Home ಧಾರ್ಮಿಕ ಸುದ್ದಿ ವೆಂಕಟರಮಣ ದೇವಸ್ಥಾನ: ಗುರ್ಜಿ ದೀಪೋತ್ಸವ

ವೆಂಕಟರಮಣ ದೇವಸ್ಥಾನ: ಗುರ್ಜಿ ದೀಪೋತ್ಸವ

1854
0
SHARE

ಮಹಾನಗರ: ಕಾರ್ತಿಕ ಹುಣ್ಣಿಮೆಯ ದಿನವಾದ ಶುಕ್ರವಾರ ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ವತಿಯಿಂದ ಗುರ್ಜಿ ದೀಪೋತ್ಸವ ನಡೆಯಿತು.
ಶ್ರೀ ವೆಂಕಟರಮಣ ಹಾಗೂ ಶ್ರೀ ಕುಡ್ತೆರಿ ಮಹಾಮಾಯ ದೇವರು ವನಭೋಜನಕ್ಕಾಗಿ ವಿ.ಟಿ. ರಸ್ತೆಯ ದೇವರ ತೀರ್ಥಕ್ಕೆ ಧಾತ್ರಿ ಹವನ, ಮಧ್ಯಾಹ್ನ ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯಿತು.

ಕೆರೆಯ ವಠಾರದಲ್ಲಿರುವ ಗುರ್ಜಿಯಲ್ಲಿ ಪೂಜೆಯ ಬಳಿಕ ಶ್ರೀ ವೆಂಕಟರಮಣ ದೇಗುಲದ ಮುಂಭಾಗದಲ್ಲಿ ಅಲಂಕರಿಸಿದ ಗುರ್ಜಿಯಲ್ಲಿ ಪೂಜಾದಿ ವಿಧಿಗಳು ನಡೆದವು. ಇದೇ ಸಂದರ್ಭದಲ್ಲಿ ಸೇವಾ ರೂಪದಲ್ಲಿ ವಿಶೇಷ ಸುಡುಮದ್ದು ಪ್ರದರ್ಶನ ಏರ್ಪಡಿಸಲಾಗಿತ್ತು. ಪೂಜೆಯ ಬಳಿಕ ಗುರ್ಜಿಯನ್ನು ಅಲಂಕರಿಸಿದ ತರಕಾರಿ, ಹಣ್ಣು ಹಂಪಲುಗಳನ್ನು ಬಹಿರಂಗವಾಗಿ ಹರಾಜು ಮಾಡಲಾಯಿತು.

ಶನಿವಾರ ಮರು ದೀಪೋತ್ಸವದ ಅಂಗವಾಗಿ ಸಂಜೆ ದೀಪ ನಮಸ್ಕಾರ ಹಾಗೂ ರಾತ್ರಿ ಪೂಜೆಯ ಬಳಿಕ ಉಭಯ ದೇವರ ಉತ್ಸವ ಗದ್ದೆಕೇರಿ, ಡೊಂಗರಕೇರಿ ಗುರ್ಜಿ, ನ್ಯೂ ಚಿತ್ರಾ, ಚಾಮರಗಲ್ಲಿ, ರಥಬೀದಿಯಾಗಿ ಸಾಗಿ ಶರವು ದೇವಸ್ಥಾನ ರಸ್ತೆ, ನಂದಾದೀಪ, ಜೋಡುಮಠ, ಹೂ ಮಾರ್ಕೆಟ್‌ ರಸ್ತೆ, ಪುತ್ತು ಪ್ರಭು ಲೇನ್‌ ಮೂಲಕ ಸಾಗಿ ದೇಗುಲದ ಮುಂಭಾಗಲ್ಲಿರುವ ಅಶ್ವತ್ಥ ಕಟ್ಟೆಯಲ್ಲಿ ಪೂಜೆಯ ಬಳಿಕ ದೇಗುಲಕ್ಕೆ ಹಿಂದಿರುಗಿತು.

ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಸಿ.ಎಲ್‌. ಶೆಣೈ, ರಾಮಚಂದ್ರ ಕಾಮತ್‌, ಶ್ರೀ ಕುಡ್ತೆರಿ ಮಹಮಾಯ ದೇವಸ್ಥಾನದ ಮೊಕ್ತೇಸರ ಶ್ರೀನಿವಾಸ್‌ ಕಾಮತ್‌, ಗೋವಿಂದ ಪೈ, ಪ್ರಕಾಶ್‌ ಕಾಮತ್‌, ಸುರೇಂದ್ರ ಕಾಮತ್‌ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here