ಚಿತ್ರಾಪುರ: ಇಲ್ಲಿನ ಮಠದ ಹಿರಿಯ ಯತಿಗಳಾದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ವೃಂದಾವನ ಪ್ರವೇಶಗೈದಿರುವುದರಿಂದ ಗುರುಗಳ ಪ್ರಥಮ ಆರಾಧಾನ ಮಹೋತ್ಸವದ ಅಂಗವಾಗಿ ವಿಶೇಷ ಧಾರ್ಮಿಕ ಸಭೆ ಪುತ್ತಿಗೆ ಸುಗುಣೇಂದ್ರತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಜರಗಿತು. ಮಠದ ಕಿರಿಯ ಯತಿಗಳಾದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ಸರ್ವರೂ ಪಾಲ್ಗೊಳ್ಳಿ
ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಮಠದ ಬೆಳವಣಿಗೆ ಮತ್ತು ಕಾರ್ಯಕ್ರಮದಲ್ಲಿ ಸರ್ವರೂ ಪಾಲ್ಗೊಳ್ಳಬೇಕು. ಶ್ರೀದೇವಿಯು ಒಳಿತನ್ನುಂಟು ಮಾಡಲಿ ಎಂದರು.
ಮನಪಾ ಸದಸ್ಯರಾದ ಪುರುಷೋತ್ತಮ್ ಚಿತ್ರಾಪುರ, ಗಣೇಶ್ ಹೊಸಬೆಟ್ಟು, ಸ್ಥಳೀಯ ಮೊಗವೀರ ಮಹಾಸಭಾದ ಮುಖಂಡ ವಾಸುದೇವ ಸಾಲ್ಯಾನ್, ಮೋಹನ್ ಕೋಡಿಕಲ್, ಉಮೇಶ್ ಕರ್ಕೇರ, ಕೇಶವ ಸಾಲ್ಯಾನ್, ಶಂಕರ ವಿ. ಸಾಲ್ಯಾನ್, ಸುರೇಶ್, ಬಲರಾಂ, ಮಕ್ಕಳ ಗಣೇಶೋತ್ಸವ ಸಮಿತಿಯ ಸಂದೀಪ್, ರಾಘವೇಂದ್ರ ಎಚ್.ವಿ., ಪುಂಡಲೀಕ ಹೊಸಬೆಟ್ಟು, ಶ್ರೀನಿವಾಸ್ ಪುತ್ರನ್ ಕುಳಾಯಿ, ಮಾಧವ ಸುವರ್ಣ, ಭರತ್ ಕುಮಾರ್ ಉಪಸ್ಥಿತರಿದ್ದರು.
ಹಸುರು ಹೊರೆಕಾಣಿಕೆ ಮೆರವಣಿಗೆ ಸ್ಥಳೀಯ ಮೊಗವೀರ ಮಹಾಸಭಾ ಸಂಸ್ಥೆ ಗಳಿಂದ, ಊರಿನವರಿಂದ ಜರಗಿತು. ಶ್ರೀನಿವಾಸ್ ಕುಳಾಯಿ ನಿರೂಪಿಸಿದರು.