Home ಧಾರ್ಮಿಕ ಸುದ್ದಿ 12ವರ್ಷ ಗುರುವಾಯೂರು ಕೃಷ್ಣನ ಮೂರ್ತಿ ಗುಪ್ತವಾಗಿ ಇರಿಸಿದ್ದೇಕೆ?

12ವರ್ಷ ಗುರುವಾಯೂರು ಕೃಷ್ಣನ ಮೂರ್ತಿ ಗುಪ್ತವಾಗಿ ಇರಿಸಿದ್ದೇಕೆ?

1377
0
SHARE

‘ದಕ್ಷಿಣದ ದ್ವಾರಕೆ’ ಎಂದು ಹೆಸರಾಗಿರುವ ಅಂಬಳಪುಳ ಕ್ಷೇತ್ರ 12-15ನೆಯ ಶತಮಾನದ ಕಾಲಾವಧಿಗೆ ಸೇರಿದೆ. ಚೆಂಬಕಶ್ಶೇರಿ ಪೂರಾಡಮ್ ತಿರುನಾಳ್ ಕಟ್ಟಿಸಿದ ಪಾರ್ಥಸಾರಥಿಯನ್ನು ಪ್ರತಿಷ್ಟಾಪಿಸಿದ್ದರು. 1789ರಲ್ಲಿ ಟಿಪ್ಪುವಿನ ಆಕ್ರಮಣಕ್ಕೆ ಹೆದರಿ ಗುರುವಾಯೂರು ಶ್ರೀಕೃಷ್ಣನ ಮೂರ್ತಿಯನ್ನು ಈ ಕ್ಷೇತ್ರದಲ್ಲಿ ಗುಪ್ತವಾಗಿ ಇರಿಸಲಾಗಿತ್ತು.

ಸುಮಾರು 12 ವರ್ಷಗಳ ಕಾಲ ಈ ಕ್ಷೇತ್ರದ ಹೊರಭಾಗದ ಪುಟ್ಟ ಗುಡಿಯಲ್ಲಿ ಗುರುವಾಯೂರು ಕೃಷ್ಣ ಅಡಗಿ ಕುಳಿತಿದ್ದ. ಆ ವೇಳೆ ಈ ಕ್ಷೇತ್ರದ ನೈವೇದ್ಯ ಹಾಲು ಪಾಯಸ ಅತಿಥಿ ಕೃಷ್ಣನಿಗೂ ನೈವೇದ್ಯವಾಗುತ್ತಿತ್ತು. ಇಂದಿಗೂ ಗುರುವಾಯೂರು ಶ್ರೀ ಕೃಷ್ಣ ಈ ನೈವೇದ್ಯ ಸೇವಿಸಲು ಮಧ್ಯಾಹ್ನದ ವೇಳೆಗೆ ಅಂಬಳಪುಳ ಕ್ಷೇತ್ರಕ್ಕೆ ಬರುತ್ತಾನೆ ಅನ್ನುವ ನಂಬಿಕೆ ಇದೆ.
ಈ ನೈವೇದ್ಯ ಸೇವಿಸಿದ ಬಳಿಕವೇ ಆತನಿಗೆ ಗುರುವಾಯೂರು ಕ್ಷೇತ್ರದಲ್ಲಿ ಪೂಜೆ. ಗುರುವಾಯೂರು ಕೃಷ್ಣ ಇದ್ದ ಗುಡಿ ಈಗಲೂ ಇಲ್ಲಿದೆ.

LEAVE A REPLY

Please enter your comment!
Please enter your name here