Home ಧಾರ್ಮಿಕ ಸುದ್ದಿ ಹಂಗಾರಕಟ್ಟೆ ಶ್ರೀ ಮಠದಲ್ಲಿ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಕಲಿಕಾ ವರ್ಗ

ಹಂಗಾರಕಟ್ಟೆ ಶ್ರೀ ಮಠದಲ್ಲಿ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಕಲಿಕಾ ವರ್ಗ

1054
0
SHARE

ಕೋಟ: ಪಶ್ಚಿಮ ಕರಾವಳಿ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಸಮಿತಿ ಆಶ್ರಯದಲ್ಲಿ ಹಂಗಾರಕಟ್ಟೆ ಬಾಳಕುದ್ರು ಶ್ರೀ ಮಠದಲ್ಲಿ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಕಲಿಕಾ ವರ್ಗ ಇತ್ತೀಚೆಗೆ ನಡೆಯಿತು.

ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರು ಆಶೀರ್ವಚನ ನೀಡಿ ಮಾತನಾಡಿ, ವಿಷ್ಣುನಾಮ ಸೋತ್ರ ಪಠಣದಿಂದ ಜೀವನದಲ್ಲಿ ಉತ್ತಮ ಬದಲಾವಣೆಗಳಾಗುತ್ತದೆ ಹಾಗೂ ಧಾರ್ಮಿಕ ಶಕ್ತಿ ಹೆಚ್ಚುತ್ತದೆ ಎಂದರು.

ಸಮಿತಿಯ ನಿರ್ದೇಶಕ ಡಾ. ಎಸ್‌. ಎನ್‌. ಪಡಿಯಾರ್‌ ಮಾತನಾಡಿ, ಕಡಲ್ಕೊರೆತ, ಸಮುದ್ರದಿಂದ ಉಂಟಾಗುವ ಹಾನಿ ಮುಂತಾದ ಪ್ರಕೃತಿ ವಿಕೋಪ ತಡೆಗಟ್ಟಲು ವಿಷ್ಣು ಸಹಸ್ರನಾಮ ಸ್ತೋತ್ರ ಬಹಳ ಪರಿಣಾಮಕಾರಿ. ಆದ್ದರಿಂದ ಪ್ರತಿಯೊಬ್ಬರು ಇದನ್ನ
ಪಠಿಸುವಂತೆ ಕರೆ ನೀಡಿದರು.

ಮಠದ ಆಡಳಿತಾಧಿಕಾರಿ ಶಂಭು ಶೆಟ್ಟಿ, ಸಮಿತಿಯ ಅರುಣ ಪಡಿಯಾರ್‌, ಸಂತೋಷ್‌ ಕೋಣಿ, ಚಂದ್ರಶೇಖರ್‌ ಪಡಿಯಾರ್‌, ಶಶಿಕಲಾ ಬಿಜೂರ್‌, ರಶ್ಮೀರಾಜ್‌, ವಿದ್ಯಾಗೋಪಾಲ್‌, ಮಠದ ಗಣೇಶ ಉಡುಪ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here