Home ಧಾರ್ಮಿಕ ಸುದ್ದಿ ವೇಣೂರು ದೇಗುಲ: ಕಲಶಾಭಿಷೇಕ, ದೈವಗಳ ಪ್ರತಿಷ್ಠೆ

ವೇಣೂರು ದೇಗುಲ: ಕಲಶಾಭಿಷೇಕ, ದೈವಗಳ ಪ್ರತಿಷ್ಠೆ

1260
0
SHARE

ವೇಣೂರು : ಅಜಿಲ ಸೀಮೆಗೆ ಒಳಪಟ್ಟ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ಮಹಾಪೂರುಷ, ರಕ್ತೇಶ್ವರೀ ಹಾಗೂ ಅಂಗಣ ಪಂಜುರ್ಲಿ ಧೈವಗಳ ಪ್ರತಿಷ್ಠೆ ನೆರವೇರಿತು.

ಬೆಳಗ್ಗೆ ಗಣಪತಿ ಹೋಮ, ಶ್ರೀ ಮಹಾಲಿಂಗೇಶ್ವರ ದೇವರಿಗೆ ಕಲಶಾಭಿಷೇಕ, ಭದ್ರ ಮಹಾಕಾಳಿ ದೇವಿಯ ಬಿಂಬಶುದ್ಧಿ, ಶಾಂತಿ-ಪ್ರಾಯಶ್ಚಿತ್ತ ಹೋಮ, ಅನುಜ್ಞಾ ಕಲಶ ಪೂಜೆ, ಸಂಹಾರ ತತ್ತ ಕಲಶ-ಹೋಮ, ಅನುಜ್ಞಾ ಕಲಶ-ಸಂಹಾರ, ತತ್ತÌ ಕಲಶಾಭಿಷೇಕ, ಜೀವ ಕಲಶ ಪೂಜೆ, ಮಂಟಪ ಸಂಸ್ಕಾರ, ಕುಂಭೇಶ-ಕರ್ಕರೀ ಪೂಜೆ, ಶಯ್ನಾ ಕಲ್ಪನೆ, ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ಸಂಜೆ ಧ್ಯಾನಾಧಿವಾಸ, ಅಧಿವಾಸ ಹೋಮ, ಮಂಡಲಪೂಜೆ, ಬ್ರಹ್ಮಕಲಶ ಪೂರಣಿ, ಕಲಶಾಭಿವಾಸ ಹೋಮ, ಮಹಾಪೂಜೆ, ಬುಧವಾರ ಸಂಜೆ ಸಾಮೂಹಿಕ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ,

ವಾಸ್ತು ಹೋಮ, ವಾಸ್ತು ಪೂಜ ಬಲಿ ಮುಂತಾದ ಪೂಜೆಗಳು ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ| ಪದ್ಮಪ್ರಸಾದ ಅಜಿಲರ ಉಪಸ್ಥಿತಿಯಲ್ಲಿ ಜರಗಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯರಾಮ ಶೆಟ್ಟಿ, ಸದಸ್ಯರಾದ ಅಶೋಕ್‌ ಪಾಣೂರು, ಸತೀಶ್‌ ಹೆಗ್ಡೆ, ಭಾಸ್ಕರ ಬಲ್ಯಾಯ, ವಿಮಲಚಂದ್ರ ಕೋಟ್ಯಾನ್‌, ಕಾರ್ಯಾಧ್ಯಕ್ಷರಾದ ಪಿ. ಧರಣೇಂದ್ರ ಕುಮಾರ್‌, ಸೋಮಯ್ಯ ಹನೈನಡೆ, ಪ್ರ. ಕಾರ್ಯದರ್ಶಿ ಪ್ರಭಾಕರ ಹೆಗ್ಡೆ ಹಟ್ಟಾಜೆ, ಕುಂಞೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ್‌ ಪೊಕ್ಕಿ, ಪ್ರಮುಖರಾದ ಜಗದೀಶ್ಚಂದ್ರ ಡಿ.ಕೆ., ಪ್ರವೀಣ್‌ಕುಮಾರ್‌ ಇಂದ್ರ, ರಮೇಶ್‌ ಪೂಜಾರಿ ಪಡ್ಡಾಯಿಮಜಲು, ತೇಜಾಕ್ಷಿ ಆನಂದ, ಜಗದೀಶ್‌ ಭಟ್‌, ಪ್ರವೀಣ್‌ಕುಮಾರ್‌ ಇಂದ್ರ, ಶಾಂತ ಬಾಬು ಕುಂದರ್‌, ಅರವಿಂದ ಶೆಟ್ಟಿ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here