ವಿಟ್ಲ: ಪರೋಪಕಾರದ ಆನಂದ ಮಿಗಿಲಾದುದು. ಕೆಟ್ಟದರಲ್ಲಿಯೂ ಒಳ್ಳೆಯತನ ಕಾಣುವ ಹೃದಯ ವೈಶಾಲ್ಯತೆ ನಮ್ಮಲ್ಲಿರಬೇಕು. ಮತೀಯವಾದ ಬಿಟ್ಟು ಮಾನವೀಯತೆ ಬೆಳೆಸಿಕೊಂಡು ಪ್ರೀತಿ ಭಾವದಿಂದ ಇರುವುದೇ ಬದುಕಿನ ಸಾರ್ಥಕತೆ ಯಾಗಿದೆ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ತಿಳಿಸಿದರು.
ರವಿವಾರ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನಡೆಯುತ್ತಿರುವ ಒಂದು ಮಂಡಲ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚಿಸಿದರು.
ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ಶ್ರೀಧಾಮ ಸೇವಾ ಸಮಿತಿ ಅಧ್ಯಕ್ಷ ಉಮೇಶ್ ಬೊಮ್ಮಸಂದ್ರ ಮಾತನಾಡಿ, ಸಂತರೊಡನೆ ಬೆರೆತು ಹಿತವಚನ ಪಾಲಿಸುವುದರಲ್ಲಿ ಮನ ಶಾಂತಿ ಪ್ರಾಪ್ತಿಯಾಗುವುದು ಎಂದರು.
ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಟ್ರಸ್ಟಿ ಜಯರಾಜ್ ಪ್ರಕಾಶ್, ಉದ್ಯಮಿ ವಿಟuಲ್ ಬೆಂಗಳೂರು, ಲೋಕೇಶ್ ಬೆಂಗಳೂರು, ರಮೇಶ್ ಸಾಲ್ಯಾನ್ ಬಿ.ಸಿ. ರೋಡ್ ಭಾಗವಹಿಸಿದ್ದರು. ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಟ್ರಸ್ಟಿ ಮಂಜು ವಿಟ್ಲ ಸ್ವಾಗತಿಸಿ, ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ.ಶೆಟ್ಟಿ, ವಂದಿಸಿದರು. ಕಾರ್ಯದರ್ಶಿ ಗೀತಾ ಪುರುಷೋತ್ತಮ ನಿರೂಪಿಸಿದರು.