Home ನಂಬಿಕೆ ಸುತ್ತಮುತ್ತ ದೇವರು ಎಲ್ಲಿ ಇದ್ದಾನೆ..?

ದೇವರು ಎಲ್ಲಿ ಇದ್ದಾನೆ..?

4381
1
SHARE

ಒಬ್ಬನಿಗೆ “ದೇವರು ಎಲ್ಲಿದ್ದಾನೆ?” ಎಂಬ ಪ್ರಶ್ನೆ ಬಹುವಾಗಿ ಕಾಡಿತಂತೆ. ಕಂಡಕಂಡವರಲ್ಲಿ ಕೇಳುತ್ತ ಹೋದನಂತೆ. ಎಲ್ಲರೂ ಅವರವರ ತಿಳುವಳಿಕೆಗೆ ತಕ್ಕಂತೆ ಉತ್ತರವನ್ನು ಕೊಟ್ಟರು. ಆದರೆ ಆತನಿಗೆ ಆ ಉತ್ತರದಿಂದ ತೃಪ್ತಿಯಾಗಲೇ ಇಲ್ಲ. ಇನ್ನೂ ಉತ್ತರವನ್ನು ಹುಡುಕುತ್ತಲೇ ಹೋದ. ದೇವಾಲಯಗಳಲ್ಲೂ ಆತನಿಗೆ ದೇವರು ಕಾಣಸಿಗಲೇ ಇಲ್ಲ. ಇಲ್ಲ “ಎಲ್ಲೂ ದೇವರಿಲ್ಲ” ಎಂದು ಕೊಳ್ಳುತ್ತಿರುವಾಗಲೇ ಸಂತನ ರೂಪದಲ್ಲಿದ್ದ ತೀರಾ ಮುದುಕನೊಬ್ಬ ಎದುರಾದ. ಆತನಲ್ಲಿಯೂ “ದೇವರೆಲ್ಲಿದ್ದಾನೆ ?” ಎಂದು ವಿಚಾರಿಸಿದ. ಅದಕ್ಕೆ ಉತ್ತರವಾಗಿ ಆ ಸಂತ ತಾನು ನಿನಗೆ ದೇವರನ್ನು ತೋರಿಸುವುದಾಗಿ ಒಂದು ಕಾಡಿಗೆ ಕರೆದುಕೊಂಡು ಹೋದ.
ಆ ಸಂತ ಒಂದೆಡೆ ನಿಂತು “ಛೆ!” ಎಂದು ಉದ್ಗರಿಸಿದ. “ಯಾಕೆ ಏನಾಯ್ತು? ದೇವರು ಎಲ್ಲಿಯೂ ಇಲ್ಲ ಅಲ್ಲವೇ? ಎಂದು ಈತ ಅಣುಕಿಸುವಂತೆ ನುಡಿದ. “ಇಲ್ಲ ಇಲ್ಲಿಯೇ ಇದ್ದ, ಆದರೆ ನೀನು ಬರುತ್ತಿರುವಂತೆ ಕಾಣಿಸದಾಗಿಬಿಟ್ಟ!” ಎಂದ. ಅದಕ್ಕೆ ಕೋಪಗೊಂಡ ಈತ “ನನ್ನನ್ನೇ ತಪ್ಪಿತಸ್ಥನನ್ನಾಗಿ ಮಾಡುತ್ತಿರುವಿರೇನು? ನನ್ನ ಕಂಡೊಡನೆ ಮಾಯವಾಗಲು ದೇವರಿಗೇನಾಗಿದೆ. ನನಗೆ ಇವತ್ತು ದೇವರೆಲ್ಲಿರುವನೆಂದು ನೀವು ತೋರಿಸಲೇ ಬೇಕು.” ಎಂದ.

ಆ ಸಂತ “ಖಂಡಿತವಾಗಿಯೂ ತೋರಿಸುತ್ತೇನೆ” ಎನ್ನುತ್ತ ಮುಂದೆ ನಡೆದ. ಮುಂದೆ ಹೋಗುತ್ತಿದ್ದಂತೆ ವಿಷದ ಹಾವೊಂದು ಆ ಸಂತನನ್ನು ಕಚ್ಚಲು ಮುಂದಾಗಿದ್ದನ್ನು ಈತ ನೋಡಿದ. ಮತ್ತು ಕೂಡಲೆ ಅದನ್ನು ಹಿಡಿದು ದೂರ ಬಿಸಾಡಿಬಿಟ್ಟ. ಸಂತ ಈಗ ನಸುನಗುತ್ತ ಕೇಳಿದ “ಈಗ ತಿಳಿಯಿತೇ ದೇವರೆಲ್ಲಿದ್ದಾನೆಂಬುದು?” ಈತನಿಗ ಸಂತನ ಮಾತು ಅರ್ಥವಾಗಲಿಲ್ಲ. “ಇಲ್ಲ, ದೇವರನ್ನು ನಾನು ಕಾಣಲೇ ಇಲ್ಲ! ಹೇಗೆ ತಿಳಿಯುತ್ತದೆ ನನಗೆ?” ಎಂದ.
“ದೇವರ ನಿನ್ನಲ್ಲಿಯೇ ಇದ್ದಾನೆ.”

“ಅಂದರೆ!?”
“ವಿಷದ ಹಾವಿನಿಂದ ನನ್ನನ್ನು ರಕ್ಷಿಸಿದ ಆ ಕ್ಷಣ ನೀನು ದೇವರಾಗಿದ್ದೆ.”
“ಅದು ನಾನು ಮಾಡಬೇಕಾದ ಕರ್ತವ್ಯವಾಗಿತ್ತು. ನಿಮ್ಮನ್ನು ಕಾಪಾಡಿದೆ ಅಷ್ಟೆ. ಅದರಲ್ಲಿ ದೇವರು ಹೇಗೆ ಕಂಡ.” ಎಂದ ಈತ ನಗುತ್ತ.
“ನಿನ್ನಲ್ಲಿದ್ದ ದೇವರೇ ನನ್ನನ್ನು ಕಾಪಾಡಿದ್ದು.”
“ನೀವು ನನ್ನ ಪ್ರಶ್ನೆಯ ಹಾದಿ ತಪ್ಪಿಸುತ್ತಿದ್ದರಿ ಅಷ್ಟೆ. ನನ್ನ ಮನಸ್ಸು ನಿಮ್ಮನ್ನು ಕಾಪಾಡು ಎಂದಿತು. ಆ ಕ್ಷಣಕ್ಕೆ ನಾನು ಆ ಹಾವನ್ನು ಹಿಡಿದು ಎಸೆದೆ. ಅದರಲ್ಲಿ ದೇವರ ಪಾತ್ರವೇನಿದೆ?”
“ನಿನ್ನ ಮನಸ್ಸು ಹೇಳಿತು, ಸರಿ. ನಾನೂ ಒಪ್ಪಿಕೊಳ್ಳುತ್ತೇನೆ. ಆದರೆ ಆ ಮನಸ್ಸು ಹಾಗೆ ಹೇಳುವಂತೆ ಮಾಡಿದ್ದಾದರೂ ಯಾವುದು?”
“ಇಲ್ಲ, ಈ ತರ್ಕವನ್ನು ನಾನು ಒಪ್ಪುವುದಿಲ್ಲ.”
“ಸರಿ. ಹಾಗಾದರೆ ನೀನು ಆ ಹಾವನ್ನು ಹಿಡಿದ ಕ್ಷಣ ನಿನ್ನನ್ನು ಕಚ್ಚಬಹುದೆಂಬ ಯೋಚನೆ ನಿನಗೇಕೆ ಬರಲಿಲ್ಲ? ನಿನ್ನ ಮನಸ್ಸಿಗೆ ತಿಳಿಯಲಿಲ್ಲವೇ?”

ಈಗ ಈತನಿಗೆ ಸಂತನ ಮಾತು ಅರ್ಥವಾಯಿತು.
“ನೋಡು, ದೇವರು ಎಲ್ಲೆಲ್ಲಿಯೂ ಇದ್ದಾನೆ. ಅದರಲ್ಲೂ ಮುಖ್ಯವಾಗಿ ನಮ್ಮಲ್ಲಿಯೇ ಇದ್ದಾನೆ. ನಿನಗೆ ನನ್ನನ್ನು ಕಾಪಾಡುವ ಮನಸ್ಸು ಮತ್ತು ಶಕ್ತಿಯನ್ನು ಕೊಟ್ಟಿದ್ದೇ ಆ ದೇವರು. ಹಾಗಾಗಿ ನಾವು ದೇವರನ್ನು ಪೂಜಿಸಬೇಕು. ಈ ಪೂಜೆಗೆ ದೇವರಮೂರ್ತಿ ಒಂದು ಕಣ್ಣಿಗೆ ಕಾಣುವ ಆಕಾರ. ಆದರೆ ಪೂಜೆ ಎಂಬುದು ಮನಸ್ಸನ್ನು ಕಲ್ಮಶಗಳಿಲ್ಲದೆ ಶುದ್ಧವಾಗಿಡುವ ಒಂದು ಸರಳವಿಧಾನ. ಹಾಗಾಗಿ ಮನಸ್ಸು ಶುದ್ಧವಾದಂತೆ ಎಲ್ಲರಲ್ಲಿಯೂ ದೈವತ್ತ್ವ ಹೆಚ್ಚುತ್ತದೆ. ಇದರಿಂದ ಒಳ್ಳೆಯ ಜಗತ್ತು  ಆನಂದಮಯ ಬದುಕು ಸಾಧ್ಯವಾಗುತ್ತದೆ.” ಎಂದ.

ಈತನ ಪ್ರಶ್ನೆಗೆ ಉತ್ತರಸಿಕ್ಕಿತು. ಆ ಸಂತನೇ ದೇವರಂತೆ ಕಂಡ. ಕರಜೋಡಿಸಿ ನಮಸ್ಕರಿಸಿದ. ಈತನಿಗೆ ಆಶೀರ್ವದಿಸಿ ಸಂತ ಹೊರಟುಹೋದ.

ಎಲ್ಲಿದ್ದಾನೆ ದೇವರು?:ದೇವರು ನಮ್ಮಲ್ಲಿಯೇ ಇದ್ದಾನೆ ಎಂಬದು ಸತ್ಯವಾದ ಮಾತು. ಅದಕ್ಕೆ ತಕ್ಕಂತೆ ನಮ್ಮ ನಡೆನುಡಿಗಳನ್ನು ರೂಢಿಸಿಕೊಂಡಾಗ ಸದ್ ಜ್ಯೋತಿಯಿಂದ ಜಗತ್ತು ಬೆಳಗುವುದರಲ್ಲಿ ಸಂಶಯವಿಲ್ಲ.

||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳವಾಗಿ ಜೀವಿಸಿ||
ವಿಷ್ಣು ಭಟ್ಟ ಹೊಸ್ಮನೆ.

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

1 COMMENT

  1. Devaru embuvudu srushti maaduvavanu endaadare, ee kathege mooru kaasina beleyilla…ondu wanna makkalige bareda katheyantide….adaralloo neevu torisida vismaya jagattina srushtikartanige havannu esedavanige holisuvudu moodha nambikeya paramaavadhi…
    Nimma ee ankanada hesarannu badalaayisi .

LEAVE A REPLY

Please enter your comment!
Please enter your name here