Home ಧಾರ್ಮಿಕ ಸುದ್ದಿ “ಗೋವು, ತುಳಸಿ ಇದ್ದಲ್ಲಿ ದೇವ ಸಾನ್ನಿಧ್ಯ ನಿಶ್ಚಿತ’

“ಗೋವು, ತುಳಸಿ ಇದ್ದಲ್ಲಿ ದೇವ ಸಾನ್ನಿಧ್ಯ ನಿಶ್ಚಿತ’

1521
0
SHARE

ಮಹಾನಗರ: ಗೋವುಗಳು ಮತ್ತು ತುಳಸಿ ಭಗವಂತನಿಗೆ ಪ್ರಿಯವಾದುದು. ಇವುಗಳಿಲ್ಲದೆ ದೇವತಾ ಪೂಜೆಗಳಿಲ್ಲ. ಮನುಷ್ಯನ ಆರೋಗ್ಯದ ದೃಷ್ಟಿಯಿಂದಲೂ ಇವುಗಳೆಡೂ ಪ್ರಾಮುಖ್ಯವಾಗಿವೆ ಎಂದು ವಿಶ್ವ ಹಿಂದೂ ಪರಿಷತ್‌ ಪ್ರಮುಖರಾದ ಪ್ರೊ| ಎಂ.ಬಿ. ಪುರಾಣಿಕ್‌ ತಿಳಿಸಿದರು.

ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಸಾಮೂಹಿಕ ತುಳಸಿ ಪೂಜೆ ಹಾಗೂ ತುಳಸಿ ದಾಮೋದರ ಕಲ್ಯಾಣ ಮಹೋತ್ಸವದ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ದೀಪಾವಳಿ ಕಾರ್ತಿಕ ಮಾಸ ಪಾಡ್ಯದಿಂದ ಉತ್ತಾನ ದ್ವಾದಶೀ (ತುಳಸಿ ಪೂಜೆ) ವರೆಗೆ ಶ್ರೀ ಕ್ಷೇತ್ರದಲ್ಲಿ ರಾತ್ರಿ ಮಹಾ ಪೂಜೆಯ ಬಳಿಕ ತುಳಸಿ ನಾಮಸಂಕೀರ್ತನೆ ನಡೆದು ಸಮಾಪನ ಗೊಂಡಿತು.

ಈ ವೇಳೆ ಆಡಳಿತ ಮೊಕ್ತೇಸರ ಕೆ.ಸಿ. ನಾೖಕ್‌, ಸಗುಣಾ ನಾೖಕ್‌, ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಭಾಕರ್‌ ಜಿ.ಎಸ್‌., ನ್ಯಾಯವಾದಿ ಪುರುಷೋತ್ತಮ ಭಟ್‌, ವಿಶ್ವನಾಥ ಭಟ್‌, ಎ.ಟಿ. ಗಿರೀಶ್ಚಂದ್ರ, ರಾಧಾಕೃಷ್ಣ ಭಟ್‌ ಮುಂತಾದವರು ಉಪಸ್ಥಿತರಿದ್ದರು. ಪ್ರಧಾನ ಅರ್ಚಕ ವೆಂಕಟರಮಣ ಭಟ್‌ ತುಳಸಿ ಪೂಜೆ, ತುಳಸಿ ಕಲ್ಯಾಣ ನೆರವೇರಿಸಿದರು. ಶಕ್ತಿನಗರದ ರಮಾ ದೇವಿಯವರು ಸಂಕೀರ್ತನಾ ಮಂಗಳ ಹಾಡಿದರು.

LEAVE A REPLY

Please enter your comment!
Please enter your name here