹ ಅಪರೂಪದ ದಾರು ಕಟ್ಟಡವನ್ನು 1990ರಲ್ಲಿ ‘ಯುನೆಸ್ಕೋ’ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಿ ಸುರಕ್ಷಿತವಾಗಿ ಕೌಶಲಕ್ಕೆ ಇದೊಂದು ಜೀವಂತ ಸಾಕ್ಷ್ಯ.

ಇಂಥ ಅಪೂರ್ವ ಇಗರ್ಜಿಗಳಿರುವುದು ರಷ್ಯಾ ದೇಶದ ಕರಾಲಿಯಾದ ಕಿಷಿ ದ್ವೀಪದಲ್ಲಿ. ಅಲ್ಲಿ ಮರದಿಂದಲೇ ನಿರ್ಮಾಣವಾದ ಶತಮಾನಗಳ ಹಿಂದಿನ ಹಲವು ಐತಿಹಾಸಿಕ ಕಟ್ಟಡಗಳಿರುವುದರಿಂದ ಇದೊಂದು ರಾಷ್ಟ್ರೀಯ ಮುಕ್ತ ವಸ್ತು ಸಂಗ್ರಹಾಲಯವಾಗಿ ರೂಪುಗೊಂಡಿದೆ. ಒನೇಗಾ ಸರೋವರದ ದಡದಲ್ಲಿರುವ ಪೊಗೋಸ್ಟ್ ಅಂದರೆ ಸ್ಮಶಾನ ಸಹಿತವಾದ ಜೋಡಿ ಇಗರ್ಜಿಗಳು ಈ ಸಾಲಿಗೆ ಸೇರುತ್ತವೆ. ಇಂಥ ನಿರ್ಮಾಣಗಳಿಗೆ ರಷ್ಯಾ ಈ ದ್ವೀಪವನ್ನೇ ಸುರಕ್ಷತೆಯ ದೃಷ್ಟಿಯಿಂದ ಆರಿಸಿಕೊಂಡಿತು. ಅದು ಮೂರು ಶತಮಾನಗಳ ಹಿಂದೆ ನೆರೆಹೊರೆಯ ರಾಷ್ಟ್ರಗಳೊಂದಿಗೆ ರಷ್ಯಾ ಸಂಘರ್ಷವನ್ನು ಎದುರಿಸುತ್ತಿತ್ತು. ಪೋಲಂಡ್ ಮತ್ತು ಸ್ವೀಡನ್ ಗಳು ಆಗಾಗ ದಾಳಿ ಮಾಡುತ್ತಿದ್ದವು. ಹೀಗಾಗಿ ಇಲ್ಲಿ ಇಗರ್ಜಿಗಳ ರಚನೆ ನಡೆಯಿತೆಂದು ದಾಖಲೆಗಳು ಹೇಳುತ್ತವೆ.

ಬೇಸಗೆ ಇಗರ್ಜಿ 120 ಅಡಿ ಎತ್ತರವಾಗಿದೆ. ಚಳಿಗಾಲದ ಇಗರ್ಜಿಯ 105 ಅಡಿ ಎತ್ತರವಿದೆ. ಮರದಿಂದ ನಿರ್ಮಾಣವಾದ ಬಹು ಮಹಡಿಗಳ ಕಟ್ಟಡಗಳಲ್ಲಿ ಇಷ್ಟು ಎತ್ತರವಾದುದು ಬೇರೆಡೆ ಇಲ್ಲ ಎಂಬ ಹೆಗ್ಗಳಿಕೆಯನ್ನೂ ಇವು ಗಳಿಸಿಕೊಂಡಿವೆ. ಬೇಸಗೆಯ ಇಗರ್ಜಿಯಲ್ಲಿ ಚಳಿಗಾಲದಲ್ಲಿ ಮೈ ಮರಗಟ್ಟುವ ಶೈತ್ಯವಿರುವ ಕಾರಣ ಅಕ್ಟೋಬರ್ ನಿಂದ ಈಸ್ಟರ್ ಹಬ್ಬದವರೆಗೆ ಪ್ರಾರ್ಥನೆ ಮಾಡಲು ಬೆಚ್ಚಗಿರುವ ಚಳಿಗಾಲದ ಇಗರ್ಜಿಯನ್ನು ಉಪಯೋಗಿಸಿದ್ದಾರೆ.

ಈ ಇಗರ್ಜಿಗಳು ರಚನೆಗೆ ಯಾವ ಜಾತಿಯ ಮರಗಳನ್ನು ಬಳಸಿದರೋ ತಿಳಿಯದು. ಮಳೆ, ಬಿಸಿಲುಗಳ ಪ್ರಭಾವದಿಂದ ಅದು ಕೊಂಚವೂ ಶಿಥಿಲವಾಗಿಲ್ಲ.
ಲೋಹದ ಮೊಳೆಗಳನ್ನು ಉಪಯೋಗ ಮಾಡದೆ ಮರದ ಕೀಲು ಮತ್ತು ಜೋಡಣೆಯ ತಂತ್ರಗಳನ್ನು ಬಳಸಿಕೊಂಡ ಆ ಕಾಲದ ಬಡಗಿಗಳ ಕೌಶಲವನ್ನು ಎಷ್ಡು ಹೊಗಳಿದರೂ ಕಡಿಮೆಯೇ. 1694ರಲ್ಲಿ ಇಗರ್ಜಿಯ ಕೆಲಸ ಪೂರ್ಣಗೊಂಡಾಗ ಅದರ ಶಿಖರದಲ್ಲಿ ಈರುಳ್ಳಿಯಾಕೃತಿಯ ಒಂದು ಗುಮ್ಮಟ ಮಾತ್ರ ಇತ್ತು. 1720-49ರ ಅವಧಿಯಲ್ಲಿ 11 ಗುಮ್ಮಟಗಳನ್ನು ಜೋಡಿಸಲಾಯಿತು. 1764ರ ಹೊತ್ತಿಗೆ ಚಳಿಗಾಲದ ಇಗರ್ಜಿಗೆ ಒಂಬತ್ತು ಗುಮ್ಮಟಗಳನ್ನು ಜೋಡಿಸುವ ಕೆಲಸ ನಡೆಯಿತು.

ಇಗರ್ಜಿಗಳು ಬೆಟ್ಟದ ಮೇಲಿವೆ. ದೊಡ್ಡದು 29 ಮೀಟರ್ ಉದ್ದದ, 20 ಮೀಟರ್ ಅಗಲವಾಗಿದೆ. ಒಳಗೆ ಭೋಜನ ಶಾಲೆ, ಬಲಿಪೀಠ ಇತ್ಯಾದಿಗಳಿವೆ. ಮಳೆಗಾಲದಲ್ಲಿ ಹನಿ ನೀರು ಕೂಡ ಒಳಗೆ ಸೋರದಂತೆ ಛಾವಣಿಯ ಮುಚ್ಚಿಗೆಗೆ ಅಂಟಿನ ಲೇಪನ ಮಾಡಿದ್ದಾರೆ. ಒಮ್ಮೆ ಇದು ಸಿಡಿಲಿನ ಆಘಾತದಿಂದ ಭಾಗಶಃ ಕೆಟ್ಟುಹೋಗಿತ್ತು. ಹತ್ತೊಂಬತ್ತನೆಯ ಶತಮಾನದಲ್ಲಿ ಕೆಟ್ಟುಹೋದ ಭಾಗಗಳನ್ನು ತೆಗೆದು ಹೊಸದಾದ ಭಾಗಗಳನ್ನು ನುರಿತ ಬಡಗಿಗಳಿಂದ ಜೋಡಿಸುವ ಕಾರ್ಯ ನಡೆಯಿತು. 1958ರಲ್ಲಿ ಮತ್ತೊಮ್ಮೆ ಕಾಯಕಲ್ಪ ನಡೆದಿದೆ.

1864ರಲ್ಲಿ ಅಷ್ಟಭುಜಾಕಾರದ ಘಂಟೆ ಗೋಪುರವನ್ನೂ ನಿರ್ಮಿಸಲಾಗಿದೆ. ಸುಮಾರಾಗಿ ಪಿರಮಿಡ್ ಆಕಾರವನ್ನು ಹೋಲುವ ಇಗರ್ಜಿಯ ಒಳಗೆ ಮಹಡಿಯನ್ನೇರಲು ಕೂಡ ಮೆಟ್ಟಿಲುಗಳನ್ನು ಮರದಿಂದಲೇ ತಯಾರಿಸಿದ್ದಾರೆ. ಒಳಗಿರುವ ವರ್ಣಚಿತ್ರಗಳು, ಪ್ರತಿಮೆಗಳು ಬಲು ಸುಂದರವಾಗಿವೆ.

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here