Home ಧಾರ್ಮಿಕ ಕಾರ್ಯಕ್ರಮ ಮಾತೆಯ ಜೀವನ ಪಾಠ ಪರಿಣಾಮಕಾರಿ’

ಮಾತೆಯ ಜೀವನ ಪಾಠ ಪರಿಣಾಮಕಾರಿ’

•ಮಾಣಿಲ: ಶ್ರೀ ಲಕ್ಷ್ಮೀ ಪೂಜೆ, ಧಾರ್ಮಿಕ ಸಭೆ

1639
0
SHARE
ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.

ವಿಟ್ಲ: ನೈತಿಕ ಮೌಲ್ಯ, ಧಾರ್ಮಿಕತೆಯ ಮಹತ್ವವನ್ನು ಸರಿಯಾಗಿ ಅರ್ಥೈಸದ ಯುವ ಜನಾಂಗ ಮಾದಕ ವಸ್ತು, ಅಮಲು ಸೇವನೆಗಳಂತಹ ದುಶ್ಚಟಗಳ ದಾಸರಾಗುತ್ತಿರುವುದು ವಿಷಾದನೀಯ. ಮಾತೆ ಕಲಿಸುವ ಜೀವನ ಪಾಠ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಪರಿಶುದ್ಧ ಮನಸ್ಸಿನ ವ್ಯಕ್ತಿಗಳಿಂದ ಸತ್ಕರ್ಮಗಳು ನಡೆಯುತ್ತವೆ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ರವಿವಾರ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನಡೆಯುತ್ತಿರುವ ಒಂದು ಮಂಡಲ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯ ಬಳಿಕ ನಡೆದ ಧಾರ್ಮಿಕ ಸಭೆ ಯಲ್ಲಿ ಅವರು ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಬಂಟ್ವಾಳದ ವಕೀಲ ರಾಜಾರಾಮ ನಾಯ್ಕ ಮಾತನಾಡಿ, ಮಾಣಿಲ ಶ್ರೀಯವರಂತೆ ದೇಶ, ಸಮಾಜ, ಪ್ರಕೃತಿಯ ಹಿತಚಿಂತನೆಯ ಸಂತರು ಶ್ರೇಷ್ಠ ರೆನಿಸಿದ್ದಾರೆ ಎಂದರು.

ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಟ್ರಸ್ಟಿ ಚಂದ್ರಶೇಖರ್‌ ತುಂಬೆ, ದೇವದಾಸ ಆಳ್ವ ಕುಂಬ್ಳೆ, ನವೋದಯ ಸ್ವ-ಸಹಾಯ ಗುಂಪುಗಳ ಮೇಲ್ವಿಚಾರಕ ಉದಯ ಎಂ. ಪೆರುವಾಯಿ ಭಾಗವಹಿಸಿದ್ದರು.

ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಟ್ರಸ್ಟಿ ಮಂಜು ವಿಟ್ಲ ಪ್ರಸ್ತಾವಿಸಿದರು. ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ. ಶೆಟ್ಟಿ ಸ್ವಾಗತಿಸಿ, ಕಾರ್ಯ ದರ್ಶಿ ಗೀತಾ ಪುರುಷೋತ್ತಮ್‌ ನಿರೂಪಿಸಿ ದರು. ಸದಸ್ಯೆ ವಸಂತಿ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here