ವಿಟ್ಲ: ಧರ್ಮಚಾವಡಿ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿದೆ. ಕಲ್ಲಾಡಿ ಕುಟುಂಬಕ್ಕೆ ದೈವಾನುಗ್ರಹವಾಗಿದೆ. ಐಕಮತ್ಯ, ಯೋಗ, ಭಾಗ್ಯ ಕೂಡಿಬಂದಾಗ ಯಶಸ್ಸು ನಿಶ್ಚಿತ. ಕ್ಷೇತ್ರದಲ್ಲಿ ಶಾಸ್ತ್ರ ಯುಕ್ತ ವಿಧಿವಿಧಾನಗಳನ್ನು ನಡೆಸಲಾಗಿದೆ. ಮುಂದೆ ನಿತ್ಯನೈಮಿತ್ತಿಕ ಕಾರ್ಯಗಳು ಮುನ್ನಡೆದು ಸಾನ್ನಿಧ್ಯ ವೃದ್ಧಿಯಾಗಬೇಕು ಎಂದು ಬ್ರಹ್ಮಶ್ರೀ ಬಡಾಜೆಬೀಡು ಗೋಪಾಲಕೃಷ್ಣ ತಂತ್ರಿ ಅವರು ಹೇಳಿದರು.
ಅವರು ಶುಕ್ರವಾರ ಇರಾ ಗ್ರಾಮದ ಕಲ್ಲಾಡಿ ಶ್ರೀ ಅರಸು ಕುರಿಯಾಡಿತ್ತಾಯ ಮೂವರು ದೈವಂಗಳ ಧರ್ಮಚಾವಡಿಯಲ್ಲಿ ಮೂವರು ದೈವಂಗಳು ಮತ್ತು ಜುಮಾದಿ-ಬಂಟ, ಮೈಸಂದಾಯ, ಜಠಾಧಾರಿ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕದ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಕಲ್ಲಾಡಿ ಕುಟುಂಬಸ್ಥರು ನೀಡಿದ ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಇರಾ ಕುಂಡಾವು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ ಅವರು ಧಾರ್ಮಿಕ ಸಭೆ ಉದ್ಘಾಟಿಸಿದರು. ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಕಲ್ಲಾಡಿ ರಾಜಶೇಖರ ಶೆಟ್ಟಿ ದೇವಸ್ಯ ಮಾತನಾಡಿ, ಎಲ್ಲರ ಸಹಕಾರ, ಶ್ರಮದಿಂದ ಈ ಕ್ಷೇತ್ರ ಪುನರ್ನಿರ್ಮಾಣ ಸಾಧ್ಯ ವಾಗಿದೆ. ಅದರಲ್ಲೂ ಚಂದ್ರಶೇಖರ ಟಿ. ಶೆಟ್ಟಿ ಅವರ ಶ್ರಮ ಅಪಾರ ಎಂದರು.
ಕಲ್ಲಾಡಿ ಕುಟುಂಬಸ್ಥರು, ಶಂಕರ ಶೆಟ್ಟಿ, ಕಲ್ಲಾಡಿ ಶ್ರೀಧರ ಶೆಟ್ಟಿ ಯಾನೆ ಸಂಕು ಶೆಟ್ಟಿ, ಕಲ್ಲಾಡಿ ಕಿರಣ್ ಕುಮಾರ್ ರೈ ಯಾನೆ ಕೋಟಿ ಶೆಟ್ಟಿ, ಗಡಿ ಗುತ್ತಿನವರು, ಗಡಿ ಪ್ರಧಾನರು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಕಾರ್ಯಕ್ಕೆ ಶ್ರಮಿಸಿದ, ಸಮಿತಿ ಅಧ್ಯಕ್ಷ ಚಂದ್ರಶೇಖರ ಟಿ. ಶೆಟ್ಟಿ -ಮಲ್ಲಿಕಾ ದಂಪತಿಯನ್ನು ಸಮ್ಮಾನಿಸಲಾಯಿತು. ವೇಣು ಗೋಪಾಲ ಭಂಡಾರಿ ಬಾವಬೀಡು, ಪದ್ಮನಾಭ ಶೆಟ್ಟಿ ಯಾನೆ ಸಾಮಾನಿ ಪಾತ್ರಾಡಿಗುತ್ತು, ಸೀತಾರಾಮ ಅಡ್ಯಂತಾಯ ಯಾನೆ ದೋಚ ರೈ ಬೋಳಂತೂರು ಗುತ್ತು, ಮಹಾಬಲ ರೈ ಯಾನೆ ಕೋಟಿ ಶೆಟ್ಟಿ ಕಿನ್ನಿಮಜಲುಬೀಡು, ರವಿ ಕುಮಾರ್ ಶೆಟ್ಟಿ ಯಾನೆ ಸಾವಿರದ ಕುಂಞಿಲ ಮಂಚಿಗುತ್ತು, ರಾಜೇಶ್ ಪೂಜಾರಿ ಯಾನೆ ಮುಂಡ ಮರಕಡಬೈಲು, ಶ್ರೀಧರ ಶೆಟ್ಟಿ ಯಾನೆ ಸಂಕು ಶೆಟ್ಟಿ ಕಲ್ಲಾಡಿ, ಕಲ್ಲಾಡಿ ಕುಟುಂಬ ಟ್ರಸ್ಟ್ ಅಧ್ಯಕ್ಷ ನಳಿನಾಕ್ಷ ಮಲ್ಲಿ, ಕಾಷ್ಠ ಶಿಲ್ಪಿ ಸೀತಾರಾಮ ಆಚಾರ್, ಚಾವಡಿಯ ಶಿಲ್ಪಿ ಸಚೀಂದ್ರ, ಕಾಂತಣ್ಣ, ಸತೀಶ ಮತ್ತಿತರರನ್ನು ಗೌರವಿಸಲಾಯಿತು. ಜಗದೀಶ ಶೆಟ್ಟಿ ಕಲ್ಲಾಡಿ ಇರಾಗುತ್ತು ಪ್ರಸ್ತಾವಿಸಿ, ಸ್ವಾಗತಿಸಿದರು. ಪುಷ್ಪರಾಜ ಕುಕ್ಕಾಜೆ ಅವರು ಕಾರ್ಯಕ್ರಮ ನಿರೂಪಿಸಿದರು. ಸುರೇಂದ್ರ ಶೆಟ್ಟಿ ಕಲ್ಲಾಡಿ ವಂದಿಸಿದರು.