Home ಧಾರ್ಮಿಕ ಸುದ್ದಿ ಉಪ್ಪುಂದ ರಥೋತ್ಸವ: ಧ್ವಜಾರೋಹಣ, ಕೊಡಿ ಹಬ್ಬಕ್ಕೆ ಚಾಲನೆ

ಉಪ್ಪುಂದ ರಥೋತ್ಸವ: ಧ್ವಜಾರೋಹಣ, ಕೊಡಿ ಹಬ್ಬಕ್ಕೆ ಚಾಲನೆ

2351
0
SHARE

ಉಪ್ಪುಂದ: ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಕೊಡಿ ಹಬ್ಬದ ಅಂಗವಾಗಿ ಧ್ವಜಾರೋಣೋತ್ಸವದೊಂದಿಗೆ ಧಾರ್ಮಿಕ ಕಾರ್ಯ ಕ್ರಮಗಳಿಗೆ ಚಾಲನೆ ನೀಡಲಾಯಿತು. ಸಾಮೂಹಿಕ ಪ್ರಾರ್ಥನೆ, ಮಹಾಸಂಕಲ್ಪ, ಪುಣ್ಯಾಹ ನಾಂದಿ, ಧ್ವಜ ವಾಹನ ಅದಿವಾಸ, ಅಸ್ತ್ರ ಹೋಮದೊಂದಿಗೆ ಇತರ ಧಾರ್ಮಿಕ ವಿ ವಿಧಾನಗಳೊಂದಿಗೆ ಕೊಡಿಮರವನ್ನು ಧ್ವಜಸ್ಥಂಭಕ್ಕೆ ನಿಲ್ಲಿಸಿ ಸಿಂಹದ ಪಟವನ್ನು ಏರಿಸುವುದರೊಂದಿಗೆ, ಧ್ವಜಬಲಿ ಮಾಡಿ ಉತ್ಸವಕ್ಕೆ ನೀಡಲಾಯಿತು. ವೇದಮೂರ್ತಿ ಮಂಜುನಾಥ ಅಡಿಗ ನೇತೃತ್ವದಲ್ಲಿ ಧಾರ್ಮಿಕ ವಿಧಾನ ನೆರವೆರಿಸಲಾಯಿತು. ನ. 21ರಂದು ಅಶ್ವರೋಹಣೋತ್ಸವ, ನ. 22ರಂದು ಮಯೂರ ವಾಹನೋತ್ಸವ, ನ.23ರಂದು ರಂಗಪೂಜೆ, ಪುಷ್ಪಕ ಸಿಂಹಾರೋಹಣೋತ್ಸವ, ನ. 24ರಂದು ಶ್ರೀ ಮನ್ಮಹಾರಥೋತ್ಸವ, ನ. 25ರಂದು ಚೂರ್ಣೋತ್ಸವ, ನ.26ರಂದು ಧ್ವಜಾವರೋಹಣ, ನಗರೋತ್ಸವ ನಡೆಯಲಿದೆ.

ಸಂಜೆ ಕಟ್ಟೆ ಸವಾರಿ
ಉಪ್ಪುಂದ ಕರಾವಳಿ ಭಾಗದ ಜನರ ಆರಾಧ್ಯ ದೇವತೆಯ ಪರ್ವದಿನಗಳಲ್ಲಿ ವಿಶಿಷ್ಟ ಪೂಜಾ ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ರಥೋತ್ಸವ ಸಂದರ್ಭದಲ್ಲಿ ಉಪ್ಪುಂದ ಬಿಜೂರು ಪರಿಸರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟೆ ಪೂಜೋತ್ಸವಗಳು ನಡೆಯುತ್ತವೆ. ಮೊದಲನೇ ದಿನ ಸಂಜೆ ಉಪ್ಪುಂದ ರಥಬೀದಿಯ ಪೂರ್ವ ಕಿ.ಪ್ರಾ. ಶಾಲೆ ಬಳಿಯ ಏರು ಕಟ್ಟೆ, ಎರಡನೇ ದಿನ ಹಳಗದ ಹಿತ್ಲು ಕಟ್ಟೆ, ಪುರಾಣಿಕರ ಕಟ್ಟೆ, ಬಿಜೂರು ಸರಾಫರ ಕಟ್ಟೆ, ಸೇರುಗಾರರ ಕಟ್ಟೆ, ಬಿಜೂರು ಮಯ್ಯರ ಕಟ್ಟೆ, ಮೂರನೇ ದಿನ ಶೆಟ್ಟರ್‌ ಕೇರಿ ಮಾದಯ್ಯ ಶೆಟ್ಟರ ಕಟ್ಟೆ, ವೈದ್ಯರಕೇರಿ ಕಟ್ಟೆ, ಮಾದಪ್ಪು ಮೈಯ್ಯರಕಟ್ಟೆ, ಕರಾವಳಿ ಕಾಯಿ ಭಂಡಶಾಲೆ ಕಟ್ಟೆ, ನಾಲ್ಕನೇ ದಿನ ಅಂಬಾಗಿಲು ತಿರ್ಕ ಶೆಟ್ಟರ ಕಟ್ಟೆ, ಕಟ್ಗೆರೆ ಶೆಟ್ಟರ ಕಟ್ಟೆ, ದೀಟಿ ಮಯ್ಯರ ಕಟ್ಟೆ, ಶೇಟ್‌ರ ಕಟ್ಟೆ, ಬೊಪ್ಪೆಹಕ್ಲು ಗಾಣಿಗರ ಕಟ್ಟೆ, ಐದನೇ ದಿನ ಓಲಗ ಮಂಟಪ ಕಟ್ಟೆ, ತೊಪ್ಪಲು ಕಟ್ಟೆ, ಚೋಟಿ ಗೋವಿಂದರ ಕಟ್ಟೆ, ಹೆಬ್ಟಾರಹಿತ್ಲು ಕಾರಂತರ ಕಟ್ಟೆ, ಕೆಳಾಮನೆ(ತಮ್ಮಣ್ಣ ಭಟ್ಟರ) ಕಟ್ಟೆ, ಪಠೇಲರ ಕಟ್ಟೆ, ಆರನೇ ದಿನ ರಥೋತ್ಸವ ಅವರೋಹಣ.

ಏಳನೇ ದಿನ ಬಿಜೂರು ಅರೆಕಲ್ಲು ಬ್ರಹ್ಮನ ಕಟ್ಟೆ ಹಾಗೂ ಹೊಳ್ಳರ ಮನೆ ಬಳಿ ಬಸ್ರೂರು ಶೆಟ್ಟರ ಕಟ್ಟೆ ಬಳಿಕ ನಗರೋತ್ಸವ ನಡೆಯಲಿದೆ. ಹಬ್ಬದ ಪರ್ಯಂತ ಊರಿನ ನಾಲ್ಕೂ ದಿಸೆಗಳಿಗೆ ದೇವಿಯು ಅಲಂಕೃತ ಪಲ್ಲಕ್ಕಿಯಲ್ಲಿ ವೈಭವದಿಂದ ದರ್ಶನ ನೀಡುವ, ವಿವಿಧ ಕಟ್ಟೆಗಳಲ್ಲಿ ಕುಳಿತು ಸಂಭ್ರಮಿಸುವ ಪದ್ಧತಿ ಇಂದಿಗೂ ಅದ್ಭುತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ಸಂರ್ಧದಲ್ಲಿ ಆಡಳಿತಾಧಿಕಾರಿ ಬೈಂದೂರು ತಹಶೀಲ್ದಾರ ಕಿರಣ್‌ ಜಿ ಗೌರಯ್ಯ, ಕಾರ್ಯನಿರ್ವಹಣಾಧಿಕಾರಿ ಮಂಜು, ಊರ ಸಮಸ್ತ ನಾಗರಿಕರು ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here