ಬಂಟ್ವಾಳ: 108 ಮುನಿಶ್ರೀ ವೀರ ಸಾಗರ ಮಹಾರಾಜರ 2018ರ ಚಾತುರ್ಮಾಸ್ಯ ಭವ್ಯ ಮಂಗಲ ಪಾವನ ವರ್ಷಾಯೋಗ (ಚಾತುರ್ಮಾಸ್ಯ ವ್ರತ)ವನ್ನು ಕಾರ್ಕಳ ಧರ್ಮನಗರದ ಶ್ರೀ ಬಾಹುಬಲಿ ಕ್ಷೇತ್ರದಲ್ಲಿ ನಡೆಸಲು ಸಮ್ಮತಿ ಸೂಚಿಸಿದ್ದಾರೆ. ಜೂ. 18ರಂದು ಪಾಣೆಮಂಗಳೂರು ಶ್ರೀ ಅನಂತನಾಥ ತೀರ್ಥಂಕರ ಜಿನ ಚೈತ್ಯಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಷಯ ಪ್ರಕಟಿಸಿದರು. 2017ರಲ್ಲಿ ಅವರು ಪಾಣೆಮಂಗಳೂರಲ್ಲಿ ತನ್ನ ಚಾತುರ್ಮಾಸ್ಯ ಪೂರೈಸಿದ್ದರು.
ಧರ್ಮಸಭೆಯಲ್ಲಿ ಸಮಾಜದ ಪ್ರಮುಖರಾದ ಸಂಪತ್ಕುಮಾರ್ ಶೆಟ್ಟಿ, ರತ್ನಾಕರ ಜೈನ್ ಮಂಗಳೂರು, ಸುದರ್ಶನ್ ಜೈನ್, ಧರಣೇಂದ್ರ ಇಂದ್ರ, ಭುವನೇಂದ್ರ ಇಂದ್ರ, ಪ್ರವೀಣ್ ಕುಮಾರ್, ಹರ್ಷರಾಜ್ ಬಲ್ಲಾಳ್, ಆದಿರಾಜ್ ಜೈನ್ ಉಪಸ್ಥಿತರಿದ್ದರು. ದೀಪಕ್ ಕುಮಾರ್ ಇಂದ್ರ ಕಾರ್ಯಕ್ರಮ ನಿರೂಪಿಸಿದರು.