ಉಪ್ಪಿನಂಗಡಿ: ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ ಮತ್ತು ಕಲ್ಕುಡ ದೈವಸ್ಥಾನ, ಉಪ್ಪಿನಂಗಡಿ ಇಲ್ಲಿನ ಕಡವಿನ ರಾಜಂದೈವ ಕಲ್ಕುಡ ನೇಮ ಎ. 23ರಂದು ಜರಗಿತು.
ಕಾರ್ಯಕ್ರಮದಲ್ಲಿ ಭಂಡಾರ ತೆಗೆದು ನೇಮ ನಡೆಯಿತು. ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ರಘುನಾಥ ರೈ, ಸದಸ್ಯರಾದ ರಾಧಾಕೃಷ್ಣ ನಾಯಕ್, ಜಿ. ಕೃಷ್ಣ ರಾವ್ ಅರ್ತಿಲ, ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಸೋಮನಾಥ, ಸವಿತಾ ಹರೀಶ್, ಸ್ಥಳೀಯ ಪ್ರಮುಖರಾದ ಚಿದಾನಂದ ನಾಯಕ್, ಚಂದ್ರಶೇಖರ್ ಕಡವಿನಬಾಗಿಲು, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ ಮಡಿವಾಳ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಎನ್. ಉಮೇಶ್ ಶೆಣೈ, ಯು. ರಾಮ, ದೇಗುಲದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ, ವ್ಯವಸ್ಥಾಪಕ ವೆಂಕಟೇಶ್ ರಾವ್ ಉಪಸ್ಥಿತರಿದ್ದರು.