Home ಧಾರ್ಮಿಕ ಸುದ್ದಿ ಅಲೌಕಿಕ ಬದುಕಿನಿಂದ ಉನ್ನತಿ: ಒಡಿಯೂರು ಶ್ರೀ

ಅಲೌಕಿಕ ಬದುಕಿನಿಂದ ಉನ್ನತಿ: ಒಡಿಯೂರು ಶ್ರೀ

ಒಡಿಯೂರು: ಶ್ರೀ ದತ್ತ ಜಯಂತಿ ಮಹೋತ್ಸವ

105
0
SHARE

ವಿಟ್ಲ: ಭಗವಂತನ ಗುಣ ಗಳನ್ನು ಅಳವಡಿ ಸಿಕೊಳ್ಳಬೇಕು. ಅಲೌಕಿಕ ಬದುಕು ಉನ್ನತಿಯನ್ನು ಸಾಧಿಸುತ್ತದೆ. ಲೌಕಿಕ ಬಂಧ ನaದಿಂದ ಬಿಡುಗಡೆಗೊಂಡರೆ ಅದುವೇ ಮೋಕ್ಷ ಎಂದು ಒಡಿಯೂರು ಶ್ರೀ ಗುರು ದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ತಿಳಿಸಿದರು.

ಬುಧವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಡೆದ ಶ್ರೀ ದತ್ತ ಜಯಂತಿ ಮಹೋತ್ಸವ – ಶ್ರೀ ದತ್ತ ಮಹಾಯಾಗ ಸಪ್ತಾಹ ಪ್ರಯುಕ್ತ ನಡೆದ ಧರ್ಮಸಭೆಯಲ್ಲಿ ದಿನದರ್ಶಿ ಬಿಡುಗಡೆಗೊಳಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಬದುಕು ಸತ್ವಪೂರ್ಣವಾಗಿರಬೇಕು. ಧರ್ಮ ಯುಕ್ತ ವಾಗಿರಬೇಕು. ಪ್ರಪಂಚವೇ ನಮಗೆ ಪಾಠಶಾಲೆ. ಶ್ರೀಗುರುಚರಿತೆ ಅಮೃತ ವನ್ನು ಸವಿಯುವಂತೆ ಮಾಡುತ್ತದೆ. ದತ್ತಾತ್ರೇಯನ ಗುರುತತ್ತ್ವಗಳನ್ನು ನಮ್ಮೊಳಗೆ ಅನುಷ್ಠಾನಿಸಬೇಕು. ಆಗ ಭಗವಂತನ ಪ್ರೀತಿಗೆ ಪಾತ್ರರಾಗಲು ಸಾಧ್ಯ ಎಂದು ತಿಳಿಸಿದರು.

ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಹಿಂದೂ ಸಮಾಜ ಬಹಳಷ್ಟು ಯೋಚನೆ ಮಾಡಬೇಕಾದ ಕಾಲಘಟ್ಟದಲ್ಲಿದೆ. ಜಾತೀಯತೆಯನ್ನು ಬಿಟ್ಟು ನೀತಿಯುಕ್ತವಾಗಿ ಬದುಕುವುದು ಮುಖ್ಯ. ತಪ್ಪನ್ನು ತಿದ್ದಿಕೊಳ್ಳುವ ಜಾಗವೇ ಕ್ಷೇತ್ರವಾಗಿದೆ.ಸಂತರು ನೀಡುವ ಮಂತ್ರಾಕ್ಷತೆಗೆ ಪಾವಿತ್ರ್ಯಇದೆ ಎಂದರು.

ಸಾಧ್ವಿ ಮಾತಾನಂದಮಯೀ ಆಶೀರ್ವಚನ ನೀಡಿ, ಸದ್ವಿಚಾರದತ್ತ ನಾವು ಒಲವು ತೋರಬೇಕು. ಗುರುನಾಮಸ್ಮರಣೆ ಮಾಡಿ ಪಾವನರಾಗಬೇಕು ಎಂದರು. ನವಿಮುಂಬೈ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಪ್ರಧಾನ ಅರ್ಚಕ ಗುರು ಪ್ರಸಾದ್‌ ಭಟ್‌ ಮಾತನಾಡಿ, ನಮ್ಮೊಳಗೆ ಒಗ್ಗಟ್ಟಿನ ಕೊರತೆಯಿದೆ. ಶ್ರೀಗಳ ಮಾರ್ಗದರ್ಶನದ ಮೂಲಕ ನಾವೆಲ್ಲ ಒಂದಾಗಬೇಕು. ನಾವು ಧರ್ಮ ವನ್ನು ಸಂಪಾದಿಸಬೇಕು. ಸಾತ್ವಿಕ ಭಾವದಿಂದ ಸಂಪಾದಿಸಿದ ಸಂಪತ್ತಿನಿಂದಾಗಿ ನೆಮ್ಮದಿ ಸಾಧ್ಯ ಎಂದರು.

ಮುಂಬಯಿ ಸೇವಾ ಬಳಗದ ಅಧ್ಯಕ್ಷ ಕೃಷ್ಣ ಎಲ್‌. ಶೆಟ್ಟಿ, ಮುಂಬಯಿ ಸೇವಾಬಳಗದ ವಾಮಯ್ಯ ಶೆಟ್ಟಿ, ರೇವತಿ ವಾಮಯ್ಯ ಶೆಟ್ಟಿ, ದಾಮೋದರ್‌ ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಅಶೋಕ್‌ ಕುಮಾರ್‌ ಬಿಜೈ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಸುರೇಶ್‌ ರೈ, ವಿಟ್ಲ ವಲಯ ಬಂಟರ ಸಂಘದ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ರೋಹಿತ್‌ ಡಿ. ಶೆಟ್ಟಿ ನಗ್ರಿಗುತ್ತು ಮತ್ತಿತರರು ಉಪಸ್ಥಿತರಿದ್ದರು.

ಸಮ್ಮಾನ ಒಡಿಯೂರು ಸಂಸ್ಥಾನ ಪ್ರಕಾಶಿಸಿದ ನೂತನ ವರುಷದ ಕ್ಯಾಲೆಂಡರ್‌ ಅನ್ನು ಸ್ವಾಮೀ ಜಿ ಯವರು ಬಿಡುಗಡೆ ಮಾಡಿದರು. ಇದೇ ಸಂದರ್ಭ ಕ್ಯಾಲೆಂಡರನ್ನು ಡಿಸೈನ್‌ ಮಾಡಿದ ಸಂತೋಷ್‌ ಭಂಡಾರಿ ಮತ್ತು ವಿವಿಧ ರೀತಿಯಲ್ಲಿ ಸಹಕ ರಿಸಿ ದವರನ್ನು ಸಮ್ಮಾನಿಸಲಾಯಿತು. ಮಾಣಿಲ ಶ್ರೀಧಾಮದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಮಹಿಳಾ ವಿಭಾಗದ ಸದಸ್ಯೆಯರು ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಸಾಧ್ವಿ ಮಾತಾನಂದಮಯೀ ಅವರಿಗೆ ಫಲ ಪುಷ್ಪ ನೀಡಿದರು.

ಶ್ರೀ ಒಡಿಯೂರು ಗುರುದೇವ ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್‌ ಸೇರಾಜೆ ಸ್ವಾಗತಿಸಿ, ಯಶವಂತ ವಿಟ್ಲ ನಿರೂಪಿಸಿದರು. ರೇಣುಕಾ ಎಸ್‌ ರೈ ಆಶಯಗೀತೆ ಹಾಡಿದರು. ಸಂತೋಷ್‌ ಭಂಡಾರಿ ವಂದಿಸಿದರು.

LEAVE A REPLY

Please enter your comment!
Please enter your name here