ಉಪ್ಪುಂದ: ಶೃಂಗೇರಿಯಲ್ಲಿ ಬೈಂದೂರು ವಲಯ ನಾಡದೋಣಿ ಮೀನುಗಾರರು ಹಾಗೂ ಕನ್ನಡ ಖಾರ್ವಿ ಸಮಾಜದವರಿಂದ ಚಾತುರ್ಮಾಸ್ಯದ ಗುರುವಂದನೆ ಕಾರ್ಯಕ್ರಮ ನಡೆಯಿತು.
ದಕ್ಷಣಾಮ್ನಾಯ ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂ ಅವರ ಅನುಗ್ರಹದಿಂದ ಬೈಂದೂರು ವಲಯ ನಾಡದೋಣಿ ಮೀನುಗಾರರು ಹಾಗೂ ಕನ್ನಡ ಖಾರ್ವಿ ಸಮಾಜದವರು ಅನಾದಿ ಕಾಲದಿಂದಲೂ ಜಗದ್ಗರುಗಳ ಸೇವೆಮಾಡುತ್ತಾ ಬಂದಿದ್ದು, ಈ ಬಾರಿಯೂ ಕೂಡ ಪ್ರಾಂತೀಯ ಧರ್ಮಾಧಿಕಾರಿ ವೇ| ಮೂ| ಬಡಾಕೆರೆ ಲೋಕೇಶ್ ಅಡಿಗ ಮಾರ್ಗದರ್ಶನದಲ್ಲಿ ಜು.19ರಂದು ಬೆಳಗ್ಗೆ 10ಕ್ಕೆ ಶೃಂಗೇರಿ ಗುರುಭವನದಲ್ಲಿ ಚಾತಾರ್ಮಾಸ್ಯದ ಗುರುವಂದನ ಕಾರ್ಯಕ್ರಮದಲ್ಲಿ ಉ.ಕ. ಮತ್ತು ದಕ್ಷಿಣಕನ್ನಡದಿಂದ ಆಗಮಿಸಿದ ಅನೇಕ ಗಣ್ಯರನ್ನೊಳಗೊಂಡ ಸುಮಾರು 6,500ಕ್ಕೂ ಅಧಿಕ ಮಂದಿ ಜಗದ್ಗುರುಗಳ ಅನುಗ್ರಹ ಪಡೆದರು.
ಈ ಸಂದರ್ಭದಲ್ಲಿ ಉಪ್ಪುಂದ ನಾಡದೋಣಿ ಸಂಘದ ಅಧ್ಯಕ್ಷ ಉಪ್ಪುಂದ ಎ. ಆನಂದ ಖಾರ್ವಿ ಮಾತನಾಡಿದರು.
ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂ ಸಮಾಜದ ಸಮಸ್ತರೂ ಶೈಕ್ಷಣಿಕ ಪ್ರಗತಿ ಸಾಧಿಸುವಂತಾಗಲಿ ಗುರುಗಳಲ್ಲಿ ಭಕ್ತಿ, ದೇವರಲ್ಲಿ ಶ್ರದ್ಧೆ ಹೊಂದಿರಿ ಎಂದು ಅನುಗ್ರಹಿಸಿದರು.