Home ಧಾರ್ಮಿಕ ಸುದ್ದಿ ವೆಂಕಟರಮಣ ದೇಗುಲ: ಮೃಗಬೇಟೆ ಉತ್ಸವ

ವೆಂಕಟರಮಣ ದೇಗುಲ: ಮೃಗಬೇಟೆ ಉತ್ಸವ

565
0
SHARE

ಮೂಲ್ಕಿ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಜಾತ್ರೆಯ ಅಂಗವಾಗಿ ಮೃಗ ಬೇಟೆ ಉತ್ಸವಕ್ಕಾಗಿ ಶ್ರೀ ಬಿಂಧುಮಾಧವ ದೇವರು ಮತ್ತು ಬ್ರಹ್ಮಕಲಶೋತ್ಸವದ ಮಹಾರಥೋತ್ಸವ ನಡೆಯುವಲ್ಲಿ ಪೇಟೆ ಸವಾರಿಗೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು, ಪಂಚಮಹಾಲ್‌ ಶ್ರೀ ಸದಾಶಿವ ದೇವ ಸ್ಥಾನದ ಎದುರು ಮೊತ್ತ ಮೊದಲ ಬಾರಿಗೆ ಸಮಾಗಮ ಭೇಟಿ ಮತ್ತು ಮೂರು ದೇವರಿಗೆ ಏಕ ಕಾಲದಲ್ಲಿ ವಿಶೇಷ ಪೂಜೆ ನಡೆಯಿತು.

ತಡ ರಾತ್ರಿಯಾದರು ಈ ಅಪರೂಪದ ಕಾರ್ಯಕ್ರಮ ವೀಕ್ಷಿಸಲು ಸಹಸ್ರಾರು ಭಕ್ತರು ಸೇರಿದ್ದರು. ಶಾಸಕ ಕೆ.ಅಭಯಚಂದ್ರ ಜೈನ್‌, ಮೂಲ್ಕಿ ಸೀಮೆಯರಸ ದುಗ್ಗಣ್ಣ ಸಾವಂತರು, ಮೂರು ದೇಗುಲಗಳ ಆಡಳಿತ ಮಂಡಳಿ ಮುಖ್ಯಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here