Home ಧಾರ್ಮಿಕ ಸುದ್ದಿ ವಿವಿಧ ವೈದಿಕ ಕಾರ್ಯಕ್ರಮ; ಗಮನ ಸೆಳೆದ ಗಾಯನ, ನೃತ್ಯ ವೈವಿಧ

ವಿವಿಧ ವೈದಿಕ ಕಾರ್ಯಕ್ರಮ; ಗಮನ ಸೆಳೆದ ಗಾಯನ, ನೃತ್ಯ ವೈವಿಧ

1447
0
SHARE

ಪೊಳಲಿ: ಇಲ್ಲಿನ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ವಿಧಿ ವಿಧಾನಗಳು ಜರುಗುತ್ತಿದ್ದು, ಮೂರನೇ ದಿನವಾದ ಬುಧವಾರ ಹಲವು ವೈದಿಕ- ಸಾಂಸ್ಕೃತಿಕ- ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಬುಧವಾರ ಬೆಳಗ್ಗೆ 6ರಿಂದ ಪುಣ್ಯಾಹ, ಗಣಪತಿ ಹೋಮ, ವಿಷ್ಣು ಸಹಸ್ರನಾಮ ಹೋಮ, ಸಪರಿವಾರ ಶ್ರೀ ರಾಜರಾಜೇಶ್ವರಿ ದೇವರುಗಳಿಗೆ ಕ್ಷಾಲನಾದಿ ಬಿಂಬಶುದ್ಧಿ, ಸ್ಕಂದಪ್ರೋಕ್ತ ಹೋಮ, ವಿಘ್ನಪ್ರೋಕ್ತ ಹೋಮ, ದ್ವಾರಶಾಂತಿ, ಭದ್ರಕಾಳಿ ದೇವರಿಗೆ ವಿಶೇಷ ಶಾಂತಿಹೋಮ, ಹೋಮ ಕಲಶಾಭಿಷೇಕ, ಅಂಕುರ ಪೂಜೆ ಮಧ್ಯಾಹ್ನ ಮಹಾ ಪೂಜೆ ನಡೆಸಲಾಯಿತು. ಸಂಜೆ 5 ಗಂಟೆ ಯಿಂದ ದುರ್ಗಾಪೂಜೆ, ಕುಂಡಶುದ್ಧಾದಿಗಳು, ಅಂಕುರ ಪೂಜೆ ಹಾಗೂ ಮಹಾಪೂಜೆ ನಡೆಯಿತು.

ಉಳಿಪಾಡಿಗುತ್ತಿನಿಂದ ಪೊಳಲಿ ದೇವಸ್ಥಾನದ ಕೊಡ ಮಣಿತ್ತಾಯ ದೈವದ ಬೆಳ್ಳಿ ಹಾಗೂ ಚಿನ್ನಗಳಿಂದ ನಿರ್ಮಿಸಿದ ಮೊಗ, ಕಡ್ಸಲೆ, ಮುಖವಾಡ, ಮೂರ್ತಿಯನ್ನು ದೇವಸ್ಥಾನದ ಸನ್ನಿಯಲ್ಲಿ ಅರ್ಪಿಸಲಾಯಿತು. ಮೆಚ್ಚುಗೆಗೆ ಪಾತ್ರವಾದ ಸಾಕ್ಸೋಪೋನ್‌ ವಾದನ ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ಬುಧವಾರ ಬೆಳಗ್ಗೆ 8.30ರಿಂದ ಆರ್ಯಭಟ ಪ್ರಶಸ್ತಿ ವಿಜೇತೆ ಮೇಘ ಸಾಲಿಗ್ರಾಮ ಹಾಗೂ ಬಳಗದವರಿಂದ ಸ್ಯಾಕ್ಸೋಪೋನ್‌ ವಾದನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೊಳಲು ವರುಣ ಮಂಗಳೂರು, ಡೋಲಕ್‌ ನಾಗೇಶ್‌ ಉದ್ಯಾವರ ಮತ್ತು ತಾಳ ದುರ್ಗಾದಾಸ್‌ ಉಡುಪಿ ಪಾಲ್ಗೊಂಡಿದ್ದರು. ಬೆಳಗ್ಗೆ ಶ್ರೀ ಮಂಜುನಾಥೇಶ್ವರ ಕಾಳಬೈರವ ಭಜನ ಮಂದಿರ ಮಟ್ಟಿ ಮಳಲಿ, ಶ್ರೀದೇವಿ ಭಜನ ಮಂಡಳಿ ಮೂಡುಶೆಡ್ಡೆ, ಸಂಜೆ ಶ್ರೀಗಣೇಶ್‌ ಮತ್ತು
ಪಾಂಡುರಂಗ ಭಜನಾ ಮಂಡಳಿ ವಾಮ ದಪದವು ತಂಡದಿಂದ ಭಜನೆ ಕಾರ್ಯಕ್ರಮ ನಡೆಯಿತು.

ಶ್ರೀ ರಾಜರಾಜೇಶ್ವರಿ ವೇದಿಕೆಯಲ್ಲಿ 11.30 ರಿಂದ ರಾಜೇಶ್‌ ಪೂಳಲಿ ಅವರಿಂದ ಸ್ಯಾಕ್ಸೋಪೋನ್‌ ವಾದನ ಜರಗಿತು. ಮಧ್ಯಾಹ್ನ ಶಿವಾಂಕಂ ಬೆಂಗಳೂರು ತಂಡದವರು ಭರತನಾಟ್ಯ ನಡೆಸಿ ಕೊಟ್ಟರು. ಅತ್ರೇಯಿ ಕೃಷ್ಣ ಕಾರ್ಕಳ ಇವರಿಂದ ಕರ್ಣಾಟಕ ಸಂಗೀತ, ಅಶ್ವಿ‌ನಿ ಕುಂಡದಕುಳಿ ಅವರಿಂದ ಯಕ್ಷಗಾನ ಜರುಗಿತು.

ಸಂಜೆ ಫಯಾಸ್‌ಖಾನ್‌ ಮತ್ತು ಬಳಗ ಬೆಂಗಳೂರು ಇವರಿಂದ ಹಿಂದೂಸ್ಥಾನಿ ಗಾಯನವನ್ನು ಸಾವಿರಾರು ಮಂದಿ ವೀಕ್ಷಿಸಿದರು. ರಾತ್ರಿ ವಿದ್ವಾನ್‌ ಸುಧೀರ್‌ ರಾವ್‌ ಕೊಡವೂರು ನಿರ್ದೇಶನದಲ್ಲಿ ನೃತ್ಯ ನಿಕೇತನ ಕೊಡವೂರು ಪ್ರಸ್ತುತ ಪಡಿಸುವ ನೃತ್ಯ ವೈವಿಧ್ಯ ಮನಮೋಹಕವಾಗಿತ್ತು.

ರಾತ್ರಿ 10ರಿಂದ ಶ್ರೀ ಭಗವತೀ ತೀಯಾ ಸೇವಾ ಸಮಿತಿ ಪೊಳಲಿ ಇವರಿಂದ ಯಕ್ಷಗಾನ ನಡೆಯಿತು. ಮಾ. 5ರಂದು ರಾತ್ರಿ ರಮೇಶ್ಚಂದ್ರ ಬೆಂಗಳೂರು ಸಂಯೋಜಿಸಿದ ಸಂಗೀತ ಸಂಭ್ರಮ ಗಾನಲೋಕದಲ್ಲಿ ತೇಲಾಡಿಸಿತು.

ಸಾಮರ್ಥ್ಯದ ಸಂಸ್ಕರಣಾ ಘಟಕ ಅಳವಡಿಕೆ ಪೊಳಲಿ ಬ್ರಹ್ಮಕಲಶೋತ್ಸವದ ನಿಮಿತ್ತ ದೇವಸ್ಥಾನದ ಆವರಣದ ಸಮಗ್ರ ಸ್ವತ್ಛತೆಯನ್ನು ಕಾಯ್ದುಕೊಳ್ಳಲು ಸುಮಾರು 50.000 ಲೀಟರ್‌ ಸಾಮರ್ಥ್ಯದ ಸಂಸ್ಕರಣಾ ಘಟಕವನ್ನು ಅಳವಡಿಸಲಾಗಿದೆ. ದೇವಸ್ಥಾನದ ಕೈ ತೊಳೆಯುವ ಮತ್ತು ಅನ್ನದಾನದ ತ್ಯಾಜ್ಯ ನೀರು, ಫಲ್ಗುಣಿ ವಸತಿಗೃಹದ ತ್ಯಾಜ್ಯ ನೀರು, ಸರ್ವ ಮಂಗಳ ಕಲ್ಯಾಣ ಮಂಟಪದ ತ್ಯಾಜ್ಯ ನೀರು, ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯದ ತ್ಯಾಜ ನೀರನ್ನು ಸಂಸ್ಕರಿಸುವ ಸಾಮರ್ಥ್ಯ ಇದು ಹೊಂದಿದೆ. ಜತೆಗೆ ಸ್ವಯಂಸೇವಕರ ದಂಡು ದೇವಸ್ಥಾನದ ಆವರಣದ ಎಲ್ಲ ಕಡೆಗಳಲ್ಲಿ ಸ್ವತ್ಛತೆಯನ್ನು ನಡೆಸಿಕೊಂಡು ಬರುತ್ತಿದೆ.

LEAVE A REPLY

Please enter your comment!
Please enter your name here