Home ಧಾರ್ಮಿಕ ಸುದ್ದಿ ‘ಪ್ರಕೃತಿ ರಕ್ಷಣೆಗೆ ಎಚ್ಚೆತ್ತುಕೊಳ್ಳಬೇಕು’

‘ಪ್ರಕೃತಿ ರಕ್ಷಣೆಗೆ ಎಚ್ಚೆತ್ತುಕೊಳ್ಳಬೇಕು’

ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ: ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ

528
0
SHARE

ವಿಟ್ಲ: ಪ್ರಕೃತಿಯ ರಕ್ಷಣೆಗೆ ಹೋರಾಟ ನಡೆಸಬೇಕಾದ ಪ್ರಮೇಯ ಬರುವುದಕ್ಕಿಂತ ಮುಂಚೆ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು. ದೇಶವನ್ನು ಸದಾ ಕಾಯುವ ಯೋಧರ ತ್ಯಾಗ, ಬಲಿದಾನಗಳಿಗೆ ನಾವು ಉತ್ತಮ ಸೇವಾ ಕಾರ್ಯಗಳನ್ನು ಮಾಡಿ ಅರ್ಥ ತುಂಬ ಬೇಕಾಗಿದೆ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.

ರವಿವಾರ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನಡೆಯುತ್ತಿರುವ ಒಂದು ಮಂಡಲ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಅಶೋಕ್‌ ಕುಮಾರ್‌ ರೈ ಅರ್ಪಿಣಿಗುತ್ತು ಮಾತನಾಡಿ, ಮಾಣಿಲ ಶ್ರೀಗಳ ಮೂಲಕ ಸದ್ದಿಲ್ಲದೇ ನಾನಾ ಸಾಮಾಜಿಕ, ಧಾರ್ಮಿಕ ಸೇವಾ ಕಾರ್ಯಗಳು ನಡೆಯುತ್ತಿದ್ದು, ನಾವೆಲ್ಲರೂ ಕೈಜೋಡಿಸಬೇಕೆಂದರು.

ಭಾರತೀಯ ಸೇನಾಪಡೆಯ ಯೋಧ ಚಂದ್ರಶೇಖರ್‌ ಪೆರುವಾಯಿ, ನಿವೃತ್ತ ಶಿಕ್ಷಕ ರಾಮ ಕುಲಾಲ್ ಉಪಸ್ಥಿತರಿದ್ದರು.

ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ. ಶೆಟ್ಟಿ ಸ್ವಾಗತಿಸಿ, ಸದಸ್ಯೆ ವಸಂತಿ ಶೆಟ್ಟಿ ವಂದಿಸಿದರು. ಕಾರ್ಯದರ್ಶಿ ಗೀತಾ ಪುರುಷೋತ್ತಮ ನಿರೂಪಿಸಿದರು.

ಶ್ರೀಕ್ಷೇತ್ರದಲ್ಲಿ ಬೆಳಗ್ಗೆ ಗಣಪತಿ ಹವನ, ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ಶ್ರೀ ಗುರುಪೂಜೆ, ಬಾಲಭೋಜನ, ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆ, ಕನಕಧಾರಾ ಯಾಗ, ಸಾಮೂಹಿಕ ಕುಂಕುಮಾರ್ಚನೆ, ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.

ಸಂಜೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಶ್ರೀ ದುರ್ಗಾ ಪೂಜೆ, ಆಶ್ಲೇಷಾ ಬಲಿ, ಶ್ರೀ ವಿಠೊಭರುಕ್ಮಿಣಿ ಧ್ಯಾನ ಮಂದಿರದಲ್ಲಿ ಭಜನ ಸಂಕೀರ್ತನೆ, ಶ್ರೀ ಲಕ್ಷ್ಮೀ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.

LEAVE A REPLY

Please enter your comment!
Please enter your name here