Home ಧಾರ್ಮಿಕ ಸುದ್ದಿ ವಾಲ್ಮೀಕಿ ರಾಮಾಯಣ ಪಾರಾಯಣ ಸಮಾಪನ

ವಾಲ್ಮೀಕಿ ರಾಮಾಯಣ ಪಾರಾಯಣ ಸಮಾಪನ

1610
0
SHARE

ವಿಟ್ಲ : ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ ಭಟ್ಟ ಸಂಪ್ರತಿಷ್ಠಾನದ ಸಹಯೋಗದಲ್ಲಿ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿ ಅವರ ಮಹೋನ್ನತ ಸಂಕಲ್ಪ ಹಾಗೂ ಆಶಯದಂತೆ ನವಾಹ ಪದ್ಧತಿಯಂತೆ ಶ್ರೀಮದ್ವಾಲ್ಮೀಕಿ ರಾಮಾಯಣದ ಮೂರು ಪಾರಾಯಣವು ನ. 12ರಿಂದ ಆರಂಭಗೊಂಡು, 20ರಂದು ಸಮಾಪನಗೊಂಡಿತು.

ನ. 12ರಂದು ಪ್ರತಿಷ್ಠಾನದ ಅಧ್ಯಕ್ಷ ರಮೇಶ ಭಟ್‌ ಬೈಪದವು ಮನೆಯಲ್ಲಿ ಪ್ರಾರಂಭಗೊಂಡು, 13ರಂದು ವೇ|ಬ್ರ| ಬಡಜ ಜಯರಾಮ ಜೋಯಿಸ, 14ರಂದು ಸಂಪ್ರತಿಷ್ಠಾನದ ಕಾರ್ಯದರ್ಶಿ ಎಂ.ಎಚ್‌. ರಮೇಶ ಭಟ್‌, 15ರಂದು ಯ. ಶಂಕರ ಜೋಯಿಸ ಅಂಗರಜೆ, 16ರಂದು ಬಿ. ಶ್ರೀರಂಗ ಭಟ್‌, 17ರಂದು ವೇ| ಬ್ರ| ಮಿತ್ತೂರು ಶ್ರೀನಿವಾಸ ಭಟ್ಟ, 18ರಂದು ಸಂಪ್ರತಿಷ್ಠಾನದ ಸಂಚಾಲಕ ಪುರೋಹಿತ ಮಿತ್ತೂರು ತಿರುಮಲೇಶ್ವರ ಭಟ್ಟ ಅನೂಚಾನ ನಿಲಯ, 19ರಂದು ಎಂ. ತಿರುಮಲೇಶ್ವರ ಭಟ್ಟ ವಾಲ್ತಜೆ, 20ರಂದು ಸಂಪ್ರತಿಷ್ಠಾನದ ಉಪಾಧ್ಯಕ್ಷ ವಡ್ಯದಗಯ ನಾರಾಯಣ ಭಟ್ಟರಲ್ಲಿ ಸಂಪನ್ನಗೊಂಡಿತು.

ವೇ.ಬ್ರ.ಶ್ರೀ. ಪುರೋಹಿತ ಮಿತ್ತೂರು ನಾರಾಯಣ ಜೋಯಿಸ ಕುಡಿಪ್ಪಾಡಿ ಅವರು ಪಾರಾಯಣದ ನೇತೃತ್ವ ವಹಿಸಿದ್ದು, ಪಾರಾಯಣ ಕತೃಗಳಾಗಿ ಶಿರಸಿ ಯವರಾದ ವೇ| ಬ್ರ| ಸತ್ಯ ನಾರಾಯಣ ಭಟ್ಟರು ಹಾಗೂ ವೇ| ಬ್ರ| ಅರುಣ ಭಟ್ಟರು ಸಹಕರಿಸಿದ್ದರು.

ಪ್ರತಿದಿನ ಬೆಳಗ್ಗೆ 7ಕ್ಕೆ ಕುಲದೇವತಾ ರಾಧನೆ, ಸರಸ್ವತೀಪೂಜೆ ನಡೆದು ಆ ದಿನದ ಪಾರಾಯಣದ ಆರಂಭ, ದಿನಕ್ಕೆ ನಿಗದಿಯಾದ ಸರ್ಗಗಳ ಪಾರಾಯಣ ಮುಗಿಸಿ ಭೋಜನ, ತದ ನಂತರ ಸುಮಾರು ಒಂದು ಗಂಟೆಯ ಕಾಲ ವೇ| ಬ್ರ| ಮಿತ್ತೂರು ನಾರಾಯಣ ಭಟ್ಟ ಕುಡಿಪ್ಪಾಡಿ ಅವರಿಂದ ಪ್ರವಚನ ನಡೆಯಿತು.

ವಿಶೇಷ ಕಾರ್ಯಕ್ರಮವಾಗಿ, ಅನೂಚಾನ ನಿಲಯದಲ್ಲಿ, ಶ್ರೀರಾಮ ಕಲ್ಪೋಕ್ತ ಪೂಜೆ, ದಂಪತಿವಾಯನ ದಾನ, ವಾಲ್ತಜೆಯಲ್ಲಿ ಶ್ರೀರಾಮ ಹವನ, ಹವನಾಂಗ ಕಲಶ, ವಡ್ಯದಗಯದಲ್ಲಿ ಕೊನೆಯ ದಿನ ಶ್ರೀರಾಮ ಪಟ್ಟಾಭಿಷೇಕದ ಅಂಗವಾಗಿ ಶ್ರೀರಾಮ ಕಲ್ಪೋಕ್ತ ಪೂಜೆ, ಶ್ರೀರಾಮ ಪ್ರೀತ್ಯರ್ಥಂ ರಾಜೋಪಚಾ ರಾಂಗ ಅಷ್ಟಾವಧಾನ ಸೇವೆ ನೆರವೇರಿತು. ಹವ್ಯಕ ಮಹಾಮಂಡಲದ ಕಾರ್ಯದರ್ಶಿ ಹರಿಪ್ರಸಾದ ಪೆರಿಯಾಪು, ಉಪ್ಪಿನಂಗಡಿ ಮಂಡಲದ ಕಾರ್ಯದರ್ಶಿ ಶ್ರೀಧರ ಭಟ್‌ ಕೂವೆತ್ತಂಡ ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಡಾ| ಪಾದೆಕಲ್ಲು ವಿಷ್ಣು ಭಟ್ಟ, ಹವ್ಯಕ ಮಹಾ ಮಂಡಲದ ಅಧ್ಯಕ್ಷೆ ಈಶ್ವರಿ ಬೇರ್ಕಡವು ಅವರು ಶ್ರೀ ರಾಮಾಯಣ ಪಾರಾಯಣದ ಸಂಕಲ್ಪ ಹಾಗೂ ಉದ್ದೇಶ ತಿಳಿಸಿದರು.

LEAVE A REPLY

Please enter your comment!
Please enter your name here