ಮಹಾನಗರ: ನಗರದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ವಾರ್ಷಿಕ ಮಹಾಪೂಜೆಯ ಅಂಗವಾಗಿ ಪ್ರಸಾದ ಹಾರಿಸುವಿಕೆ ಶುಕ್ರವಾರ ನೆರವೇರಿತು.
ದೇವಸ್ಥಾನದ ಆಡಳಿತ ಮೊಕ್ತೇಸರ ಹರಿಶ್ಚಂದ್ರ ಕರ್ಕೇರ ಬೈಕಂಪಾಡಿ ಪ್ರಾಸ್ತಾವಿಸಿದರು. ಕ್ಷೇತ್ರದ ಪುರೋಹಿತ ಕೋಡಿಕಲ್ ಸುಬ್ರಹ್ಮಣ್ಯ ತಂತ್ರಿ ಪ್ರಸಾದ ಹಾರಿಸುವುದರ ಮತ್ತು ಮುಂದಿನ ಉತ್ಸವಗಳ ಬಗ್ಗೆ ವಿವರಣೆ ನೀಡಿದರು.
ಮೊಕ್ತೇಸರ ಸುಂದರ ಗುರಿಕಾರರು ಪ್ರಸಾದ ಹರಿವಾಣವನ್ನು ಹಿಡಿದು ಸಹಕರಿಸಿದರು. ದೇಗುಲಕ್ಕೆ 3 ಸುತ್ತು ಪ್ರದಕ್ಷಿಣೆ ಬಂದ ಬಳಿಕ ಉರ್ವ ಮೈದಾನ ಕಡೆಗೆ ಬ್ಯಾಂಡ್ ವಾದ್ಯಗಳ ಮೇಳದೊಂದಿಗೆ ಸಾಗಿ, ಅಲ್ಲಿ ಪ್ರಸಾದ ಹಾರಿಸಲಾಯಿತು. ಬಳಿಕ ದೇಗುಲಕ್ಕೆ ಬಂದು ಪ್ರಸಾದವನ್ನು ಸ್ವೀಕರಿಸಲಾಯಿತು. ಬಳಿಕ ಶ್ರೀ ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷಾ ಬಲಿಪೂಜೆ ಜರಗಿತು.
ಕ್ಷೇತ್ರದ ಮೊಕ್ತೇಸರ ಯಾದವ ಸುವರ್ಣ ಕುದ್ರೋಳಿ, 2ನೇ ಗ್ರಾಮ ಯಾದವ ಸಾಲ್ಯಾನ್ ಕುದ್ರೋಳಿ, 3ನೇ ಗ್ರಾಮ ಬಿ. ಗೋಪಾಲಕೃಷ್ಣ ಕುಂದರ್ ಬೊಕ್ಕಪಟ್ಣ, ದೇವಾನಂದ ಗುರಿಕಾರರು, ಬೋಳೂರು ಸೋಮನಾಥ ಪಾಂಗಳ್ ಕೋಡಿಕಲ್, ಕೇಶವ ಗುರಿಕಾರರು ತಣ್ಣೀರುಬಾವಿ, ಸುಂದರ್ ಗುರಿಕಾರರು ಕೂಳೂರು, ಗಂಗಾಧರ್ ಹೊಸಬೆಟ್ಟು ಹಾಗೂ ಏಳು ಪಟ್ಲ ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷ ಯಶವಂತ್ ಪಿ. ಮೆಂಡನ್, ಕರ್ನಾ ಟಕ ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷ ಮೋಹನ್ ಬೆಂಗ್ರೆ, ಸಂಯುಕ್ತ ಸಭಾದ ಪದಾಧಿಕಾರಿಗಳು, ಗ್ರಾಮದ ಗುರಿಕಾರರು, ಸದಸ್ಯರು ಉಪಸ್ಥಿತರಿದ್ದರು.