Home ಧಾರ್ಮಿಕ ಸುದ್ದಿ ವಿಷ್ಣುಮೂರ್ತಿ ದೈವದ ನೇಮ

ವಿಷ್ಣುಮೂರ್ತಿ ದೈವದ ನೇಮ

864
0
SHARE

ಪುಂಜಾಲಕಟ್ಟೆ: ಬಂಟ್ವಾಳ ತಾ| ಅಜ್ಜಿಬೆಟ್ಟು ಗ್ರಾಮದ ನೀಲಿ ಶ್ರೀ ವಿಷ್ಣುಮೂರ್ತಿ ಶ್ರೀ ಕೊಡಮಣಿತ್ತಾಯ, ಕಲ್ಕುಡ-ಕಲ್ಲುರ್ಟಿ, ಬ್ರಹ್ಮಬೈದರ್ಕಳ ಗರಡಿ ದೈವಸ್ಥಾನದಲ್ಲಿ ವಿಷ್ಣುಮೂರ್ತಿ ದೈವದ ನೇಮವು ಜ. 21ರಂದು ರಾತ್ರಿ ನಡೆಯಿತು.

ಪೆಜಕ್ಕಳ ಗಂಗಾಧರ ಕಕೃಣ್ಣಾಯ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಸಂಜೆ ಅಜ್ಜಿಬೆಟ್ಟು ಗುತ್ತಿನಿಂದ ಭಂಡಾರ ಆಗಮಿಸಿತು. ಧ್ವಜಾರೋಹಣ ನಡೆದು ಶ್ರೀ ವಿಷ್ಣುಮೂರ್ತಿ ದೈವದ ನೇಮ ಹಾಗೂ ರಾತ್ರಿ ನೃತ್ಯ ವೈಭವ ಕಾರ್ಯಕ್ರಮ, ತುಳು ನಾಟಕ ನಡೆಯಿತು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ರಾಜೇಂದ್ರ ಶೆಟ್ಟಿ, ಕಾರ್ಯದರ್ಶಿ ಪ್ರವೀಣ್‌ ಗಟ್ಟಿ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವಿನಾಯಕ ಪ್ರಭು, ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಧ್ವಜಸ್ತಂಭದ ಮರ ದಾನಿ ಅಣ್ಣು ಕಂಬಳಿ ಪಚ್ಚೇರು, ಉತ್ಸವ ಸಮಿತಿ ಗೌರವಾಧ್ಯಕ್ಷ ವೀರಪ್ಪ ಶೆಟ್ಟಿ ಕಂಚಾರು, ಅಧ್ಯಕ್ಷ ಕಾಂತಪ್ಪ ಶೆಟ್ಟಿ ಪಡ್ಲೊಟ್ಟು, ಕಾರ್ಯದರ್ಶಿ ಕೊರಗಪ್ಪ ಶೆಟ್ಟಿ ತಿರ್ಮಲೊಟ್ಟು, ಧ್ವಜಸ್ತಂಭ ನಿರ್ಮಾಣ ಸಮಿತಿ ಅಧ್ಯಕ್ಷ ಅಮ್ಮು ರೈ ಹರ್ಕಾಡಿ, ಕಾರ್ಯದರ್ಶಿ ಮಾಧವ ಪೂಜಾರಿ ಕುಲ್ಲಾಲ್‌, ಮುಂಬೈ ಸಮಿತಿ ಅಧ್ಯಕ್ಷ ಗಣೇಶ್‌ ಶೆಟ್ಟಿ, ಕಾರ್ಯದರ್ಶಿ ಸುರೇಶ್‌ ಶೆಟ್ಟಿ, ವಿವಿಧ ಸಮಿತಿ ಪ್ರಮುಖರಾದ ಯೋಗೀಶ್‌ ಪ್ರಭು, ಕೃಷ್ಣ ಶೆಟ್ಟಿ, ಉಮೇಶ್‌ ಕೋಟ್ಯಾನ್‌, ಕೃಷ್ಣ ನಾಯಕ್‌, ಉಷಾ ಇಂದುಶೇಖರ್‌, ನಳಿನಿ, ಪದ್ಮನಾಭ ಶೆಟ್ಟಿ, ಮೋಹನದಾಸ ಗಟ್ಟಿ, ಯತೀಶ್‌ ಶೆಟ್ಟಿ, ಆನಂದ ಆಚಾರ್ಯ, ಸುರೇಶ್‌ ಶೆಟ್ಟಿ, ಭವಾನಿ ಶಂಕರ್‌, ವಿಶ್ವನಾಥ ಶೆಟ್ಟಿ, ಡೊಂವಯ ಶೆಟ್ಟಿ, ಹರೀಶ್‌ ಶೆಟ್ಟಿ, ಸುಂದರ ಶೆಟ್ಟಿ, ಗೋಪಾಲಕೃಷ್ಣ ಚೌಟ, ಆನಂದ ಶೆಟ್ಟಿ, ಮಹಾಬಲ ಶೆಟ್ಟಿ, ಸದಾಶಿವ ಪೂಜಾರಿ, ಯುವರಾಜ ಆಳ್ವ, ಆನಂದ ಕುಲ್ಲಾಲ್‌, ಸುಧೀರ್‌ ಕುಮಾರ್‌, ಯಶ್ವಿ‌ನ್‌ ಕಡ್ತಾಲಬೆಟ್ಟು ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here