ಮಹಾನಗರ: ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ವಾರ್ಷಿಕ ಮಹಾಪೂಜೆ ಸಂಭ್ರಮ, ಸಡಗರದಿಂದ ಮಂಗಳವಾರ ನಡೆಯಿತು. ಸಹಸ್ರಾರು ಭಕ್ತರು ಈ ಪರ್ವ ಕಾಲದಲ್ಲಿ ಭಾಗವಹಿಸಿ ಶ್ರೀ ದೇವರ ದರ್ಶನ ಪಡೆದರು. ಮಂಗಳವಾರ ಬೆಳಗ್ಗೆ 7 ಗಂಟೆಗೆ ನಿತ್ಯಪೂಜೆ, ಮಧ್ಯಾಹ್ನ 12.30ಕ್ಕೆ ಸರ್ವಾಲಂಕಾರ ಪೂಜೆ, ಮಹಾಪೂಜೆ ನಡೆಯಿತು. ಬಳಿಕ ಅನ್ನಸಂತರ್ಪಣೆ ನಡೆದಿದ್ದು, ಸಾವಿರಾರು ಮಂದಿ ಅನ್ನಪ್ರಸಾದ ಸ್ವೀಕರಿಸಿದರು.
ಸಂಜೆ 6.30ಕ್ಕೆ ಮಹಾಪೂಜೆ, ಹೊರಗಿನ ದರ್ಶನ ಬಲಿ, ಕಟ್ಟೆಬಲಿ, ಮಡಸ್ತಾನ ನಡೆಯಿತು. ಆ ಬಳಿಕ ಕಂಚಿಲ್ ಸೇವೆ ಶ್ರೀ ದೇವಿಯ ಗರ್ಭಗುಡಿ ಪ್ರವೇಶ ನಡೆಯಿತು. 8.20ಕ್ಕೆ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆದು, 11ರಿಂದ ನೈವೇದ್ಯ ಬಲಿ ಆರಂಭಗೊಂಡಿತು. ಆ ಬಳಿಕ ದೇವಳದಲ್ಲಿ ಮಹಾರಾಶಿ ಪೂಜೆ, 2.30ಕ್ಕೆ ಮಾರಿ ಉಚ್ಛಿಷ್ಠ, 4.30ಕ್ಕೆ ಮಹಾಪೂಜೆ, ಹೊರಗಿನ ದರ್ಶನ ಬಲಿ, ಕಟ್ಟೆಬಲಿ, ಮಡಸ್ತಾನ, ಕಂಚಿಲ್ ಸೇವೆ ನಡೆದ ಬಳಿಕ ಶ್ರೀ ದೇವಿಯ ಗರ್ಭಗುಡಿ ಪ್ರವೇಶ, ರಥೋತ್ಸವ, ತುಲಾಭಾರ, ಪ್ರಸಾದ ವಿತರಣೆ ನಡೆಯಿತು.
ಫೆ. 23ರಂದು ರಾತ್ರಿ 7ರಿಂದ ಮಲರಾಯಧೂಮಾವತಿ ವಗಳ ನೇಮೋತ್ಸವ ನಡೆಯಿತು.