ಉಪ್ಪುಂದ : ಇಲ್ಲಿನ ಕಡಲ ತೀರದಲ್ಲಿ ಶಕ್ತಿ ಸ್ವರೂಪಿಣಿಯಾಗಿ ಭಕ್ತರನ್ನು ಸಲಹುವ ಶಕ್ತಿ ದೇವತೆ ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಕೊಡಿ ಹಬ್ಬದ ರಥೋತ್ಸವವು ಸಕಲ ಧಾರ್ಮಿಕ ಪೂಜಾ ವಿಧಿವಿಧಾನಗಳೊಂದಿಗೆ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ ರಥಸಿದ್ಧಿ ಹೋಮ, ಕುಂಡ ಮಂಟಪದಲ್ಲಿ ಪುಣ್ಯಾಹ, ಕಲಶ ಸ್ಥಾಪನೆ, ರತ್ನ ಸಿಂಹಾಸನ ಪೂಜೆ, ನವಗ್ರಹ ದಾನ, ಹರಿವಾಣ ನೈವೇದ್ಯ, ಮಹಾಪೂಜೆ, ರಥಾರೋಹಣ ವಿಧಾನಗಳು ತಂತ್ರಿ ಮಂಜುನಾಥ ಅಡಿಗ ಅವರ ನೇತೃತ್ವದಲ್ಲಿ ನೆರವೇರಿದವು. ಸಾವಿರಾರು ಭಕ್ತರು ಆಗಮಿಸಿ ಮಾತೆಯ ದರುಶನ ಪಡೆದು ಇಷ್ಟಾರ್ಥ ಗಳನ್ನು ಪೂರೈಸುವಂತೆ ಪ್ರಾರ್ಥಿಸಿದರು.