ವಾಮಂಜೂರು: ಶ್ರಮಿಕ ಸಂತ ಜೋಸೆಫರ ಚರ್ಚ್ ವಾಮಂಜೂರು ಇದರ ನವೀಕೃತ ದೇವಾಲಯವನ್ನು ಮಂಗಳೂರಿನ ಬಿಷಪ್ ರೆ| ಡಾ| ಪೀಟರ್ ಸಲ್ಡಾನ್ಹಾ ಉದ್ಘಾಟಿಸಿದರು.
ಪೀಟರ್ ಸಲ್ಡಾನ್ಹಾ ಅವರು ದೇವಾಲಯಕ್ಕೆ ಆಗಮಿಸುತ್ತಿದ್ದಂತೆ ಚರ್ಚ್ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಿ, ಬರಮಾಡಿಕೊಳ್ಳಲಾಯಿತು. ಬಳಿಕ ನೂರಾರು ಮಂದಿ ಭಕ್ತರ ಸಮ್ಮುಖದಲ್ಲಿ ಮೆರವಣಿಗೆಯಲ್ಲಿ ಆಗಮಿಸಿದ ಸಲ್ಡಾನ್ಹಾ ಅವರು ಧಾರ್ಮಿಕ ವಿಧಿವಿಧಾನಗಳನ್ನು ಮುಗಿಸಿ, ಬಳಿಕ ನವೀಕೃತ ದೇವಾಲಯವನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ನವೀಕೃತ ದೇವಾಲಯದಲ್ಲಿ ಹಲವು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಯಿತು. ಪ್ರೀತಿ, ಸ್ನೇಹಪರತೆ, ಸಹೋದರತ್ವದಿಂದ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕೋಣ ದೇವರ ಅನುಗ್ರಹ ಎಲ್ಲರಿಗೂ ಸಿಗಲಿ ಎಂದು ಬಿಷಪ್ ಪ್ರಾರ್ಥಿಸಿದರು.
ಸಾವಿರಾರು ಮಂದಿ ಭಕ್ತರು ಆಗಮಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದರು. ಇದಾದ ಬಳಿಕ ಪ್ರಸಾದ ವಿತರಣೆ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು. ಚರ್ಚ್ನ ಧರ್ಮಗುರು ವಂ| ಸಿಪ್ರಿಯನ್ ಪಿಂಟೋ ಜತೆಯಲ್ಲಿದ್ದು, ಧಾರ್ಮಿಕ ಕಾರ್ಯವನ್ನು ನಡೆಸಿಕೊಟ್ಟರು.
ವಿಕಾರ್ವಾರ್ ಸಿಟಿ ವಲಯದ ವಂ| ವಿಕ್ಟರ್ ಮಚಾದೊ, ಮಂಗಳೂರು ವಲಯದ ಭ| ಝೀನಾ ಡಿ’ಸೊಜಾ, ಭ|ಸಿಸೀಲಿಯಾ ಮೆಂಡೋನ್ಸಾ ಮೊದಲಾದವರು ನಡೆಸಿಕೊಟ್ಟರು. ನವೀಕೃತ ದೇವಾಲಯ ಹಲವಾರು ಕೆತ್ತನೆಗಳಿಂದ ಕೂಡಿದ್ದು, ಮನಮೋಹಕವಾಗಿದ್ದು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.