ಪುರಾಣಗಳು ಏಕಕಾಲಕ್ಕೆ ತತ್ವನಿರೂಪಣೆ ಮತ್ತು ಇತಿಹಾಸ ಕಥನ ಎರಡನ್ನು ಮಾಡುತ್ತವೆ. ಕಥಾ ರೂಪದಲ್ಲಿ ಇವು ನಿರೂಪಿತವಾಗಿರುವುದರಿಂದ ಹೆಚ್ಚು ಜನಪ್ರಿಯವಾಗಿವೆ. ಪುರಾಣಗಳು ಹಲವಿದ್ದರೂ ಪ್ರಮುಖ ಹದಿನೆಂಟು ಪುರಾಣಗಳು ಹೇಳಲ್ಪಟ್ಟಿವೆ. ಬ್ರಹ್ಮಪುರಾಣ, ಪದ್ಮಪುರಾಣ, ವಿಷ್ಣುಪುರಾಣ, ಶಿವಪುರಾಣ, ಶ್ರೀಮದ್ಭಾಗವತ, ನಾರದಪುರಾಣ, ಮಾರ್ಕಂಡೇಯಪುರಾಣ, ಅಗ್ನಿಪುರಾಣ, ಭವಿಷ್ಯಪುರಾಣ, ಬ್ರಹ್ಮವೈವರ್ತಪುರಾಣ, ಲಿಂಗಪುರಾಣ, ವರಾಹಪುರಾಣ, ಸ್ಕಂದಪುರಾಣ, ವಾಮನಪುರಾಣ, ಕೂರ್ಮಪುರಾಣ, ಮತ್ಸ್ಯಪುರಾಣ, ಗರುಡಪುರಾಣ, ಬ್ರಹ್ಮಾಂಡಪುರಾಣ. ಇವು ಪ್ರಮುಖ ಹದಿನೆಂಟು ಪುರಾಣಗಳು.