Home ಧಾರ್ಮಿಕ ಕಾರ್ಯಕ್ರಮ ಶ್ರೀ ಅಮೃತೇಶ್ವರ ದೇವಸ್ಥಾನ ಹಗಲು ರಥೋತ್ಸವ

ಶ್ರೀ ಅಮೃತೇಶ್ವರ ದೇವಸ್ಥಾನ ಹಗಲು ರಥೋತ್ಸವ

1571
0
SHARE
ತಿರುವೈಲಿನ ಶ್ರೀ ಅಮೃತೇಶ್ವರ ದೇವಸ್ಥಾನ ಹಗಲು ರಥೋತ್ಸವ ಜರಗಿತು.

ವಾಮಂಜೂರು : ಶ್ರೀ ಅಮೃತೇಶ್ವರ ದೇವಸ್ಥಾನ ತಿರುವೈಲಿನ ಕಾಲಾವಧಿ ಉತ್ಸವದ ಪ್ರಯುಕ್ತ ಶನಿವಾರ ಮಧ್ಯಾಹ್ನ ಹಗಲು ರಥೋತ್ಸವ ಜರಗಿತು. ಇದರಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.

ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ 9 ದಿನಗಳ ಕಾಲ ಜಾತ್ರೆ ನಡೆಯುತ್ತಿದ್ದು, ಒಟ್ಟು ಐದು ದಿನಗಳ ಕಾಲ ಚೆಂಡು ಉತ್ಸವ ನಡೆದು ಅದರ ಅನಂತರ ರಥೋತ್ಸವ ಜರಗತ್ತದೆ. ಶನಿವಾರ ಮಧ್ಯಾಹ್ನ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ನೂರಾರು ಭಕ್ತರು ಸ್ವಲ್ಪ ದೂರದವರೆಗೆ ಎಳೆಯುವ ಮೂಲಕ ಹಗಲು ರಥೋತ್ಸವ ನೆರವೇರಿತು. ವಿವಿಧ ಧಾರ್ಮಿಕ ವಿಧಿವಿಧಾನಗಳ ಬಳಿಕ ಅಮೃತೇಶ್ವರ ದೇವರಿಗೆ ಪೂಜೆ ನೆರವೇರಿತು.

ಈ ಕೈಂಕರ್ಯಕ್ಕೆ ಊರ ಪರವೂರಿನಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿದ್ದು ಜಾತ್ರೆಯ ಪ್ರಯುಕ್ತ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರದ ಪ್ರಯುಕ್ತ ವಿಟ್ಠ ಲ ನಾಯಕ್‌ ಮತ್ತು ಬಳಗ ಕಲ್ಲಡ್ಕ ಇವರಿಂದ ನೂತನ ಶೈಲಿಯ ‘ಸಂದೇಶದ ಸಂತೋಷ’ ಎನ್ನುವ ಗೀತ ಸಾಹಿತ್ಯ ಸಂಭ್ರಮ ನಡೆಯಿತು. ಜಾತ್ರೆಯ ಪ್ರತೀ ದಿನ ನಾನಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ಇಂದಿನ ಕಾರ್ಯಕ್ರಮ ರವಿವಾರ ಅವಭೃಥ ಸ್ನಾನದ ಬಳಿಕ 9 ದಿನಗಳ ಜಾತ್ರೆಗೆ ತೆರೆ ಬೀಳಲಿದೆ. ರಾತ್ರಿ ದೇವ್‌ದಾಸ್‌ ಕಾಪಿಕಾಡ್‌ ಚಾಪರ್ಕ ಕಲಾವಿದರಿಂದ ಪನಿಯೆರೆ ಆವಂದಿನ ಎಂಬ ತುಳು ಹಾಸ್ಯಮಯ ಕಾರ್ಯಕ್ರಮ ಜರಗಲಿದೆ.

LEAVE A REPLY

Please enter your comment!
Please enter your name here