ಮಹಾನಗರ: ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಬುಧ ವಾರ ಮುಕ್ಕೋಟಿ ಏಕಾದಶಿಯಂದು ಮುಂಜಾನೆ 6ಕ್ಕೆ ಪ್ರಾರಂಭಗೊಂಡ ಏಕಾಹ ಭಜನೆ ನಿರಂತರ 24ಗಂಟೆ ನಡೆಯಿತು.
ಊರ ಹಾಗೂ ಇತರ ಜಿಲ್ಲೆಗಳಿಂದ ಆಗಮಿಸಿದ 30ಕ್ಕೂ ಅಧಿಕ ಭಜನ ಮಂಡಳಿ ಗಳು ಶ್ರೀ ವೀರ ವೇಂಕಟೇಶ ದೇವರ ದಿವ್ಯ ಸನ್ನಿಧಾನದಲ್ಲಿ ತಮ್ಮ ಸೇವೆ ಸಲ್ಲಿಸಿದರು.
ಗುರವಾರ ಮುಕ್ಕೋಟಿ ದ್ವಾದಶಿ ಆಚರಣೆಯ ಪ್ರಯುಕ್ತ ಪ್ರಾತಃಕಾಲ 5.30ಕ್ಕೆ ಏಕಾಹ ಭಜನೆಯ ಮಂಗಲ ನಡೆಯಿತು. ಶ್ರೀ ದೇವರು ಪುಷ್ಪಾಲಂಕೃತ ಬೆಳ್ಳಿ ಲಾಲ್ಕಿಯಲ್ಲಿ ವಿ.ಟಿ. ರಸ್ತೆಯಲ್ಲಿರುವ ಶ್ರೀ ದೇವರ ತೀರ್ಥಕ್ಕೆ ತೆರಳಿ ತೀರ್ಥಸ್ನಾನ ಹಾಗೂ ಪೂಜೆ ನಡೆದ, ಬಳಿಕ ಪೇಟೆಯಲ್ಲಿ ಉತ್ಸವ ಸಾಗಿತು.
ಮಧ್ಯಾಹ್ನ ಮಹಾಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯಿತು. ರಾತ್ರಿ ಪೂಜೆಯ ಬಳಿಕ ಸಣ್ಣ ರಥೋತ್ಸವ ನಡೆ ಯಿತು. ದೇಗುಲದ ಪ್ರಧಾನ ಅರ್ಚಕರಾದ ನರಸಿಂಹ ಭಟ್, ಹರೀಶ್ ಭಟ್, ದೇಗುಲದ ಮೊಕ್ತೇಸರರಾದ ಸಿ.ಎಲ್. ಶೆಣೈ, ಕೆ.ಪಿ. ಪ್ರಶಾಂತ್ ರಾವ್, ರಾಮಚಂದ್ರ ಕಾಮತ್ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.