Home ಧಾರ್ಮಿಕ ಸುದ್ದಿ ವ್ಯಾಸರಾಜ ಮಠ: ಭಿಕ್ಷೆ , ಪಾದಪೂಜೆ

ವ್ಯಾಸರಾಜ ಮಠ: ಭಿಕ್ಷೆ , ಪಾದಪೂಜೆ

1947
0
SHARE

ಉಪ್ಪಿನಂಗಡಿ : ಗಾಣಿಗ ಸಮಾಜದ ಕುಲಗುರುಗಳಾದ ಕುಂದಾಪುರ ಶ್ರೀ ವ್ಯಾಸರಾಜ ಸಂಸ್ಥಾನದ ಮಠಾಧೀಶ ಶ್ರೀ ಲಕ್ಷ್ಮೀಂದ್ರತೀರ್ಥ ಸ್ವಾಮೀಜಿ ಅವರ ಚಾತುರ್ಮಾಸ ವ್ರತಾಚರಣೆ ಅಂಗವಾಗಿ ಪುತ್ತೂರು ತಾಲೂಕು ಸಪಲಿಗರ ಯಾನೆ ಗಾಣಿಗರ ಸಂಘದ ವತಿಯಿಂದ ಭಿಕ್ಷೆ ಹಾಗೂ ಪಾದಪೂಜಾ ಕಾರ್ಯಕ್ರಮ ರವಿವಾರ ಮಠದಲ್ಲಿ ಜರಗಿತು. ಪುತ್ತೂರು ತಾಲೂಕಿನಿಂದ ಮಠಕ್ಕೆ ಯಾತ್ರೆ ಮಾಡಿದ 125 ಭಕ್ತರಿಗೆ ಸ್ವಾಮೀಜಿಯವರು ಮಂತ್ರಾಕ್ಷತೆ ನೀಡಿ, ಮುದ್ರಾಧಾರಣೆ ಮಾಡಿಸಿದರು.

ಸಂಘದ ಅಧ್ಯಕ್ಷ ಹರಿ ರಾಮಚಂದ್ರ, ಕಾರ್ಯದರ್ಶಿ ವಸಂತ ಕುಂಟಿನಿ, ಯುವ ಗಾಣಿಗ ಸಂಘದ ಅಧ್ಯಕ್ಷ ನಿತೇಶ್‌ ಗಾಣಿಗ, ಮುಖಂಡರಾದ ಕೃಷ್ಣಪ್ಪ ನೆಕ್ಕರೆ, ಬಿ.ಕೆ. ಆನಂದ, ಚಂದ್ರಶೇಖರ್‌, ಅಮಿತಾ ಹರೀಶ್‌, ಶಶಿಕಲಾ ಭಾಸ್ಕರ್‌, ಶಿವರಾಮ್‌ ಕಲ್ಲೆಗ, ನವೀನ್‌ ಕಲ್ಲೆಗ, ಮೋನಪ್ಪ, ದೇವರಾಜ್‌, ವೇಣುಗೋಪಾಲ ಸಂಗಮ್‌, ಯಶೋದಾ ನೆಕ್ಕರೆ, ಎಸ್‌.ಇ. ನಾರಾಯಣ, ಅಣ್ಣು ಸಪಲ್ಯ, ವಿನೋದ್‌ ಕುಮಾರ್‌ ನೇತೃತ್ವ ವಹಿಸಿದ್ದರು.

LEAVE A REPLY

Please enter your comment!
Please enter your name here