Home ಧಾರ್ಮಿಕ ಸುದ್ದಿ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ

ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ

1440
0
SHARE

ಕಾಸರಗೋಡು: ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ದೇವಸ್ವಂ ಬೋರ್ಡ್‌ ಅಧ್ಯಕ್ಷರಾದ ಒ.ಕೆ.ವಾಸು ಮಂಗಳವಾರ ಬೆಳಗ್ಗೆ ಭೇಟಿ ನೀಡಿ ಜೀರ್ಣೋದ್ಧಾರ ಕಾಮಗಾರಿಯನ್ನು ವೀಕ್ಷಿಸಿದರು.

ಇವರ ಜತೆಯಲ್ಲಿ ದೇವಸ್ವಂ ಬೋರ್ಡ್‌ ಸದಸ್ಯರು, ದೇವಸ್ವಂ ಬೋರ್ಡ್‌ ಅಸಿಸ್ಟೆಂಟ್‌ ಕಮಿಷನರ್‌ ವೃಂದ, ಇನ್‌ಸ್ಪೆಕ್ಟರ್‌ ಉಮೇಶ್‌ ಮೊದಲಾದವರಿದ್ದರು. ದೇವಸ್ವಂ ಬೋರ್ಡ್‌ ಅಧ್ಯಕ್ಷ ಒ.ಕೆ.ವಾಸು ಅವರನ್ನು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎಸ್‌.ಜೆ.ಪ್ರಸಾದ್‌ ಅವರು ಹೂಗುತ್ಛ ನೀಡಿ ಸ್ವಾಗತಿಸಿದರು.

ಶ್ರೀ ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ ಕೆ. ಬಾಬು, ಕ್ಷೇತ್ರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ| ಅನಂತ ಕಾಮತ್‌, ಪ್ರಧಾನ ಕಾರ್ಯದರ್ಶಿ ಪಿ. ಮುರಳೀಧರನ್‌, ಕಾರ್ಯಾಧ್ಯಕ್ಷ ರಾಂಪ್ರಸಾದ್‌, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಕೆ.ಎನ್‌. ವೆಂಕಟರಮಣ ಹೊಳ್ಳ ಹಾಗೂ ಇತರ ಸಮಿತಿ ಸದಸ್ಯರು, ಟ್ರಸ್ಟಿ ಬೋರ್ಡ್‌ ಸದಸ್ಯರು, ಶ್ರೀ ಕ್ಷೇತ್ರದ ನೌಕರ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here