Home ಧಾರ್ಮಿಕ ಸುದ್ದಿ ತ್ಯಾಗದಿಂದ ಸಾರ್ಥಕ್ಯ: ಒಡಿಯೂರು ಶ್ರೀ

ತ್ಯಾಗದಿಂದ ಸಾರ್ಥಕ್ಯ: ಒಡಿಯೂರು ಶ್ರೀ

ಒಡಿಯೂರು: ದತ್ತಜಯಂತಿ, ದತ್ತಮಹಾಯಾಗ ಸಪ್ತಾಹ

149
0
SHARE

ವಿಟ್ಲ: ತ್ಯಾಗದ ಬದುಕು ಸಾರ್ಥಕವೆನಿಸುತ್ತದೆ. ಭಗವಂತನ ಚಿಂತನೆಗೆ ಅಂತ್ಯ ಎಂಬುದಿಲ್ಲ. ಸಮರಸ ತಣ್ತೀ ವೆನಿಸಿದ ಗುರುತಣ್ತೀ ಪ್ರತಿಯೊಬ್ಬರ ಬದುಕಿನಲ್ಲಿಯೂ ಅನುಷ್ಠಾನವಾಗಬೇಕು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮಿಗಳು ನುಡಿದರು.

ಅವರು ಗುರುವಾರ ಶ್ರೀ ಸಂಸ್ಥಾನದಲ್ಲಿ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹದ ಅಂಗವಾಗಿ ಶ್ರೀ ಗುರುಭಕ್ತರಿಗೆ ದತ್ತಮಾಲಾಧಾರಣೆ ನೆರವೇರಿಸಿ, ಶ್ರೀ ಗುರುಚರಿತಾಮೃತ ಪ್ರವಚನ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಶರೀರದಲ್ಲಿ ಕಾಮಕ್ರೋಧಾದಿಗಳು ಅಧಿಕವಾದಾಗ ತ್ರಿಕರಣಾದಿಯಾಗಿ ಏರುಪೇರಾಗಬಹುದು. ಬದುಕಿನ ಅರ್ಥ ಅರಿವಾದಾಗ ಉತ್ತಮರಾಗುತ್ತೇವೆ ಎಂದು ತಿಳಿಸಿದರು.

ನಿವೃತ್ತ ಪ್ರಾಂಶುಪಾಲೆ ಪ್ರೊ| ಚಂದ್ರಪ್ರಭಾ ಹೆಗ್ಡೆ ಶಿರ್ವ ಅವರಿಂದ ಶ್ರೀ ಗುರುಚರಿತಾಮೃತ ಪ್ರವಚನ ನಡೆಯಿತು. ಶ್ರೀ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ, ಒಡಿಯೂರು ಶ್ರೀಯವರ ಮಾತೃಶ್ರೀ ಅಂತಕ್ಕೆ, ಮುಂಬಯಿ ಉದ್ಯಮಿ ವಾಮಯ್ಯ ಶೆಟ್ಟಿ, ಒಡಿಯೂರುಶ್ರೀ ವಿವಿಧೋದ್ದೇಶ ಸೌಹಾರ್ದ ಸಂಘದ ಅಧ್ಯಕ್ಷ ಸುರೇಶ್‌ ರೈ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಅಶೋಕ್‌ ಕುಮಾರ್‌ ಬಿಜೈ, ಶ್ರೀ ಗುರುದೇವ ವಿದ್ಯಾ ಪೀಠದ ಸಂಚಾಲಕ ಗಣಪತಿ ಭಟ್‌ ಸೇರಾಜೆ, ರಘುನಾಥ ಶೆಟ್ಟಿ ಪಟ್ಲಗುತ್ತು ಉಪಸ್ಥಿತರಿದ್ದರು.

ಯಶವಂತ ವಿಟ್ಲ ನಿರೂಪಿಸಿದರು. ಬೆಳಗ್ಗೆ ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ದತ್ತ ಮಹಾಯಾಗ ನಡೆಯಿತು. ಸಂಜೆ ಶ್ರೀ ದತ್ತಾಂಜನೇಯ ದೇವರ ಪಲ್ಲಕಿ ಉತ್ಸವ, ರಾತ್ರಿ ರಂಗಪೂಜೆ, ಬೆಳ್ಳಿ ರಥೋತ್ಸವ ನಡೆದವು.

LEAVE A REPLY

Please enter your comment!
Please enter your name here