Home ಧಾರ್ಮಿಕ ಸುದ್ದಿ ಫೆ. 2-12: ಅಷಬಂಧ ಬ್ರಹ್ಮಕಲಶ, ದೈವಗಳ ಪ್ರತಿಷೆ, ನೇಮ

ಫೆ. 2-12: ಅಷಬಂಧ ಬ್ರಹ್ಮಕಲಶ, ದೈವಗಳ ಪ್ರತಿಷೆ, ನೇಮ

ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ

1304
0
SHARE

ಉಪ್ಪಿನಂಗಡಿ : ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ನವೀಕರಣ ಪುನರ್‌ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ, ಸಪರಿವಾರ ದೈವಗಳ ಪ್ರತಿಷ್ಠೆ ಮತ್ತು ನೇಮ ನಡಾವಳಿ ಕಾರ್ಯಕ್ರಮ ಫೆ. 2ರಿಂದ 12ರ ತನಕ ಜರಗಲಿದೆ ಎಂದು ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ವಿ. ಸುಂದರ ನೂರಿತ್ತಾಯ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ನಾಗೇಶ ತಂತ್ರಿ ಮತ್ತು ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನವೀಕರಣ ಪುನರ್‌ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸುಮಾರು 200 ವರ್ಷಗಳ ಇತಿಹಾಸ ಹೊಂದಿರುವ ಶ್ರೀಕ್ಷೇತ್ರದ ಆಲಯ ಮತ್ತು ದೈವಗಳ ಗುಡಿಗಳು ಶಿಥಿಲಗೊಂಡ ಹಿನ್ನೆಲೆಯಲ್ಲಿ ಊರಿನ ಭಕ್ತರ ಕೋರಿಕೆಯಂತೆ ಜೋತಿಷ ವಿದ್ವಾನ್‌ ಕೊಳಚಪ್ಪು ವಿಶ್ವನಾಥ್‌ ಭಟ್‌ ಅವರ ಪ್ರಶ್ನಾ ಚಿಂತನೆಯ ಪ್ರಕಾರ 2017ರಲ್ಲಿ ಶಿಲ್ಪಿ ಬೆದ್ರಡ್ಕ ರಮೇಶ್‌ ಕಾರಂತ ಅವರ ಮಾರ್ಗದರ್ಶನದೊಂದಿಗೆ ಕ್ಷೇತ್ರದ ಪುನರ್‌ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದ್ದು, ಇದೀಗ ಊರ-ಪರವೂರ ದಾನಿಗಳ ನೆರವಿನೊಂದಿಗೆ 2 ಕೋ.ರೂ. ವೆಚ್ಚದಲ್ಲಿ ಶಿಲಾಮಯ ಗರ್ಭಗುಡಿಯೊಂದಿಗೆ ದೇವಸ್ಥಾನವನ್ನು ಪುನರ್‌ ನಿರ್ಮಿಸಲಾಗಿದೆ ಎಂದವರು ತಿಳಿಸಿದರು.

ಫೆ. 6ರಿಂದ 10ರ ತನಕ ಸಂಜೆ ಧಾರ್ಮಿಕ ಸಭೆ ನಡೆಯಲಿದ್ದು, 6ರಂದು
ಶ್ರೀಕ್ಷೇತ್ರ ಒಡಿಯೂರು ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶಾಸಕ ಹರೀಶ್‌ ಪೂಂಜ ಅಧ್ಯಕ್ಷತೆ ವಹಿಸಲಿದ್ದು, ಯು.ಎಸ್‌.ಎ. ನ್ಯೂಜೆರ್ಸಿ ಶ್ರೀಕೃಷ್ಣವೃಂದಾವನದ ಪ್ರಧಾನ ಅರ್ಚಕ ಯೋಗೀಂದ್ರ ಭಟ್‌ ಉಳಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. 7ರಂದು ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ದೇಗುಲದ ಆಡಳಿತ ಮೊಕ್ತೇಸರ ಬಿ.ವಿ. ಸುಂದರ ನೂರಿತ್ತಾಯ ಅಧ್ಯಕ್ಷತೆ ವಹಿಸಲಿದ್ದು, ಕಾಸರಗೋಡು ಮಧೂರು ಉಳಿಯತ್ತಾಯ ವಿಷ್ಣು ಅಸ್ರ ಧಾರ್ಮಿಕ
ಉಪನ್ಯಾಸ ನೀಡಲಿದ್ದಾರೆ.

8ರಂದು ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಕ್ಷೇತ್ರಧರ್ಮಸ್ಥಳದ ಧರ್ಮಾಧಿಕಾರಿ
ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದು, ಬಸವರತ್ನ ರಾಷ್ಟ್ರ ಪ್ರಶಸ್ತಿ
ಪುರಸ್ಕೃತ ರವಿ ಅಲೆವೂರು ವರ್ಕಾಡಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. 9ರಂದು ಮಂಗಳೂರು ಆದಿಚುಂಚನಗಿರಿ ಶಾಖಾ ಮಠದ ಧರ್ಮಪಾಲನಾಥ
ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಂಸದ ನಳಿನ್‌ ಕುಮಾರ್‌ ಕಟೀಲು ಅಧ್ಯಕ್ಷತೆ ವಹಿಸಲಿದ್ದು, ಕಟೀಲು ಶ್ರೀಕ್ಷೇತ್ರದ ಆನುವಂಶೀಯ ಅರ್ಚಕ ವೇ|
ಮೂ| ವಾಸುದೇವ ಆಸ್ರಣ್ಣ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. 10ರಂದು ಬೆಳಗ್ಗೆ ಎಡನೀರು ಶ್ರೀ ಕೇಶವಾನಂದ ಭಾರತೀ ಶ್ರೀಪಾದರ ಮೂಲಕ ಶ್ರೀ ದೇವರಿಗೆ
ಬ್ರಹ್ಮಕಲಶಾಭಿಷೇಕ ನಡೆಯಲಿದೆ.

ಸಂಜೆ ಧರ್ಮಸ್ಥಳ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದು, ಮಂಗಳೂರು ಸೈಂಟ್‌ ಅಲೋಶಿಯಸ್‌ ಕಾಲೇಜಿನ ಉಪನ್ಯಾಸಕ, ಜಾನಪದ ವಿದ್ವಾಂಸ ಗಣೇಶ್‌ ಅಮೀನ್‌ ಸಂಕಮಾರ್‌ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದು ಬಿ.ವಿ. ಸುಂದರ ನೂರಿತ್ತಾಯ ತಿಳಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ ಕೊಪ್ಪದಬೆಟ್ಟು, ಕಾರ್ಯಾಧ್ಯಕ್ಷ ಪ್ರಶಾಂತ್‌ ಪೈ, ಪ್ರ.ಕಾರ್ಯದರ್ಶಿ ಗಣೇಶ್‌ ಪುತ್ತಿಲ ಪೂರಕ ಮಾಹಿತಿ ನೀಡಿದರು. ದೇವಸ್ಥಾನ ಆಡಳಿತ ಸಮಿತಿ ಮತ್ತು ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಕೆ.ಆರ್‌. ಸುಬ್ರಹ್ಮಣ್ಯ ಗೌಡ, ಅರುಣ್‌ ಕುಮಾರ್‌ ಬರೆಂಗಳ, ಮಂಜುನಾಥ ಸಾಲ್ಯಾನ್‌, ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ಶೇಷಪ್ಪ ಸಾಲ್ಯಾನ್‌, ಗುರು ಆರ್‌. ಪ್ರಸಾದ್‌, ಬೆಳ್ತಂಗಡಿ ಎ.ಪಿ.ಎಂ.ಸಿ. ಸದಸ್ಯರಾದ ಜಯಾನಂದ ಕಲ್ಲಾಪು, ರಾಜೇಶ ರೈ ಎನ್ನಡ್ಕ, ಅನಿಲ್‌ ಕುಮಾರ್‌ ದಡ್ಡು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here