ಉಪ್ಪುಂದ: ಸಮಾಜ ಸುಧಾರಣೆಗಾಗಿ, ಹಿಂದೂ ತತ್ವದ ಜಾಗೃತಿಗಾಗಿ ಸರ್ವವನ್ನು ಪರಿತ್ಯಜಿಸಿ ಸನ್ಯಾಸ ಸ್ವೀಕರಿಸಿರುವುದು ಬದುಕಿನ ದೊಡ್ಡ ನಿರ್ಧಾರ. ರಾಜಕೀಯ ಕಾರಣದಿಂದಾಗಿ ಮುಸುಕಾಗಿ ಕಾಣುತ್ತಿರುವ ಹಿಂದೂ ಧರ್ಮ ಸದಾ ಪ್ರಜ್ವಲಿಸುತ್ತಿರಬೇಕಾದರೆ ಭಗವದ್ಗೀತೆ ಹಾಗೂ ಧಾರ್ಮಿಕ ಗ್ರಂಥಗಳ ಪಠಣ ನಿರಂತರ ನಡೆಯುದವರ ಜತೆಗೆ ಸಂತರ ಧರ್ಮ ಜಾಗೃತಿಗಾಗಿ ಕಾರ್ಯವೂ ಅಗತ್ಯವಾಗಿದೆ ಎಂದು ಗೋಕರ್ಣ ಮಾದನಗಿರಿ ಶ್ರೀ ಸಿದ್ಧಿವಿನಾಯಕ
ಮಹಾಲಸಾ ನಾರಾಯಣಿ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಸಿಂಹಪುರುಷ ಪಾತ್ರಿ ಸುನಿಲ್ ಪೈ ಹೇಳಿದರು.
ಅವರು ಯಳಜಿತದಲ್ಲಿ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರ ಶ್ರೀ ರಾಮಕೃಷ್ಣ ಕುಟೀರವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದರು. ನಿವೃತ್ತ ಮುಖ್ಯಶಿಕ್ಷಕ ವಿಶ್ವೇಶ್ವರ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಭಗವದ್ಗೀತೆ ಅಭಿಯಾನದ ಜಿಲ್ಲಾ ಸಂಚಾಲಕ ಬಿ. ರಾಮಕೃಷ್ಣ ಶೇರುಗಾರ್, ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ವಿದ್ಯಾರ್ಥಿಗಳು ಶ್ರೀ ಭಗವದ್ಗೀತಾ ಸ್ತೋತ್ರ ಪಠಣ, ಭಜನ ಕಾಯಕ್ರಮ ನಡೆಸಿದರು. ಶೈಕ್ಷಣಿಕ ಸಾಧನೆಗೆ„ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಸ್ವಾಗತಿಸಿ, ಪ್ರಸ್ತಾವಿಸಿದರು. ಯಳಜಿತ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ಜ್ಯೋತಿ ಎಚ್. ಎಸ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.