ಉಪ್ಪಿನಂಗಡಿ : ಇಲ್ಲಿನ ಪುರಾಣ ಪ್ರಸಿದ್ಧ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಶ್ರೀ ದೇವರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಸೋಮವಾರದಂದು ಗಣಪತಿ ಹೋಮ, ಶತ ರುದ್ರಾಭಿಷೇಕ, ಸಿಯಾಳಾಭಿಷೇಕ, ಚಂಡಿಕಾ ಹೋಮದಂತಹ ಧಾರ್ಮಿಕ ಕಾರ್ಯಕ್ರಮಗಳು ಸಮ್ಮುಖದಲ್ಲಿ ನಡೆದವು.
ವೇದಮೂರ್ತಿ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ, ಪವಿತ್ರಪಾಣಿ ಕರಾಯ ವಿಷ್ಣುಮೂರ್ತಿ ಕುದ್ದಣ್ಣಾಯ ಅವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಅಲಿಮಾರ ರಘುನಾಥ ರೈ, ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಡಾ| ಕೆ.ಬಿ. ರಾಜಾರಾಮ್, ಸೋಮನಾಥ, ಸವಿತಾ ಕೆ., ಅನಿತಾ ಕೆ., ಜಿ. ಕೃಷ್ಣ ರಾವ್, ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಕೆ. ರಾಧಾಕೃಷ್ಣ ನಾೖಕ್, ದೇಗುಲದ ಮುಖ್ಯ ಅರ್ಚಕ ಹರೀಶ್ ಉಪಾಧ್ಯಾಯ, ದೇಗುಲದ ವ್ಯವಸ್ಥಾಪಕ ವೆಂಕಟೇಶ್, ಗಣ್ಯರಾದ ಹರಿರಾಮಚಂದ್ರ, ಕಂಗ್ವೆ ವಿಶ್ವನಾಥ ಶೆಟ್ಟಿ, ಅಶೋಕ್ ಕುಮಾರ್ ರೈ ನೆಕ್ಕರೆ, ಗೋಪಾಲ ಹೆಗ್ಡೆ, ವಿಜಯ ಕುಮಾರ್ ಕಲ್ಲಳಿಕೆ ಮತ್ತಿತರರು ಭಾಗವಹಿಸಿದ್ದರು.