Home ಧಾರ್ಮಿಕ ಸುದ್ದಿ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಜೀರ್ಣೋದ್ಧಾರ: ಪೂರ್ವಭಾವಿ ಸಭೆ

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಜೀರ್ಣೋದ್ಧಾರ: ಪೂರ್ವಭಾವಿ ಸಭೆ

1132
0
SHARE

ಬೆಳ್ತಂಗಡಿ: ಅಜಿಲ ಸೀಮೆಯ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕುರಿತು ಪೂರ್ವಭಾವಿ ಸಭೆ ದೇಗುಲದ ವಠಾರದಲ್ಲಿ ಶನಿವಾರ ಜರಗಿತು. ಅಜಿಲ ಸೀಮೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು 32 ಗ್ರಾಮ ವ್ಯಾಪ್ತಿಗೆ ಸೇರಿದೆ. ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ದೇವಸ್ಥಾನವು ಇದೀಗ ವ್ಯವಸ್ಥಾಪನ ಸಮಿತಿಯಿಂದ ಗರ್ಭಗುಡಿ ಸಹಿತ ಸಂಪೂರ್ಣ ಪುನರ್‌ ನಿರ್ಮಾಣ ಕುರಿತು ಸಭೆ ನಡೆಸಲಾಯಿತು.

ಈ ವೇಳೆ ವಾಸ್ತು ಶಿಲ್ಪಿ ಬೆದ್ರಡ್ಕ ರಮೇಶ್‌ ಕಾರಂತ, ವ್ಯವಸ್ಥಾಪನ ಸಮಿತಿ ಮುಖ್ಯಸ್ಥರಾದ ಎ. ಜಯರಾಮ ಶೆಟ್ಟಿ, ಸದಸ್ಯರಾದ ಅಶೋಕ್‌ ಪಾನೂರ್‌, ಸತೀಶ್‌ ಹೆಗ್ಡೆ, ವಿಮಲಾ ಚಂದ್ರ ಕೋಟ್ಯಾನ್‌, ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಧರಣೇಂದ್ರ ಕುಮಾರ್‌, ಪುರುಷೋತ್ತಮ್‌ ರಾವ್‌, ಸತೀಶ್‌, ವಿ. ಅರವಿಂದ ಶೆಟ್ಟಿ, ಕಿಶೋರ್‌ ಭಂಡಾರಿ, ರಮೇಶ್‌ ಪೂಜಾರಿ, ಯಜ್ಞನಾರಾಯಣ್‌ ಭಟ್, ನಟೇಶ್‌ ರಾವ್‌, ಗೋಪಾಲ್ ಪೂಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here