ಸಂಪ್ಯ : ಇಲ್ಲಿನ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ದೇವರ ವಿಗ್ರಹಕ್ಕೆ ಬೆಳ್ಳಿಯ ಮುಖ ಕವಚ ಹಾಗೂ ಬೆಳ್ಳಿಯ ಪುಷ್ಪಮಾಲೆ ಅರ್ಪಣೆ ಮಾಡಲಾಯಿತು. ಕಂಬಳಪದವು ನಿವಾಸಿ, ಮಂಗಳೂರು ಪೈಪ್ಸ್ ಕಂಪೆನಿ ವ್ಯವಸ್ಥಾಪಕ ರವಿನಾರಾಯಣ ಕಾರಂತ ಹಾಗೂ ಮನೆಯವರು ಸೇವಾರ್ಥ ಬೆಳ್ಳಿಯ ಮುಖ ಕವಚ ಹಾಗೂ ಪುಷ್ಪಮಾಲೆಯನ್ನು ನೀಡಿದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾಗಿ ಲಕ್ಷ್ಮಣ್ ಬೈಲಾಡಿ, ಶಿವಪ್ಪ ಮೂಲ್ಯ, ಪ್ರೇಮಾ ಸಫಲ್ಯ, ಅರ್ಚಕರಾದ ಪ್ರಶಾಂತ್ ಕಲ್ಲೂರಾಯ, ಉದಯ ನಾರಾಯಣ ಕಲ್ಲೂರಾಯ, ಶ್ರವಣ್ ಭಟ್, ಅಮಿತಾ ರವೀಂದ್ರ ಶೆಟ್ಟಿ ನುಳಿಯಾಲು, ಸುಜೀರ್ ಶೆಟ್ಟಿ, ಸುದರ್ಶನ್ ಭಟ್, ತೇಜಸ್ ಗೌಡ, ಮುರಳೀಧರ ಆಚಾರ್ಯ, ನವೀನ್ ಗೌಡ ಉಪಸ್ಥಿತರಿದ್ದರು.