ವಿಟ್ಲಮುಟ್ನೂರು: ಕುಳ ವಿಟ್ಲಮುಟ್ನೂರು ಗ್ರಾಮದ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮತ್ತು ಶಿಬರಿ ಕಲ್ಲ ಮಾಡ ಶ್ರೀ ಮಲರಾಯ ದೈವಂಗಳ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಜೈನರಕೋಡಿ ಶ್ರೀ ಮೂವರು ದೈವಂಗಳ ಹಾಗೂ ಡೆಚ್ಚಾರು ಮಲರಾಯ ದೈವದ ಭಂಡಾರ ಸ್ಥಾನಗಳ ಶುದ್ಧಿಕಲಶವು ಕುಂಟುಕುಡೇಲು ರಘುರಾಮ ತಂತ್ರಿ ಅವರ ನೇತೃತ್ವದಲ್ಲಿ ನಡೆಯಿತು.
ಜೈನರಕೋಡಿ ಭಂಡಾರ ಸ್ಥಾನದಲ್ಲಿ ಜ. 8ರಂದು ರಾತ್ರಿ ವಾಸ್ತುರಾಕ್ಷೋಘ್ನ, ವಾಸ್ತುಬಲಿ, 9ರಂದು ಬೆಳಗ್ಗೆ 9.17ಕ್ಕೆ ನೂತನ ಗೋಪುರದಲ್ಲಿ ಮಲರಾಯ ಉಯ್ನಾಲೆಯ ಹಾಗೂ ಮೂವರ್ ದೈವಂಗಳ ಭಂಡಾರ ಸ್ಥಾನದ ಶುದ್ಧಿಕಲಶ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು. ಡೆಚ್ಚಾರು ಭಂಡಾರ ಸ್ಥಾನದಲ್ಲಿ ಜ. 9ರ ರಾತ್ರಿ ವಾಸ್ತು ರಾಕ್ಷೋಘ್ನ, ವಾಸ್ತುಬಲಿ, 10ರ ಬೆಳಗ್ಗೆ 9.17ಕ್ಕೆ ಶ್ರೀ ಮಲರಾಯ-ಧೂಮಾವತಿ ದೈವಗಳ ಭಂಡಾರ ಸ್ಥಾನ ಹಾಗೂ ನೂತನ ಕಟ್ಟೆಯಲ್ಲಿ ಕೊರತಿ ದೈವದ ಪುನಃಪ್ರತಿಷ್ಠೆ -ಶುದ್ಧಿಕಲಶ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು.