Home ಧಾರ್ಮಿಕ ಸುದ್ದಿ ಮಹಾಲಿಂಗೇಶ್ವರ ಜಾತ್ರೆಯಲ್ಲಿ ಇಂದು ವಿಷುಕಣಿ

ಮಹಾಲಿಂಗೇಶ್ವರ ಜಾತ್ರೆಯಲ್ಲಿ ಇಂದು ವಿಷುಕಣಿ

1813
0
SHARE

ಪುತ್ತೂರು : ಸೌರಮಾನ ಯುಗಾದಿ ತುಳುನಾಡಿನಲ್ಲಿ ಹೊಸ ವರ್ಷವನ್ನು ಆಚರಿಸುವ ದಿನ. ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಜಾತ್ರೆದೊಂದಿಗೆ ವಿಷು ಕಣಿ ಸಂಭ್ರಮವೂ ಸೇರಿಕೊಂಡು ಎ. 15ರಂದು ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.

ಶನಿವಾರ ವಿಷು ಸಂಕ್ರಮಣದ ದಿನ ರಾತ್ರಿ ದೇವರ ದೈನಂದಿನ ಪೇಟೆ ಸವಾರಿ ಮುಗಿದು, ದೇವಾಲಯದ ಆಡಳಿತದವರು, ಭಕ್ತರು ಸೇರಿ ಕಾಲ ಕಾಲಕ್ಕೆ ಮಳೆ – ಬೆಳೆ ಸಮೃದ್ಧಿಯಾಗಿ, ಸುಭಿಕ್ಷೆ ಉಂಟಾಗಲಿ ಎಂದು ದೇವಸ್ಥಾನದ ತಂತ್ರಿಗಳ ಮೂಲಕ ದೇವರ ಸತ್ಯ ಧರ್ಮ ನಡೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಬಳಿಕ ಫಲಪುಷ್ಪಾದಿ ಸುವಸ್ತುಗಳನ್ನು ದರ್ಪಣ ಸಹಿತ ಗರ್ಭಗುಡಿಯಲ್ಲಿ ಇರಿಸಿ ಬಾಗಿಲು ಮುಚ್ಚಲಾಗುತ್ತದೆ.

ವಿಷು (ಬಿಸು)ವಿನ ದಿನ (ತುಳು ಪಂಚಾಂಗದಲ್ಲಿ ತಿಂಗಳಡಿ ದಿನ) ಪ್ರಾತಃಕಾಲದಲ್ಲಿ ಶ್ರೀ ದೇವರ ಗರ್ಭಗುಡಿಯ ಬಾಗಿಲು ತೆಗೆದು ದರ್ಪಣ ಬಿಂಬ ದರ್ಶನವಾಗುತ್ತದೆ. ದೇವಾಲಯದ ಒಳಾಂಗಣದ ಸಾಂಪ್ರದಾಯಿಕ ಚಪ್ಪರದ ಕಂಬಗಳನ್ನು ತಳಿರು ತೋರಣ ಕಟ್ಟಿ ಸಿಂಗರಿಸಲಾಗುತ್ತದೆ. ದೇವರು ಬಂದು ನಿಲ್ಲುವ ಕೊಡಿಮರದ ಬಲ ಭಾಗದಲ್ಲಿ ಚಪ್ಪರಕ್ಕೆ ಮೇಲ್ಕಾಪು ಹಾಸಲಾಗುತ್ತದೆ.

ವಿಶೇಷ ಉತ್ಸವ
ಸೌರ ಯುಗಾದಿ ವಿಷುಕಣಿ ಅಂಗವಾಗಿ ದೇವಾಲಯದ ಒಳಾಂಗಣದಲ್ಲಿ ಬೆಳಗ್ಗೆ ವಿಶೇಷ ಉತ್ಸವ ಬಲಿ, ವಸಂತ ಕಟ್ಟೆಪೂಜೆ ನಡೆಯುತ್ತದೆ. ಸಂಜೆ ತುಳು ಪಂಚಾಂಗ ಸಂಪ್ರ ದಾಯದಂತೆ ದೇವಾ ಲಯದ ಹೊರಾಂಗಣ ದಲ್ಲಿ “ಬಯ್ಯದ ಬಲಿ’ (ಸಂಜೆಯ ಉತ್ಸವ) ನಡೆದು ಬಳಿಕ ಶ್ರೀ ದೇವರ ಸಾಂಪ್ರದಾಯಿಕ ಚಂದ್ರ ಮಂಡಲ ಉತ್ಸವ (ಬಂಡಿ ಉತ್ಸವ)  ನಡೆಯುತ್ತದೆ.

ದೇವಾಲಯದಲ್ಲಿ ಶತಮಾನಗಳ ಹಿಂದೆ ಬಂಡಿಯ ಪೀಠದಲ್ಲಿ ದೇವರ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ಹೊರಾಂಗಣದಲ್ಲಿ ಎಳೆಯಲಾಗುತ್ತಿತ್ತು. ಚಂದ್ರಮಂಡಲ ರಥವನ್ನು ನಿರ್ಮಿಸಿದ ಬಳಿಕ ಚಂದ್ರಮಂಡಲ ರಥ ಉತ್ಸವ ನಡೆಯುತ್ತದೆ. ಪುತ್ತೂರು ಸೀಮೆಯ ಜನರು ಇದನ್ನು ಬಂಡಿ ಉತ್ಸವ ಎಂದೂ ಕರೆಯುತ್ತಾರೆ.

ವಿಶೇಷ ಊಟ
ವಿಷುಕಣಿಯ ಅಂಗವಾಗಿ ಮಧ್ಯಾಹ್ನ ದೇವಾಲಯದಲ್ಲಿ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆಯಲ್ಲಿ ವಿಶೇಷ ಊಟ ಇರುತ್ತದೆ. ಮನೆಗಳಲ್ಲಿ ಸೌರಯುಗಾದಿ ಆಚರಣೆ ಇದ್ದರೂ ಒಬ್ಬ ಸದಸ್ಯ ನಾದರೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯುವ ವಿಷು ಊಟದಲ್ಲಿ ಅನ್ನಪ್ರಸಾದವನ್ನು ಸ್ವೀಕರಿಸು ವುದು ಅಂದಿನ ವಿಶೇಷ.

ಇಂದಿನ ಪೇಟೆ ಸವಾರಿ
ಎ. 15: ಬೆಳಗ್ಗೆ ಸೌರಯುಗಾದಿ ವಿಷು ಆಚರಣೆ, ಅನಂತರ ಉತ್ಸವ, ವಸಂತ ಕಟ್ಟೆ ಪೂಜೆ, ರಾತ್ರಿ ಉತ್ಸವ ಬಲಿ, ಹೊರಾಂಗ ಣದಲ್ಲಿ ಚಂದ್ರ ಮಂಡಲ ಉತ್ಸವ, ಬಳಿಕ ಬನ್ನೂರು, ಅಶೋಕನಗರ, ರೈಲ್ವೇ ಮಾರ್ಗ, ಕೊಂಬೆಟ್ಟು, ಸಕ್ಕರೆಕಟ್ಟೆ ತನಕ ಪೇಟೆ ಸವಾರಿ ತೆರಳಿ ದೇವರು ದೇವಾಲಯಕ್ಕೆ ಮರಳಲಿದೆ.

LEAVE A REPLY

Please enter your comment!
Please enter your name here