Home ಧಾರ್ಮಿಕ ಸುದ್ದಿ ನ. 23, 24: ವಾರ್ಷಿಕ ದೀಪೋತ್ಸವ, ರಥೋತ್ಸವ

ನ. 23, 24: ವಾರ್ಷಿಕ ದೀಪೋತ್ಸವ, ರಥೋತ್ಸವ

ಉಪ್ಪೂರು ಶ್ರೀ ಸಿದ್ಧಿವಿನಾಯಕ ದೇಗುಲ

1303
0
SHARE

ಉಡುಪಿ : ಉಪ್ಪೂರು ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇಗುಲದಲ್ಲಿ ನ. 23, 24ರಂದು ವಾರ್ಷಿಕ ದೀಪೋತ್ಸವ ಮತ್ತು ರಥೋತ್ಸವವು ವೇ|ಮೂ| ಕೋಟ ಚಂದ್ರಶೇಖರ ಸೋಮಯಾಜಿ ಅವರ ನೇತೃತ್ವದಲ್ಲಿ ನಡೆಯಲಿದೆ.

ನ. 23ರ ಬೆಳಗ್ಗೆ 108 ಕಾಯಿ ಗಣಪತಿ ಹವನ, ಲಕ್ಷ ದೂರ್ವಾರ್ಚನೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಮ್ಮುಂಜೆ ಶ್ರೀ ಭಾÅಮರೀ ನಾಟ್ಯಾಲಯದವರಿಂದ ನೃತ್ಯ, ಕೆ. ಭವಾನಿ ಶಂಕರ್‌ರ ಶಿಷ್ಯರಿಂದ ಭರತನಾಟ್ಯ ಸಮೂಹ ನೃತ್ಯ, ರಾತ್ರಿ 9ರಿಂದ ರಂಗಪೂಜೆ, 10.30ರಿಂದ ವ್ಯಾಯಾಮ ಪ್ರದರ್ಶನ, 11ರಿಂದ ರಥೋತ್ಸವ, ನ. 24ರ ಬೆಳಗ್ಗೆ 9.30ರಿಂದ ತುಲಾಭಾರ ಸೇವೆ ಜರಗಲಿದೆ.

ನ. 23ರ ರಾತ್ರಿ 7.45ಕ್ಕೆ ನಡೆಯಲಿರುವ ಧಾರ್ಮಿಕ ಸಭೆಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸುವರು. ಶಾಸಕ ಕೆ. ರಘುಪತಿ ಭಟ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಆರೂರು ಮಹತೋಭಾರ ಶ್ರೀ ವಿಷ್ಣುಮೂರ್ತಿ ದೇಗುಲದ ಆಡಳಿತ ಮೊಕ್ತೇಸರ ಡಾ| ರಾಘವೇಂದ್ರ ರಾವ್‌, ಇಂದ್ರಾಳಿ ಶ್ರೀ ಪಂಚದುರ್ಗಾಪರಮೇಶ್ವರೀ ದೇಗುಲದ ಆಡಳಿತ ಮೊಕ್ತೇಸರ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ, ತಾ.ಪಂ. ಸದಸ್ಯ ದಿನಕರ ಹೇರೂರು, ಉಪ್ಪೂರು ಗ್ರಾ.ಪಂ. ಅಧ್ಯಕ್ಷೆ ಆರತಿ ಉಪಸ್ಥಿತರಿರುವರು ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಟಿ.ಜೆ. ಮೆಂಡನ್‌ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here