Home ನಂಬಿಕೆ ಸುತ್ತಮುತ್ತ ದುರ್ಬುದ್ಧಿಯ ಮೂಲ ಯಾವುದು?

ದುರ್ಬುದ್ಧಿಯ ಮೂಲ ಯಾವುದು?

1406
0
SHARE

ಬದುಕಿಗೆ ಕಾರಣವನ್ನು ಹುಡುಕುವುದಕ್ಕೆ ಅರ್ಥವಿಲ್ಲ. ನಾನು ಇಂತಿಂಥ ಕಾರಣಕ್ಕೆ ಬದುಕುತ್ತೇನೆ ಎಂದು ನಿರ್ಧರಿಸಲಾಗದು. ಬದುಕಿಗೆ ಕಾರಣವೇ ಇಲ್ಲ. ಬದುಕನ್ನು ಹೀಗೆ ನಡೆಸುತ್ತೇನೆ ಎಂದು ನಿರ್ಧರಿಸಬಹುದು ಈ ನಿರ್ಧಾರ ಕೂಡ ನಾವು ಬದುಕುವ ಜಗತ್ತಿನಿಂದ ಹೊರಗಿಲ್ಲ. ಒಂದು ಪರಿಧಿಯೊಳಗೆ ಸುತ್ತಬೇಕಾದ ಅನಿವಾರ್ಯತೆ ಎಲ್ಲ ಮನುಷ್ಯರಿಗೂ ಇದೆ. ಈ ಸುತ್ತುವಿಕೆಯಲ್ಲಿ ಬದುಕಿನ ನಡೆ, ನಿರ್ಧಾರ, ಕನಸು, ದೃಷ್ಟಿ ಎಲ್ಲವೂ ಬದಲಾಗುತ್ತ ಹೋಗುತ್ತವೆ. ಹಾಗಾಗಿಯೇ ಬದುಕಿಗೆ ಕಾರಣಗಳಿಲ್ಲ. ನಾನು ಎಂಬುದು ಹುಟ್ಟಿದ್ದಕ್ಕೂ ನಾಳೆ ಸಾಯುವುದಕ್ಕೂ ಪ್ರಕೃತಿಯ ಶಕ್ತಿ ಕಾರಣ. ಈ ನಾನು ಅಂದರೆ ಏನು ಎಂಬುದನ್ನು ಸಂಪೂರ್ಣವಾಗಿ ಅರಿಯಲಾಗದ ಯಕಶ್ಚಿತ್ ಬದುಕು ಕೂಡ ಸಂಪೂರ್ಣವಾಗಿ ನಮ್ಮದಲ್ಲ. ಒಂದು ಉತ್ತಮ ಜೀವನ ಕೌಶಲ, ಸಹಬಾಳ್ವೆ, ಪ್ರಕೃತಿಯ ಜೊತೆಗಿನ ಸಾಂಗತ್ಯ, ಬೇಕುಬೇಡಗಳ ಹಾದಿ ಎಲ್ಲವೂ ಪರಾವಲಂಬಿಯೇ.

ಬದುಕಿನ ನಿಲುವಿಗೆ ಕಾರಣಬೇಕು. ಆ ನಿಲುವು ಯಶಸ್ಸು, ಕೀರ್ತಿ ಮತ್ತು ಕೊನೆಗೊಂದು ಮುಕ್ತಿ ಇವನ್ನು ಬಯಸುವುದು ಸಹಜವೇ. ಇಂಥ ಯಶಸ್ಸನ್ನು ಬಯಸುವಾಗ ನನ್ನ ಜೀವನ ಹೇಗೆ ಇರಬೇಕು? ಎಂಬ ಪ್ರಶ್ನೆ ಸಹಜವಾಗಿ ನಮ್ಮನ್ನು ಕಾಡುತ್ತದೆ. ಈ ಪ್ರಶ್ನೆ ಬಂದಾಗ ನಮ್ಮ ಕ್ರಿಯೆ   ಪ್ರತಿಕ್ರಿಯೆಗಳಲ್ಲಿ ಭಾಗಿಯಾಗುವ ಮನಸ್ಸು ಎಲ್ಲವಕ್ಕೂ ಮುಖ್ಯ ಸಾಧನ. ಬುದ್ಧಿಯೂ ಮನಸ್ಸಿನ ರೂಪವೇ. ಇದು ಬದುಕಿನ ರೇಖೆಯನ್ನು ರೂಪಿಸುವಂತದ್ದು. ಹಾಗಾಗಿಯೇ ಒಳ್ಳೆಯ ಬುದ್ಧಿ ಕೊಡಪ್ಪ ಎಂಬ ಪ್ರಾರ್ಥನೆ ಎಲ್ಲರದ್ದು. ಕೀರ್ತಿ ಅಥವಾ ಅಪಕೀರ್ತಿಯ ಹಿಂದೆ ನಿರ್ದಿಷ್ಟ ಕಾರಣವಾಗಿ ಗುರುತಿಸಲ್ಪಡುವುದು ಕೂಡಾ ಈ ಬುದ್ಧಿ. ದುರ್ಬುದ್ಧಿಯನ್ನು ದೂರ ಮಾಡಿಕೊಂಡವ ಮುಕ್ತಿಯನ್ನು ಪಡೆಯಲು ಶಕ್ತನಾಗುತಾನೆ. ಹಾಗಾದರೆ ನಮ್ಮೊಳಗಿನ ದುರ್ಬುದ್ಧಿ ಮೂಲ ಕಾರಣ ಏನು?

ಸಂತಾಪಂ ತನುತೇ ಭಿನತ್ತಿ ವಿನಯಂ ಸೌಹಾರ್ಧ ಮುತ್ಪಾದಯ ತ್ಯುದ್ವೇಗಂ ಜನಯತ್ಯವದ್ಯವಚನಂ ಸೂತೇ ವಿಧತ್ತೇ ಕಲಿಂ |
ಕೀರ್ತಿಂ ಕೃಂತತಿ ದುರ್ಮತಿಂ ವಿತರತಿ ವ್ಯಾಹಂತಿ ಪುಣ್ಯೋದಯಂ ದತ್ತೇ ಯಃ ಕುಗತಿಂ ಸ ಹಾತುಮೂಚಿತೋ ರೋಷಃ ಸ ದೋಷಃ ಸತಾಮ್||
ಇದು ಸೋಮಪ್ರಭಾಚಾರ್ಯನ ಸುಕ್ತಿಮುಕ್ತಾವಳಿ, ೪೨.

ಇದರ ಅರ್ಥ ಕೋಪವು ದೋಷಯುಕ್ತ ವಾದದ್ದು, ಇದನ್ನು ಸಜ್ಜನರು ತ್ಯಜಿಸಬೇಕು. ರೋಷವು ಮನಸ್ಸಿಗೆ ತಾಪವನ್ನು ಉಂಟುಮಾಡುತ್ತದೆ. ವಿನಯವನ್ನು ದೂರೀಕರಿಸುತ್ತದೆ. ಸ್ನೇಹವನ್ನು ಕೆಡಿಸುತ್ತದೆ. ಉದ್ವೇಗವನ್ನು ಉಂಟುಮಾಡುತ್ತದೆ. ಕೆಟ್ಟ ಮಾತನ್ನು ಹೇಳಿಸುತ್ತದೆ. ಜಗಳವನ್ನು ಹುಟ್ಟಿಸುತ್ತದೆ. ಕೀರ್ತಿಯನ್ನು ಕತ್ತರಿಸುತ್ತದೆ. ದುರ್ಬುದ್ಧಿಯನ್ನು ಕೊಡುತ್ತದೆ. ಪುಣ್ಯವನ್ನು ತೂರಿ ದುರ್ಗತಿಯನ್ನು ತರುತ್ತದೆ.

ದುರ್ಬುದ್ಧಿಗೆ ಮೂಲ ಕಾರಣವೇ ಈ ಕೋಪ, ರೋಷಗಳೇ ಆಗಿವೆ. ಕೋಪ ಎಂಬುದು ಮನುಷ್ಯನ ಪರಮ ವೈರಿ. ಕೋಪ ಬಂದಾಗ ಮನಸ್ಸು ಅನಾಹುತಕ್ಕೆ ಕಾರಣವಾಗುವ ಕಾರ್ಯಗಳಿಗೆ ಕ್ರಿಯೆಗೆ ಸಿದ್ಧವಾಗಿ ಬಿಡುತ್ತದೆ. ಒಂದು ಒಳ್ಳೆಯ ಹಾದಿಯಲ್ಲಿದ್ದ ನಮ್ಮ ಬದುಕನ್ನು ದುರ್ಮಾರ್ಗಕ್ಕೆ ತಳ್ಳುವ ಶಕ್ತಿ ಈ ಕೋಪಕ್ಕಿದೆ. ನಮ್ಮೊಳಗಿನ ವಿನಯ, ಜ್ಞಾನ, ಜಾಣ್ಮೆ, ಸನ್ನಡತೆ ಎಲ್ಲವನ್ನೂ ಮೀರಿ ದುರ್ಬುದ್ಧಿ ನಮ್ಮನ್ನು ಆಳುವಂತೆ ಮಾಡುವ ಈ ಕೋಪ ಮನೋತಾಪವೂ ಹೌದು; ಬದುಕಿನ ಕೂಪವೂ ಹೌದು. ಸಜ್ಜೀವನದ ಗುರಿಯನ್ನು ಕ್ಷಣಾರ್ಧದಲ್ಲಿ ತಪ್ಪಿಸಿ, ಯಶಸ್ಸನ್ನೂ, ಕೀರ್ತಿಯನ್ನೂ ದುರ್ಲಭವಾಗುವಂತೆ ಮಾಡಿಬಿಡುವ ಈ ಕೋಪವನ್ನು ತ್ಯಜಿಸುವುದು ಅಗತ್ಯ. ಇಂದ್ರಿಯನಿಗ್ರಹದ ಅವಶ್ಯಕ ಶಕ್ತಿಗಳನ್ನು ಗಳಿಸುವಲ್ಲಿ ಈ ರೋಷದ ನಿರ್ಮೂಲನೆ ಕೂಡ ಮುಖ್ಯ ಕೈಂಕರ್ಯವೇ.

ಕೋಪನಿಗ್ರಹ ಬದುಕಿನ ಸರಳ ದಾರಿಗೆ ಸವಾಲಾದರೂ ಇದನ್ನು ನಿಗ್ರಹಿಸದ ಹೊರತು ಬದುಕು ಸರಳವಾಗಿ ದಕ್ಕುವುದಿಲ್ಲ!

ಭಾಸ್ವ

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here