Home ಧಾರ್ಮಿಕ ಸುದ್ದಿ ವಿವಿಧೆಡೆ ಸಂಭ್ರಮದ ವಿಷು ಆಚರಣೆ

ವಿವಿಧೆಡೆ ಸಂಭ್ರಮದ ವಿಷು ಆಚರಣೆ

1516
0
SHARE

ಮಹಾನಗರ : ಸೌರ ಯುಗಾದಿ ಅಂಗವಾಗಿ “ಬಿಸು ಪರ್ಬ’ವನ್ನು ನಗರದ ವಿವಿಧೆಡೆ ರವಿವಾರ ಸಂಭ್ರಮದಿಂದ ಆಚರಿಸಲಾಯಿತು. ಕೊಡಿಯಾಲ್‌ಬೈಲ್‌ನ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದಲ್ಲಿ ಮಧ್ಯಾಹ್ನ 12ರಿಂದ ಶ್ರೀ ಮಾತೆಯರಿಗೆ ವಿಷು ಕಣಿ ಸೇವೆಯು ನಡೆಯಿತು.

ಶರವು ದೇವಸ್ಥಾನದಲ್ಲಿ ಬೆಳಗ್ಗೆ 5.30ಕ್ಕೆ ವಿಷು ಕಣಿ ಪೂಜೆ ನಡೆದು ಬಳಿಕ ನಿತ್ಯ ಪೂಜೆ ಜರಗಿತು. ಮಹತೋಭಾರ ಮಂಗಳಾದೇವಿ ದೇವಸ್ಥಾನದಲ್ಲಿ ಬೆಳಗ್ಗೆ ವಿಷು ಕಣಿ ಇಟ್ಟು , ಮಧ್ಯಾಹ್ನ ದೇವರಿಗೆ ಅಲಂಕಾರ ಮಾಡಿ ಮಹಾಪೂಜೆಯ ಬಳಿಕ ಹೊಸ ಪಂಚಾಂಗವನ್ನು ಓದಲಾಯಿತು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಶ್ರೀ ಕೃಷ್ಣ ದೇವರ ಮೂರ್ತಿಯ ಮುಂಭಾಗದಲ್ಲಿ ವಿಷು ಕಣಿ ಇಡಲಾಯಿತು.

ಮೂಡಬಿದಿರೆಯ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಣಿ ಪೂಜೆ, ಉಳೆಪಾಡಿ ಶ್ರೀ ದುರ್ಗಾ ಪರಮೇಶ್ವರೀ ಮಹಮ್ಮಾಯಿ ದೇವಸ್ಥಾ ನದಲ್ಲಿ ವಿಷುಕಣಿ ಆರಾಧನೆ ನೆರವೇರಿತು.
ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಸಾಂಪ್ರ ದಾಯದಂತೆ ರವಿವಾರ ಕನ್ನಡಿಗೆ ಅಲಂಕಾರ ಮಾಡಿ ಹಸುರುವಾಣಿ ತರಕಾರಿಯೊಂದಿಗೆ ಇರಿಸಲಾಗಿದ್ದ ಕಣಿಯನ್ನು ನೋಡಿದ ಅನಂತರ ಭಕ್ತರು ಶ್ರೀದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ದೇಗುಲದಲ್ಲಿ ವಿಶೇಷ ಪೂಜೆ ಜರಗಿದವು. ಸಂಜೆ ದೇವಸ್ಥಾನದ ಪವಿತ್ರ ಪಾಣಿ ಅತ್ತೂರುಬೈಲು ಉಡುಪರು ಕ್ಷೇತ್ರಕ್ಕೆ ಆಗಮಿಸಿ ನೂತನ ಪಂಚಾಂಗ ಫಲವನ್ನು ಪಠಿಸಿದರು. ಸಂಜೆ ದೇವ ಸ್ಥಾ ನ ದಲ್ಲಿ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here