ವಳಲಂಬೆ : ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 38ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಮತ್ತು ದೈವಗಳ ನೇಮವು ಮಾ. 24 ಮತ್ತು 25ರಂದು ನಡೆಯಿತು.
ಮಾ. 24ರಂದು ಗಣಪತಿ ಹವನ, ಶತರುದ್ರಾಭಿಷೇಕ ನಡೆದು ಬಳಿಕ ಸತ್ಯನಾರಾಯಣ ಪೂಜೆ ಹಾಗೂ ಕಥಾ ಪ್ರವಚನ ನಡೆಯಿತು. ಸಂಜೆ ಕಾರ್ತಿಕ ಪೂಜೆ, ಮಹಾಪೂಜೆ ನಡೆಯಿತು. ಸಂಜೆ ಭಜನೆ, ಬಳಿಕ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಯಕ್ಷಗಾನ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ದಕ್ಷಯಜ್ಞ-ಗಿರಿಜಾ ಕಲ್ಯಾಣ ಯಕ್ಷಗಾನ ಪ್ರದರ್ಶನ ಹಾಗೂ ಹಟ್ಟಿಯಂಗಡಿ ಮೇಳದವರಿಂದ ಮಂತ್ರ ಮಯೂರಿ ಯಕ್ಷಗಾನ ಪ್ರದರ್ಶನಗೊಂಡಿತು.
ದೈವಗಳ ನೇಮ
ಮಾ. 25ರಂದು ರಾಜ ದೈವ ಹಾಗೂ ಪುರುಷ ದೈವಗಳ ನೇಮ, ಪ್ರಸಾದ ವಿತರಣೆಯಾಯಿತು. ಆಡಳಿತ ಮಂಡಳಿಯ ಪದಾಧಿಕಾರಿಗಳು, ಭಕ್ತರು ಭಾಗವಹಿಸಿದ್ದರು.